ಮುಂಬೈ: ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ರಿಂಕು ಸಿಂಗ್ ತಮ್ಮ ಏಕಾಂಗಿ ಹೋರಾಟದಿಂದ ಇನ್ನೇನು ತಂಡಕ್ಕೆ ಗೆಲುವು ತಂದು ಕೊಟ್ಟರು ಎನ್ನುವಷ್ಟರಲ್ಲಿ ವಿಕೆಟ್ ಕೈಜೆಲ್ಲಿಕೊಂಡರು. ಇದರೊಂದಿಗೆ ಗೆಲುವಿನ ಹೊಸ್ತಿಲಲ್ಲಿದ್ದ ಕೆಕೆಆರ್ ವಿರೋಚಿತ 2 ರನ್‍ಗಳಿಂದ ಸೋಲುಕಂಡಿತು.
Advertisement
ಈ ಸೋಲಿನಲ್ಲೂ ಕೂಡ ಕೆಕೆಆರ್ ತಂಡದ ಗೆಲುವಿಗಾಗಿ ಹೋರಾಡಿದ ರಿಂಕು ಸಿಂಗ್ ಎಲ್ಲರ ಮನಗೆದ್ದರು. 144 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ವೇಳೆ ಬ್ಯಾಟಿಂಗ್‍ಗೆ ಆಗಮಿಸಿದ ರಿಂಕು ಸಿಂಗ್ ಮುಂದೆ 24 ಎಸೆತಗಳಲ್ಲಿ 67 ರನ್ ಗುರಿ ಇತ್ತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ, ಇನ್ನೊಂದೆಡೆ ರಿಂಕು ಸಿಂಗ್ ಅಬ್ಬರಿಸಲು ಆರಂಭಿಸಿದರು. ಇದನ್ನೂ ಓದಿ: RCBಗೆ ಇಂದು ಅಗ್ನಿಪರೀಕ್ಷೆ – ಗೆದ್ದರಷ್ಟೇ ಪ್ಲೆ-ಆಫ್ ಕನಸು ಜೀವಂತ
Advertisement
Advertisement
ಲಕ್ನೋ ಬೌಲರ್‌ಗಳ ಮೇಲೆ ಏಕಾಏಕಿ ಮುಗಿಬಿದ್ದ ರಿಂಕು ಸಿಂಗ್ ತಂಡದ ಗೆಲುವು ಖಚಿತ ಪಡಿಸಲು ಮುಂದಾದರು. 19 ಓವರ್‌ನಲ್ಲಿ ಕೋಲ್ಕತ್ತಾಗೆ 17 ರನ್ ಹರಿದುಬಂತು. ಕೊನೆಯ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 21 ರನ್ ಬೇಕಾಗಿತ್ತು. ಸ್ಟೋಯಿನಿಸ್ ಎಸೆದ ಮೊದಲ ಎಸೆತವನ್ನೇ ರಿಂಕು ಸಿಂಗ್ ಬೌಂಡರಿಗಟ್ಟಿದರು, ಆ ಬಳಿಕ ಸತತ ಎರಡು ಎಸೆತಗಳನ್ನು ಸಿಕ್ಸ್ ಬಾರಿಸಿದರು. 4 ನೇ ಎಸೆತದಲ್ಲಿ 2 ರನ್ ಬಂತು. ಆ ಬಳಿಕ ಎರಡು ಎಸೆತಗಳಲ್ಲಿ ಕೆಕೆಆರ್ ಗೆಲುವಿಗೆ 3 ರನ್ ಬೇಕಾಗಿತ್ತು. ಈ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ರಿಂಕು ಸಿಂಗ್ 5ನೇ ಎಸೆತದಲ್ಲಿ ಲೂಯಿಸ್ ಹಿಡಿದ ಅದ್ಭುತ ಕ್ಯಾಚ್‍ಗೆ ವಿಕೆಟ್ ಕೈಚೆಲ್ಲಿಕೊಂಡರು. ಈ ಮೂಲಕ ರಿಂಕ್ ಸಿಂಗ್ 40 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಹೋರಾಟದ ಇನ್ನಿಂಗ್ಸ್ ಕೊನೆಗೊಂಡಿತು. ಇದನ್ನೂ ಓದಿ: ಸ್ಟೋಯಿನಿಸ್ ಸ್ಟನ್ ಬೌಲಿಂಗ್, ಡಿ ಕಾಕ್ ದರ್ಬಾರ್ – ಪ್ಲೇ ಆಫ್‍ಗೆ ಎರಡನೇ ತಂಡವಾಗಿ ಎಂಟ್ರಿಕೊಟ್ಟ ಲಕ್ನೋ
Advertisement
Sports is so cruel sometimes. Gotta feel really sad for Rinku Singh. "I Tried so hard and got so far but in the end it doesn't even matter"
Chin up champ. u got the talent. Team India calling soon! ????????❤️ pic.twitter.com/J7XtoHhGf3
— Akshat (@AkshatOM10) May 18, 2022
ಇತ್ತ 1 ಎಸೆತದಲ್ಲಿ 3 ರನ್‍ಗಳ ಗುರಿ ಪಡೆದ ಕೋಲ್ಕತ್ತಾ ತಂಡ ಗೆಲುವು ದಾಖಲಿಸಲಾಗದೆ 2 ರನ್‍ಗಳಿಂದ ವಿರೋಚಿತ ಸೋಲು ಕಂಡಿತು. ಈ ಸೋಲು ಕಂಡ ರಿಂಗ್ ಸಿಂಗ್ ಮೈದಾನದಲ್ಲಿ ಕಣ್ಣೀರಿಟ್ಟರು. ಇದೀಗ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿಂಕು ಸಿಂಗ್ ಬ್ಯಾಟಿಂಗ್ ಪರಾಕ್ರಮವನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.