ಮುಂಬೈ: ಹೈದರಾಬಾದ್‍ಗೆ ಗೆಲುವು ದಕ್ಕಿಸಲೇ ಬೇಕು ಎಂಬಂತೆ ಬ್ಯಾಟ್‍ಬೀಸಿದ ರಾಹುಲ್ ತ್ರಿಪಾಠಿ ಮತ್ತು ಮಾರ್ಕ್ರಾಮ್ ಜೋಡಿಯ ಭರ್ಜರಿ ಆಟಕ್ಕೆ ಕೋಲ್ಕತ್ತಾ ಸೋಲೊಪ್ಪಿಕೊಂಡಿದೆ. ಹೈದರಾಬಾದ್ ತಂಡ ಇನ್ನೂ 17 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಜಯ ಸಾಧಿಸಿದೆ.
Advertisement
ಗೆಲ್ಲಲು 176 ರನ್ ಟಾರ್ಗೆಟ್ ಪಡೆದ ಹೈದರಾಬಾದ್ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್‍ರನ್ನು 39 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತು. ಬಳಿಕ ಜೊತೆಯಾದ ರಾಹುಲ್ ತ್ರಿಪಾಠಿ ಮತ್ತು ಮಾರ್ಕ್ರಾಮ್ ಹೈದರಾಬಾದ್‍ಗೆ ಗೆಲುವಿನ ಆಸೆ ಚಿಗುರಿಸಿದರು. ಈ ಜೋಡಿ 3ನೇ ವಿಕೆಟ್‍ಗೆ 94 ರನ್ (54 ಎಸೆತ) ಒಟ್ಟುಗೂಡಿಸಿ ಮಿಂಚಿತು. ತ್ರಿಪಾಠಿ 71 ರನ್ (37 ಎಸೆತ, 4 ಬೌಂಡರಿ, 6 ಸಿಕ್ಸ್) ಚಚ್ಚಿ ವಿಕೆಟ್ ಒಪ್ಪಿಸಿದರು. ಆದರೆ ಮಾರ್ಕ್ರಾಮ್ ಬ್ಯಾಟಿಂಗ್ ವೈಭವ ತಂಡದ ಗೆಲುವಿನ ವರೆಗೆ ನಿಲ್ಲಲಿಲ್ಲ. ಅಂತಿಮವಾಗಿ ಅಜೇಯ 68 ರನ್ (37 ಎಸೆತ, 6 ಬೌಂಡರಿ, 4 ಸಿಕ್ಸರ್) ಸಿಡಿಸಿ ತಂಡಕ್ಕೆ 7 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು.
Advertisement
Advertisement
ಟಾಸ್ ಸೋತ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಕೋಲ್ಕತ್ತಾ ಪರ ಅಗ್ರ ಕ್ರಮಾಂಕದ ಯಾವೊಬ್ಬ ಆಟಗಾರ ಕೂಡ ಕೋಲ್ಕತ್ತಾಗೆ ಆಸರೆಯಾಗಲಿಲ್ಲ. ಪರಿಣಾಮ 70 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಕೋಲ್ಕತ್ತಾ ಸಂಕಷ್ಟಕ್ಕೆ ಸಿಲುಕಿತು.
Advertisement
ರಾಣಾ, ರೆಸೆಲ್ ಆರ್ಭಟ
ನಂತರ ಒಂದಾದ ನಿತೇಶ್ ರಾಣಾ ಮತ್ತು ಆಂಡ್ರೆ ರೆಸೆಲ್ ಹೈದರಾಬಾದ್ ಬೌಲರ್‌ಗಳ ಬೆಂಡೆತ್ತಿದರು. ರಾಣಾ 54 ರನ್ (36 ಎಸೆತ, 6 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರೆ ರೆಸೆಲ್ ಕೊನೆಯ ಎಸೆತದವರೆಗೆ ಬೌಂಡರಿ, ಸಿಕ್ಸರ್ ಚಚ್ಚಿ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು. ಅಂತಿಮವಾಗಿ ರೆಸೆಲ್ ಅಜೇಯ 49 ರನ್ (25 ಎಸೆತ, 4 ಬೌಂಡರಿ, 4 ಸಿಕ್ಸ್) ಬಾರಿಸಿ ಮಿಂಚಿದರು. ಅಂತಿಮವಾಗಿ ಕೋಲ್ಕತ್ತಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಪೇರಿಸಿತು.
ಹೈದರಾಬಾದ್ ಪರ ಟಿ.ನಟರಾಜನ್ 3 ಮತ್ತು ಉಮ್ರಾನ್ ಮಲಿಕ್ 2 ವಿಕೆಟ್ ಕಿತ್ತರು. ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸನ್ ಮತ್ತು ಜಗದೀಶ್ ಸುಜೀತ್ ತಲಾ 1 ವಿಕೆಟ್ ಪಡೆದರು.