ಮುಂಬೈ: 15ನೇ ಆವೃತ್ತಿಯ ಐಪಿಎಲ್‍ಗೆ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ಇದೀಗ 8 ತಂಡಗಳು ತಲಾ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿದ್ದು, ಹಾಗಾಗಿ ಎಲ್ಲಾ ಫ್ರಾಂಚೈಸ್‍ಗಳು ಕೂಡ ಲೆಕ್ಕಾಚಾರದೊಂದಿಗೆ ಹೆಜ್ಜೆ ಇಡುತ್ತಿದೆ.
Advertisement
15ನೇ ಆವೃತ್ತಿಯ ಐಪಿಎಲ್‍ನಲ್ಲಿ 10 ತಂಡಗಳು ಭಾಗವಹಿಸುತ್ತಿದ್ದು ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ ಲಕ್ನೋ ಮತ್ತು ಹೈದರಾಬಾದ್ ತಂಡಗಳು ಮುಂದಿನ ಆವೃತ್ತಿಯಲ್ಲಿ ಕಣಕ್ಕಿಳಿಯಲಿದೆ. ಹಾಗಾಗಿ ಈ ವರ್ಷ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದ್ದು, ಈಗ ಇರುವ 8 ತಂಡಗಳು 4 ಆಟಗಾರರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ಹರಾಜಿಗೆ ಬಿಟ್ಟುಕೊಡುವಂತೆ ಸೂಚಿಸಿದೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಧೋನಿ CSK ಪರ ಆಡುವುದು ಕನ್ಫರ್ಮ್ – ರೈನಾ ಡೌಟ್?
Advertisement
Advertisement
ಬಿಸಿಸಿಐ ಸೂಚನೆ ಮೇರೆಗೆ ಇದೀಗ ಫ್ರಾಂಚೈಸ್‍ಗಳು ಉಳಿಸಿಕೊಳ್ಳಬೇಕಾದ ಆಟಗಾರರ ಬಗ್ಗೆ ತಲೆಕೆಡಿಸಿಕೊಂಡಿದೆ. ಇದೀಗ ಒಂದು ಲೆಕ್ಕಾಚಾರದ ಪ್ರಕಾರ ಫ್ರಾಂಚೈಸಿಗಳು ಈ ಆಟಗಾರರನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ ಆ ಆಟಗಾರರ ಸಾಂಭಾವ್ಯ ಪಟ್ಟಿ ಈರೀತಿ ಇದೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್
Advertisement
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಗ್ಲೇನ್ ಮ್ಯಾಕ್ಸ್‌ವೆಲ್, ಯಜುವೇಂದ್ರ ಚಹಲ್
ಚೈನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯ್ವಾಡ್, ಮೊಯಿನ್ ಅಲಿ. ಇದನ್ನೂ ಓದಿ: 4 ವರ್ಷದಿಂದಲೂ ಒಂದೇ ವಾಟ್ಸಪ್ ಡಿಪಿ – ಶ್ರೇಯಸ್ ಅಯ್ಯರ್ ತಂದೆಯ ಕನಸು ಕೊನೆಗೂ ನನಸು
ಡೆಲ್ಲಿ ಕ್ಯಾಪಿಟಲ್ಸ್
ರಿಷಭ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಎನ್ರಿಕ್ ನೊರ್ಕಿಯ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶಾನ್, ಕೀರನ್ ಪೊಲಾರ್ಡ್. ಇದನ್ನೂ ಓದಿ: ಅಕ್ಷರ್ ಪಟೇಲ್, ಅಶ್ವಿನ್ ಸ್ಪಿನ್ ಜಾದೂ – ಭಾರತಕ್ಕೆ ಅಲ್ಪ ಮುನ್ನಡೆ
ರಾಜಸ್ಥಾನ್ ರಾಯಲ್ಸ್
ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಚೇತನ್ ಸಕಾರಿಯಾ, ಜೋಫ್ರ ಆರ್ಚರ್
ಕೋಲ್ಕತ್ತಾ ನೈಟ್ ರೈಡರ್ಸ್
ಆಂಡ್ರೆ ರೆಸೆಲ್, ಸುನೀಲ್ ನರೈನ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್. ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆಯ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್
ಸನ್‍ರೈಸರ್ಸ್ ಹೈದರಾಬಾದ್
ಕೇನ್ ವಿಲಿಯಮ್ಸನ್, ರಶೀದ್ ಖಾನ್
ಪಂಜಾಬ್ ಕಿಂಗ್ಸ್
ಮಾಯಾಂಕ್ ಅರ್ಗವಾಲ್, ಮೊಹಮ್ಮದ್ ಶಮಿ, ಶಾರೂಖ್ ಖಾನ್.