ಪುಣೆ: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 61 ರನ್‌ಗಳಿಂದ ಗೆದ್ದುಕೊಳ್ಳುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಗೆಲ್ಲಲು 211 ರನ್‌ಗಳಿಸಬೇಕಿದ್ದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
Advertisement
ಪ್ರಸಿದ್ಧ್ ಕೃಷ್ಣ ಆರಂಭದಲ್ಲೇ ಆಘಾತ ನೀಡಿದರೆ ನಂತರ ಚಹಲ್ ಹೈದರಾಬಾದ್‌ಗೆ ಶಾಕ್ ನೀಡಿದರು. 9 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಎಸ್‌ಆರ್‌ಎಚ್ 37 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಾಗಲೇ ಸೋಲು ಖಚಿತ ಎನ್ನುವುದು ನಿಶ್ಚಯವಾಯಿತು.
Advertisement
ನಾಯಕ ಕೇನ್ ವಿಲಿಯಮ್ಸನ್ 2 ರನ್, ಅಭಿಷೇಕ್ ಶರ್ಮಾ 9 ರನ್ ಗಳಿಸಿದರೆ ರಾಹುಲ್ ತ್ರಿಪಾಠಿ ಮತ್ತು ನಿಕೂಲಸ್ ಪೂರನ್ 0 ಸುತ್ತಿದರು. ಐಡೆನ್ ಮಾರ್ಕ್ರಾಮ್ ಮತ್ತು ರೊಮಾರಿಯೋ ಶೆಫರ್ಡ್ 6ನೇ ವಿಕಟಿಗೆ 41 ರನ್ ಜೊತೆಯಾಟವಾಡಿದರು. 7ನೇ ವಿಕೆಟಿಗೆ ಮಾರ್ಕ್ರಾಮ್ ಮತ್ತು ವಾಷಿಂಗ್ಟನ್ ಸುಂದರ್ 19 ಎಸೆಗಳಲ್ಲಿ 55 ರನ್ ಚಚ್ಚಿದ್ದರು.
Advertisement
ವಾಷಿಂಗ್ಟನ್ ಸುಂದರ್ 40 ರನ್(14 ಎಸೆತ, 5 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರೇ ಮ್ಯಾಕ್ರಾಮ್ ಔಟಾಗದೇ 57 ರನ್(41 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದರು. ಚಹಲ್ ಮೂರು ವಿಕೆಟ್ ಕಿತ್ತರೆ , ಟ್ರೆಂಟ್ ಬೌಲ್ಟ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟಿಗೆ 37 ಎಸೆತಗಳಲ್ಲಿ 58 ರನ್ ಜೊತೆಯಾಟವಾಡಿದರು.
ಯಶಸ್ವಿ ಜೈಸ್ವಾಲ್ 20 ರನ್(16 ಎಸೆತ, 2 ಬೌಂಡರಿ, 1 ಸಿಕ್ಸರ್), ಜೋಸ್ ಬಟ್ಲರ್ 35 ರನ್(28 ಎಸೆತ, 3 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ನಾಯಕ ಸಂಜು ಸ್ಯಾಮ್ಸನ್ 55 ರನ್(27 ಎಸೆತ, 3 ಬೌಂಡರಿ, 5 ಸಿಕ್ಸರ್), ದೇವದತ್ ಪಡಿಕ್ಕಲ್ 41 ರನ್(29 ಎಸೆತ, 4 ಬೌಂಡರಿ, 2 ಸಿಕ್ಸರ್), ಹೆಟ್ಮೇಯರ್ 32 ರನ್(13 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ಬ್ಯಾಟರ್‌ಗಳ ಅತ್ಯುತ್ತಮ ಆಟದಿಂದಾಗಿ 20 ಓವರ್‌ಗಳಲ್ಲಿ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು.