ಮುಂಬೈ: ಬೌಲಿಂಗ್‍ನಲ್ಲಿ ಉಮ್ರಾನ್ ಮಲಿಕ್ ಮತ್ತು ಭುವನೇಶ್ವರ್ ಕುಮಾರ್ ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಹೈದರಾಬಾದ್ ತಂಡ ಪಂಜಾಬ್ ವಿರುದ್ಧ 7 ವಿಕೆಟ್‍ಗಳ ಜಯ ಸಾಧಿಸಿದೆ.
Advertisement
ಹೈದರಾಬಾದ್ ಪರ ಮಾಕ್ರಾರ್ಮ್ ಅಜೇಯ 41 ರನ್ (27 ಎಸೆತ, 4 ಬೌಂಡರಿ, 1 ಸಿಕ್ಸ್) ಮತ್ತು ನಿಕೋಲಸ್ ಪೂರನ್ 35 ರನ್ (30 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಇನ್ನೂ 7 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಜಯ ಸಾಧಿಸಿತು.
Advertisement
Advertisement
ಗೆಲ್ಲಲು 152 ರನ್ ಗುರಿ ಪಡೆದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕೇನ್ ವಿಲಿಯಮ್ಸನ್ 3 ರನ್‍ಗೆ ಸುಸ್ತಾದರು. ಅಭಿಷೇಕ್ ಶರ್ಮಾ 31 ರನ್ (25 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಾಹುಲ್ ತ್ರಿಪಾಠಿ 34 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸ್ ) ಸಿಡಿಸಿ ಕೆಲಕಾಲ ಸ್ಫೋಟಕ ಆಟಕ್ಕೆ ಸಾಕ್ಷಿಯಾದರು.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡಕ್ಕೆ ಹೈದರಾಬಾದ್ ಬೌಲರ್‌ಗಳು ಆರಂಭದಲ್ಲೇ ವಿಕೆಟ್ ಬೇಟೆ ಆರಂಭಿಸಿದರು. ಕೇವಲ 38 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಲಿಯಾಮ್ ಲಿವಿಂಗ್ಸ್ಟೋನ್ ಎಂದಿನಂತೆ ಬೌಂಡರಿ, ಸಿಕ್ಸರ್‌ಗಳ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು.
ಇತ್ತ ವಿಕೆಟ್ ಉರುಳುತ್ತಿದ್ದರೂ ಲಿವಿಂಗ್ಸ್ಟೋನ್ ಮಾತ್ರ ತಮ್ಮ ಬ್ಯಾಟ್ ಇರುವುದು ರನ್ ಹೊಡೆಯಲು ಎಂಬಂತೆ ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಟ್ಟಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಾರೂಖ್ ಖಾನ್ 26 ರನ್ (28 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೊದಲು ಈ ಜೋಡಿ 5ನೇ ವಿಕೆಟ್‍ಗೆ 71 ರನ್ (49 ಎಸೆತ) ಜೊತೆಯಾಟವಾಡಿ ಮಿಂಚಿತು. ಆ ಬಳಿಕ ಕೆಲ ಕಾಲ ಸ್ಫೋಟಿಸಿದ ಲಿವಿಂಗ್ಸ್ಟೋನ್ 60 ರನ್ (33 ಎಸೆತ, 5 ಬೌಂಡರಿ, 4 ಸಿಕ್ಸ್) ಬಾರಿಸಿ ಔಟ್ ಆದರು.
ನಂತರ ದಿಢೀರ್ ಕುಸಿತ ಕಂಡ ಪಂಜಾಬ್ 20 ಓವರ್‌ಗಳಲ್ಲಿ 151 ರನ್‍ಗಳಿಗೆ ಆಲೌಟ್ ಆಯಿತು. ಹೈದರಾಬಾದ್ ಪರ ಬೌಲಿಂಗ್‍ನಲ್ಲಿ ಮಿಂಚಿದ ಉಮ್ರಾನ್ ಮಲಿಕ್ 4 ಮತ್ತು ಭುವನೇಶ್ವರ್ ಕುಮಾರ್ 3 ವಿಕೆಟ್ ಕಿತ್ತು ಪಂಜಾಬ್ ತಂಡಕ್ಕೆ ಕಡಿವಾಣ ಹಾಕಿದರು.