ಮುಂಬೈ: 2023ರ ಐಪಿಎಲ್ (IPL) ಹರಾಜಿಗೆ ಬಿಸಿಸಿಐ (BCCI) ಸಿದ್ಧತೆ ಆರಂಭಿಸಿದೆ. ಬೆಂಗಳೂರಿನಲ್ಲಿ (Bengaluru) ಡಿಸೆಂಬರ್ 16 ರಂದು ಹರಾಜು (Auction) ಪ್ರಕ್ರಿಯೆ ನಡೆಸಲು ಪ್ಲಾನ್ ಮಾಡಲಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ.
Advertisement
ಹರಾಜು ಪ್ರಕ್ರಿಯೆ ಒಂದು ದಿನ ನಡೆಯಲಿದ್ದು, ಕೆಲ ಫ್ರಾಂಚೈಸ್‍ಗಳು ಕೈ ಬಿಟ್ಟ ಆಟಗಾರರು ಮತ್ತು ಹೊಸ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಪ್ರತಿ ತಂಡಕ್ಕೆ ಗರಿಷ್ಠ 95 ಕೋಟಿ ರೂ.ವರೆಗೂ ಖರ್ಚು ಮಾಡುವ ಅವಕಾಶವಿದೆ. ಈ ಮೊತ್ತ ಹೆಚ್ಚಾಗುವ ಅಥವಾ ಕಡಿಮೆಯಾಗುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ರೋಹಿತ್‍ಗೆ ನೆಟ್ಸ್‌ನಲ್ಲಿ ಇನ್‍ಸ್ವಿಂಗ್ ಎಸೆದ ಹನ್ನೊಂದರ ಪೋರ
Advertisement
Advertisement
ಮೂಲಗಳ ಪ್ರಕಾರ ಅಂತಿಮ ನಿರ್ಧಾರ ನೂತನ ಐಪಿಎಲ್ ಆಡಳಿತ ಮಂಡಳಿ ಆಯ್ಕೆಗೊಂಡು ಸಭೆ ನಡೆದ ಬಳಿಕ ನಿರ್ಧರಿಸುವ ಸಾಧ್ಯತೆ ಇದೆ. ಅ.18 ರಂದು ಸರ್ವ ಸದಸ್ಯರ ಸಭೆ ಇದ್ದು ಈ ಸಭೆಯಲ್ಲಿ ಮುಂದಿನ ಬಿಸಿಸಿಐ ಅಧ್ಯಕ್ಷ ಮತ್ತು ಐಪಿಎಲ್ ಆಡಳಿತ ಮಂಡಳಿಯ ಆಯ್ಕೆ ನಡೆಯಲಿದೆ. 2023ರ ಐಪಿಎಲ್ ಹರಾಜು ಪ್ರಕ್ರಿಯೆ ನಡೆದು ಬಳಿಕ ಮಾರ್ಚ್ ಅಂತ್ಯದ ವೇಳೆ ಐಪಿಎಲ್ ಆರಂಭವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ