ಮುಂಬೈ: 15ನೇ ಆವೃತ್ತಿ ಐಪಿಎಲ್‍ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಈ ಬಾರಿ ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿ ಆಟಗಾರರ ಆಟವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
Advertisement
ಈವರೆಗಿನ ಐಪಿಎಲ್‍ನಲ್ಲಿ ಕೆಲ ಆಟಗಾರರು ಜೊತೆಯಾಗಿ ಆಡಿ ತಂಡಕ್ಕೆ ಅದೆಷ್ಟೋ ಗೆಲುವನ್ನು ತಂದುಕೊಟ್ಟಿರುವ ಪಂದ್ಯಗಳಿವೆ. ಅದರಲ್ಲೂ ಕೆಲ ಸ್ಟಾರ್ ಜೋಡಿ ಅಭಿಮಾನಿಗಳನ್ನು ರಂಜಿಸುತ್ತಿತ್ತು. ಆದರೆ ಈ ಬಾರಿ ಪ್ರಮುಖ ಮೂರು ಸ್ಟಾರ್ ಜೋಡಿಗಳು ಬೇರ್ಪಟ್ಟಿದೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್
Advertisement
Advertisement
ಐಪಿಎಲ್‍ನಲ್ಲಿ ಆಟಗಾರರ ನಡುವೆ ಉತ್ತಮ ಸಂಬಂಧ ವಿರುತ್ತದೆ. ಹಲವು ದೇಶದ ಆಟಗಾರರು ಒಂದೇ ತಂಡಕ್ಕಾಗಿ ಆಡುತ್ತಾರೆ. ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಇವರಿಬ್ಬರು ಜೊತೆಯಾಟ ಆರಂಭಿಸಿದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು. ಈ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದರು. ಇವರಿಬ್ಬರು ಐಪಿಎಲ್‍ನಲ್ಲಿ ಎರಡು ಬಾರಿ 200 ರನ್‍ಗಳ ಜೊತೆಯಾಟವಾಡಿ ಮಿಂಚಿದ್ದರು. ಆದರೆ ಈ ಬಾರಿ ಕೊಹ್ಲಿ ಜೊತೆ ಎಬಿಡಿ ಕಾಣಿಸುವುದಿಲ್ಲ. ಈಗಾಗಲೇ ಎಬಿಡಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವುದರಿಂದಾಗಿ ಆರ್ಸಿಬಿ ತಂಡದಲ್ಲಿ ಎಬಿಡಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಕೊಹ್ಲಿ ಮಾತ್ರ ಆರ್ಸಿಬಿ ತಂಡದಲ್ಲಿದ್ದಾರೆ.
Advertisement
ಎಬಿಡಿ, ಕೊಹ್ಲಿಯಂತೆ ಉತ್ತಮ ಸಂಬಂಧ ಹೊಂದಿರುವ ಇನ್ನೊಂದು ಸ್ಟಾರ್ ಜೋಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಜೋಡಿ ಇವರಿಬ್ಬರು ಸಿಎಸ್‍ಕೆ ತಂಡದ ಶಕ್ತಿಯಾಗಿದ್ದರು. ಅದರಲ್ಲೂ ರೈನಾ ಸಿಎಸ್‍ಕೆ ತಂಡದ ರನ್ ಮೆಷಿನ್ ಆದರೆ, ಧೋನಿ ತಂಡದ ನಾಯಕನಾಗಿ ಜೊತೆಯಾಗಿರುತ್ತಿದ್ದರು. ಮಿಡಲ್ ಆರ್ಡರ್‌ನಲ್ಲಿ ಅಬ್ಬರಿಸುತ್ತಿದ್ದ ಈ ಜೋಡಿಯ ಆಟ ಈ ಬಾರಿ ಅಭಿಮಾನಿಗಳಿಗೆ ಕಣ್ತುಂಬಿಕೊಳ್ಳಲು ಸಿಗುವುದಿಲ್ಲ. ಧೋನಿ ಸಿಎಸ್‍ಕೆ ತಂಡದಲ್ಲಿದ್ದರೂ ಕೂಡ, ರೈನಾ ತಂಡದಲ್ಲಿಲ್ಲ. ಹಾಗಾಗಿ ಈ ಸ್ಟಾರ್ ಜೋಡಿ ಇನ್ಮುಂದೆ ಸಿಎಸ್‍ಕೆ ತಂಡದಲ್ಲಿ ಜೊತೆಯಾಗಿ ಕಾಣಿಸುವುದು ಕನಸಿನ ಮಾತಾಗಿದೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ
ಈ ಎರಡು ಜೋಡಿಗಳ ಮಧ್ಯೆ ಗಮನ ಸೆಳೆದ ಇನ್ನೊಂದು ಜೋಡಿ ಕನ್ನಡಿಗರ ಜೋಡಿ. ಹೌದು ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್‌ವಾಲ್ ಕಳೆದ ಎರಡು ವರ್ಷ ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಆಡುವ ಜೊತೆಯಾಟ ನೋಡುವುದೇ ಹಬ್ಬದಂತಿತ್ತು. ಕರ್ನಾಟಕ ತಂಡದಿಂದ ಹಿಡಿದು ಆರಂಭವಾಗಿದ್ದ ಈ ಜೋಡಿಯ ಆಟ ಟೀಂ ಇಂಡಿಯಾ ಮತ್ತು ಐಪಿಎಲ್‍ನಲ್ಲೂ ಅಭಿಮಾನಿಗಳು ನೋಡಿದ್ದರು. ಆದರೆ ಈ ಬಾರಿ ಈ ಜೋಡಿ ಬೇರೆ, ಬೇರೆಯಾಗಿದೆ. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾದರೆ, ಮಯಾಂಕ್ ಪಂಜಾಬ್ ತಂಡದ ನಾಯಕರಾಗಿ ಪರಸ್ಪರ ಎದುರುಬದುರಾಗಲಿದ್ದಾರೆ.