ಪುಣೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿ ಘರ್ಜನೆಗೆ ಮಂಕಾದ ಮುಂಬೈ ಇಂಡಿಯನ್ಸ್ ಸೋಲೊಪ್ಪಿಕೊಂಡಿದೆ.
Advertisement
ಮುಂಬೈ ನೀಡಿದ 152 ರನ್‍ಗಳ ಸಾಧರಣ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ನಾಯಕ ಪಾಫ್ ಡು ಪ್ಲೆಸಿಸ್ ಅವರನ್ನು 16 ರನ್ (24 ಎಸೆತ, 1 ಬೌಂಡರಿ)ಗಳಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಜೊತೆಯಾದ ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸಿ 2ನೇ ವಿಕೆಟ್‍ಗೆ 80 ರನ್ (52 ಎಸೆತ)ಗಳ ಜೊತೆಯಾಟವಾಡಿದರು. ಆರಂಭದಿಂದಲೇ ಸಿಕ್ಸರ್‌ಗಳನ್ನು ಸಿಡಿಸುತ್ತ ಅಬ್ಬರದ ಆಟಕ್ಕೆ ಮುಂದಾದ ಅನುಜ್ ರಾವತ್ 66 ರನ್ (47 ಎಸೆತ, 2 ಬೌಂಡರಿ, 6 ಸಿಕ್ಸ್) ಸಿಡಿಸಿ ರನೌಟ್ ಬಲೆಗೆ ಬಿದ್ದರು. ವಿರಾಟ್ ಕೊಹ್ಲಿ 48 ರನ್ (36 ಎಸೆತ, 5 ಬೌಂಡರಿ) ಸಿಡಿಸಿ ಗೆಲುವಿನಂಚಿನಲ್ಲಿ ವಿಕೆಟ್ ಕೈ ಚೆಲ್ಲಿಕೊಂಡರು. ಅಂತಿಮವಾಗಿ ದಿನೇಶ್ ಕಾರ್ತಿಕ್ ಅಜೇಯ 7 ರನ್ ಮತ್ತು ಮ್ಯಾಕ್ಸ್‌ವೆಲ್ 8 ರನ್ 2 ಬೌಂಡರಿ ಸಿಡಿಸಿ 18. 3 ಓವರ್‌ಗಳ ಅಂತ್ಯಕ್ಕೆ 152 ರನ್ ಬಾರಿಸಿ 7 ವಿಕೆಟ್‌ಗಳ ಅಂತರದ ಗೆಲುವು ತಂದುಕೊಟ್ಟರು.
Advertisement
Advertisement
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್‌ಗೆ ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ ಭರ್ತಿ 50 ರನ್ (38 ಎಸೆತಗಳ ಜೊತೆಯಾಟವಾಡಿತು. ರೋಹಿತ್ 26 ರನ್ (15 ಎಸೆತ, 4 ಬೌಂಡರಿ, 1 ಸಿಕ್ಸ್) ಮತ್ತು ಕಿಶನ್ 26 ರನ್ (28 ಎಸೆತ, 3 ಬೌಂಡರಿ) ಸಿಡಿಸಿ ಔಟ್ ಆದರು.
Advertisement
ಆ ಬಳಿಕ ಮುಂಬೈ ಇಂಡಿಯನ್ಸ್ ತಂಡ ಏಕಾಏಕಿ ಕುಸಿತಕ್ಕೊಳಗಾಯಿತು. ತಿಲಕ್ ವರ್ಮಾ ಮತ್ತು ಪೋಲಾರ್ಡ್ ಶೂನ್ಯ ಸುತ್ತಿದ್ದರು. ಈ ನಡುವೆ ಸೂರ್ಯಕುಮಾರ್ ಯಾದವ್ ಕೆಲ ಕ್ರಮಾಂಕದಲ್ಲಿ ಜಯದೇವ್ ಉನದ್ಕತ್ ಜೊತೆ ಸೇರಿ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಆರ್‌ಸಿಬಿ ಬೌಲರ್‌ಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಯಾದವ್ ಕೊನೆಯಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಗಮನಸೆಳೆದರು. ಯಾದವ್ ಅಜೇಯ 68 ರನ್ (37 ಎಸೆತ, 5 ಬೌಂಡರಿ, 6 ಸಿಕ್ಸ್) ಮತ್ತು ಉನದ್ಕತ್ 13 ರನ್ (14 ಎಸೆತ, 1 ಬೌಂಡರಿ) ಸಿಡಿಸಿ ಮುಂಬೈಗೆ ನೆರವಾದರು. ಈ ಜೋಡಿ 7ನೇ ವಿಕೆಟ್‍ಗೆ 72 ರನ್ (41 ಎಸೆತ)ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾಯಿತು.
ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 151 ರನ್ ಪೇರಿಸಿತು. ಬೆಂಗಳೂರು ಪರ ವನಿಂದು ಹಸರಂಗ ಡಿ ಸಿಲ್ವ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಿತ್ತು ಮುಂಬೈಗೆ ಬ್ರೇಕ್ ಹಾಕಿದರು.