ಮುಂಬೈ: ಜೋಸ್ ಬಟ್ಲರ್ ಬ್ಯಾಟಿಂಗ್ ಆರ್ಭಟದ ನಡುವೆ ಮಂಕಾದ ಮುಂಬೈ ತಂಡ ರಾಜಸ್ಥಾನ ವಿರುದ್ಧ ಸೋಲೊಪ್ಪಿಕೊಂಡಿದೆ.
Advertisement
ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈ ತಂಡದ ಗೆಲುವಿಗಾಗಿ ಕೀರಾನ್ ಪೋಲಾರ್ಡ್ 22 ರನ್ (24 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಹೋರಾಡಿದರು ಕೂಡ ಗೆಲುವು ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 170 ರನ್ ಪೇರಿಸಿ 23 ರನ್ ಅಂತರದಿಂದ ರಾಜಸ್ಥಾನ ತಂಡಕ್ಕೆ ತಲೆ ಬಾಗಿತು. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಧೋನಿ ಸಿಕ್ಸರ್ ಬಾರಿಸಿದ ಬ್ಯಾಟ್
Advertisement
ಗೆಲ್ಲಲು 194 ರನ್ ಟಾರ್ಗೆಟ್ ಪಡೆದ ಮುಂಬೈ ಪರ ಇಶಾನ್ ಕಿಶನ್ ಆರಂಭದಲ್ಲೇ ಸಿಡಿಯಲಾರಂಭಿಸಿದರು. ರಾಜಸ್ಥಾನ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಕಿಶನ್ 54 ರನ್ (43 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮುಂಬೈ ಪರ ತಿಲಕ್ ವರ್ಮಾ 61 ರನ್ (33 ಎಸೆತ, 3 ಬೌಂಡರಿ, 5 ಸಿಕ್ಸ್) ಬಾರಿಸಿ ಆಸರೆಯಾದರು.
Advertisement
Advertisement
ಈ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ ಆರಂಭದಲ್ಲಿ ಯಶಸ್ವಿ ಜೈಸ್ವಾಲ್ 1 ಮತ್ತು ದೇವದತ್ ಪಡಿಕ್ಕಲ್ 7 ರನ್ ಸಿಡಿಸಿ ಔಟ್ ಆದರು. ನಂತರ ಜೊತೆಯಾದ ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ 3ನೇ ವಿಕೆಟ್‍ಗೆ 82 ರನ್ (50 ಎಸೆತ) ಜೊತೆಯಾಟವಾಡಿ ರಾಜಸ್ಥಾನ ತಂಡಕ್ಕೆ ನೆರವಾದರು. ಇವರಿಬ್ಬರೂ ಕೂಡ ಬೌಂಡರಿ, ಸಿಕ್ಸರ್‌ಗಳ ಮೂಲಕ ಮುಂಬೈ ಬೌಲರ್‌ಗಳ ಬೆವರಿಳಿಸಿದರು. ಇದನ್ನೂ ಓದಿ: ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಆಯುಷ್ ಬದೋನಿ ಕಹಾನಿ
ಸಂಜು ಸ್ಯಾಮ್ಯನ್ 30 ರನ್ (21 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಒಂದಾದ ಬಟ್ಲರ್ ಮತ್ತು ಶಿಮ್ರಾನ್ ಹೆಟ್ಮೆಯರ್ ಮುಂಬೈ ಬೌಲರ್‌ಗಳನ್ನು ದಂಡಿಸಲು ಮುಂದಾದರು. ಹೆಟ್ಮೆಯರ್ ಅಂತು ತಮ್ಮ ಬ್ಯಾಟಿಂಗ್ ವೈಭವವನ್ನು ಅಭಿಮಾನಿಗಳಿಗೆ ತೋರ್ಪಡಿಸಿದರು. ಆದರೆ 35 ರನ್ (14 ಎಸೆತ, 3 ಬೌಂಡರಿ, 3 ಸಿಕ್ಸ್) ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು.
ಬಳಿಕ ಬಟ್ಲರ್ 100 ರನ್ (68 ಎಸೆತ, 11 ಬೌಂಡರಿ, 5 ಸಿಕ್ಸ್) ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 15ನೇ ಆವೃತ್ತಿಯ ಮೊದಲ ಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ ರಾಜಸ್ಥಾನ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. ಮುಂಬೈ ಪರ ಬುಮ್ರಾ ಮತ್ತು ಟೈಮಲ್ ಮಿಲ್ಸ್ ತಲಾ 3 ವಿಕೆಟ್ ಪಡೆದರೆ, ಪೋಲಾರ್ಡ್ 1 ವಿಕೆಟ್ ಕಿತ್ತರು.