ಮುಂಬೈ: ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪರಿಸರ ಜಾಗೃತಿಗಾಗಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
Advertisement
ಪ್ರತಿ ವರ್ಷ ಆರ್‌ಸಿಬಿ ತಂಡ ಟೂರ್ನಿಯ 1 ಪಂದ್ಯದಲ್ಲಿ ಹಸಿರು ಜೆರ್ಸಿತೊಟ್ಟು ಪರಿಸರ ರಕ್ಷಣೆ ಕುರಿತಾಗಿ ವಿಶೇಷ ಅರಿವನ್ನು ಮೂಡಿಸುತ್ತಿತ್ತು. ಈ ಬಾರಿಯೂ ಕೂಡ ಹಸಿರು ಬಣ್ಣದ ಜೆರ್ಸಿ ತೊಟ್ಟು ನಾಳೆ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಆಡಳಿದೆ. ಈಗಾಗಲೇ ಆಟಗಾರರು ಹಸಿರು ಬಣ್ಣದ ಜೆರ್ಸಿ ತೊಟ್ಟು ಕಾಣಿಸಿಕೊಳ್ಳುವ ವೀಡಿಯೋ ಆರ್‌ಸಿಬಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್
Advertisement
Advertisement
ಕಳೆದ ವರ್ಷ ಆರ್‌ಸಿಬಿ ತಂಡ ಹಸಿರು ಬಣ್ಣದ ಜೆರ್ಸಿಯ ಬದಲು ಪಿಪಿಇ ಕಿಟ್‍ನಂಥ ತಿಳಿ ನೀಲಿ ಬಣ್ಣದ ಜೆರ್ಸಿಯೊಂದಿಗೆ ಕೆಕೆಆರ್ ವಿರುದ್ಧ ಕಣ್ಣಕ್ಕಿಳಿದು ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಿತ್ತು. ಇದಲ್ಲದೆ ಪಂದ್ಯದ ಬಳಿಕ ಎಲ್ಲಾ ಆಟಗಾರರ ಜೆರ್ಸಿಯನ್ನು ಹರಾಜು ಹಾಕಲಾಗಿತ್ತು. ಇದರಿಂದ ಬಂದ ಹಣವನ್ನು ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಆರ್‌ಸಿಬಿ ಫ್ರಾಂಚೈಸ್ ಮುಂದಾಗಿತ್ತು. ಇದನ್ನೂ ಓದಿ: ಐಪಿಎಲ್‍ನಲ್ಲಿ ವೇಗಿಗಳ ಮಿಂಚಿನ ಎಸೆತಗಳ ದಾಖಲೆ
Advertisement
ಇದೀಗ 15ನೇ ಆವೃತ್ತಿ ಐಪಿಎಲ್‍ನಲ್ಲಿ ಸೋಲು ಗೆಲುವಿನೊಂದಿಗೆ ಮುನ್ನುಗ್ಗಿ ಆರ್‌ಸಿಬಿ ತಂಡ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈಗಾಗಲೇ 11 ಪಂದ್ಯಗಳಿಂದ 6 ಜಯ 5 ಸೋಲು ಕಂಡು ಒಟ್ಟು 12 ಅಂಕ ಸಂಪಾದಿಸಿದ್ದು, ಇನ್ನೂಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್‍ಗೆ ಏರುವ ನಿರೀಕ್ಷೆಯಲ್ಲಿದೆ.
It’s time for our Go Green Game, 12th Man Army, and we couldn’t be more excited! ????????????
Are you ready to #GoGreen and cheer for #RCB as we take on #SRH this Sunday at 3:30 PM IST? ????????#PlayBold #WeAreChallengers #IPL2022 #Mission2022 #RCB #ನಮ್ಮRCB #Reels #ForPlanetEarth pic.twitter.com/ukcCAVHwxl
— Royal Challengers Bangalore (@RCBTweets) May 7, 2022