ಮುಂಬೈ: 15ನೇ ಆವೃತ್ತಿ ಐಪಿಎಲ್ ಹಲವು ವಿಶೇಷತೆಗಳೊಂದಿಗೆ ಮತ್ತೆ ಆರಂಭವಾಗುತ್ತಿದೆ. ಈ ಬಾರಿ ಒಟ್ಟು 10 ತಂಡಗಳನ್ನು ಹತ್ತು ಸಾರಥಿಗಳು ಮುನ್ನಡೆಸಲು ಸಿದ್ಧರಾಗಿದ್ದಾರೆ.
Advertisement
8 ತಂಡಗಳಿದ್ದ ಐಪಿಎಲ್ ಕೂಟಕ್ಕೆ ಹೊಸದಾಗಿ 2 ತಂಡ ಸೇರುವುದರೊಂದಿಗೆ ತಂಡಗಳ ಒಟ್ಟು ಸಂಖ್ಯೆ 10ಕ್ಕೆ ಏರಿದೆ. ಹತ್ತು ತಂಡಗಳ ಪೈಕಿ ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿ ಕೆ.ಎಲ್ ರಾಹುಲ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಮಯಾಂಕ್ ಅರ್ಗವಾಲ್ ಕಾಣಿಸಿಕೊಳ್ಳುವ ಮೂಲಕ ಈ ಬಾರಿ ಇಬ್ಬರು ಕನ್ನಡಿಗರು ಐಪಿಎಲ್ ತಂಡಗಳ ನಾಯಕತ್ವ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮಯಾಂಕ್, ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮೊಟ್ಟಮೊದಲ ಬಾರಿಗೆ ನಾಯಕತ್ವದ ಹೊಣೆ ಹೊತ್ತಿದ್ದಾರೆ. ಇದನ್ನೂ ಓದಿ: ಗೆಳತಿ ಜೊತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್
Advertisement
Advertisement
ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಎಸ್‍ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾದರೆ, 2 ಬಾರಿ ಕಪ್ ಗೆದ್ದಿರುವ ಕೋಲ್ಕತ್ತಾ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕತ್ವದ ಬಲ ಇದೆ. ಇದನ್ನೂ ಓದಿ: RCB ನಾಯಕನಾಗಿ ಫಾಫ್ ಡು ಪ್ಲೆಸಿಸ್ ನೇಮಕ
Advertisement
ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿ ಮೆರೆದಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೇನ್ ವಿಲಿಯಮ್ಸನ್ ನಾಯಕರಾಗಿ ಸಮರ್ಥವಾಗಿ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಡೆಲ್ಲಿ ತಂಡಕ್ಕೆ ರಿಷಬ್ ಪಂತ್ ನಾಯಕತ್ವದ ಶಕ್ತಿ ಇದೆ. ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್
14 ಆವೃತ್ತಿಗಳ ಪೈಕಿ ಈಗಿರುವ 5 ತಂಡಗಳು ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡರೆ ಈ ಹಿಂದಿನ ಆವೃತ್ತಿಗಳಿಂದಲೂ ಇರುವ ಆರ್ಸಿಬಿ, ಪಂಜಾಬ್, ಡೆಲ್ಲಿ ತಂಡಗಳು ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರಿಲ್ಲ. ಈ ಬಾರಿ ಆಟಗಾರರ ಮೆಗಾ ಹರಾಜಿನ ಬಳಿಕ ತಂಡ ರಚನೆಯಾಗಿದ್ದು, ಎಲ್ಲಾ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಈ ಬಾರಿ 10 ತಂಡಗಳ ಮಧ್ಯೆ 15ನೇ ಅವೃತ್ತಿಯ ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಕಾದಾಟ ನಡೆಯಲಿದೆ.