ನವದೆಹಲಿ: ಮುಂಬೈ ತಂಡದ ಯುವ ಆಟಗಾರ ತಿಲಕ್ ವರ್ಮಾ ಹೊಡೆದ ಭರ್ಜರಿ ಹೊಡೆತವೊಂದು ಕ್ಯಾಮೆರಾಮ್ಯಾನ್ ತಲೆಗೆ ಬಡಿದ ಪ್ರಸಂಗ ಇಂದು ಐಪಿಎಲ್‍ನಲ್ಲಿ ನಡೆಯಿತು.
ಅದೃಷ್ಟವಶಾತ್ ಚೆಂಡು ಕ್ಯಾಮೆರಾಮ್ಯಾನ್ ತಲೆಗೆ ಬಡಿದರೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಕೇವಲ 33 ಎಸೆತಗಳಲ್ಲಿ 61 ರನ್ ಗಳಿಸಿದ ತಿಲಕ್ ವರ್ಮಾ, 12ನೇ ಓವರ್‌ನಲ್ಲಿ ತಮ್ಮ ಅದ್ಭುತ ಸಿಕ್ಸರ್‌ನೊಂದಿಗೆ ಕ್ಯಾಮೆರಾಮ್ಯಾನ್‍ಗೆ ಶಾಕ್ ನೀಡಿದರು.
— Diving Slip (@SlipDiving) April 2, 2022
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡವು ಮುಂಬೈ ವಿರುದ್ಧ 194 ರನ್‍ಗಳ ಗುರಿ ನೀಡಿತ್ತು. ಆದರೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ 20 ಓವರ್‌ಗಳಲ್ಲಿ 170 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಟಾರ್ ಓಪನರ್ ಜೋಸ್ ಬಟ್ಲರ್ ಅದ್ಭುತ ಶತಕ ಗಳಿಸಿ ಮುಂಬೈ ವಿರುದ್ಧ ರಾಜಸ್ಥಾನ ದೊಡ್ಡ ಮೊತ್ತ ದಾಖಲಿಸಲು ನೆರವಾದರು. ಅವರು 11 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 100 ರನ್ ಸಿಡಿಸಿದರು. ಮುಂಬೈ ವಿರುದ್ಧ ಜಯಗಳಿಸಿದ ನಂತರ, ರಾಜಸ್ಥಾನವು ಐಪಿಎಲ್ 2022ರ ಅಂಕಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು.