ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ (AB de Villiers) ಇದೀಗ ಹೊಸ ರೋಲ್‍ನಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.
Advertisement
2023ರ ಐಪಿಎಲ್ (IPL) ಮಿನಿ ಹರಾಜಿಗೂ ಮುನ್ನ ಎಬಿಡಿ ಬೆಂಗಳೂರಿಗೆ ಆಗಮಿಸಿ ಫ್ರಾಂಚೈಸ್ ಜೊತೆ ಕಾಣಿಸಿಕೊಂಡಿದ್ದಾರೆ. ನಿನ್ನೆ ಎಬಿಡಿ ಬೆಂಗಳೂರಿಗೆ ಆಗಮಿಸಿ ಫ್ರಾಂಚೈಸ್ ಜೊತೆ ಆಟಗಾರರ ರಿಲೀಸ್ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಎಬಿಡಿ 16ನೇ ಆವೃತ್ತಿ ಐಪಿಎಲ್‍ನಲ್ಲಿ ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಜೋಶುವಾ ಲಿಟಲ್
Advertisement
Advertisement
ಈ ಮೂಲಕ ಆರ್ಸಿಬಿ ತಂಡದೊಂದಿಗಿನ ಪಯಣವನ್ನು ಮತ್ತೆ ಮುಂದುವರಿಸಲು ಎಬಿಡಿ ಮುಂದಾಗಿದ್ದಾರೆ. ಈ ಹಿಂದೆ ಆರ್ಸಿಬಿ ತಂಡದ ಆಟಗಾರನಾಗಿ 2021ರ ವರೆಗೆ ಆಡಿದ್ದರು. ಇದೀಗ ಕೋಚ್ ಆಗಿ ಮತ್ತೆ ತಂಡದೊಂದಿಗೆ ಎಬಿಡಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ನವೆಂಬರ್ ಮಧ್ಯ ಭಾಗದಲ್ಲಿ ಐಪಿಎಲ್ ಮಿನಿ ಹರಾಜು ನಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ಆಫ್ರಿಕಾಗೆ ಸೋಲು – ಚಿಗುರಿಕೊಂಡ ಪಾಕಿಸ್ತಾನದ ಸೆಮಿಫೈನಲ್ ಕನಸು
Advertisement
ಈಗಾಗಲೇ ಐಪಿಎಲ್ ಫ್ರಾಂಚೈಸ್‍ಗಳು ಸಿದ್ಧತೆ ಆರಂಭಿಸಿದೆ. ಇದರೊಂದಿಗೆ ಮಹಿಳಾ ಐಪಿಎಲ್ ಕೂಡ ಈ ವರ್ಷದಿಂದ ಆರಂಭವಾಗುತ್ತಿದ್ದು, ಮಹಿಳಾ ತಂಡಗಳನ್ನು ಇದೀಗ ಇರುವ ಪುರುಷರ ಫ್ರಾಂಚೈಸ್‍ಗಳು ಖರೀದಿ ಮಾಡಲು ಮುಂದಾಗಿವೆ. ಐಪಿಎಲ್ ಆಡಳಿತ ಮಂಡಳಿ ಕೂಡ ಐಪಿಎಲ್ ಫ್ರಾಂಚೈಸ್‍ಗಳಿಗೆ ಮಹಿಳಾ ತಂಡಗಳನ್ನು ಖರೀದಿಸಲು ಮೊದಲ ಅವಕಾಶ ನೀಡಿದೆ. ಇದನ್ನೂ ಓದಿ: ಎಬಿಡಿ ಜೊತೆ ʼಕಾಂತಾರʼದ ರಿಷಬ್ ಶೆಟ್ಟಿ