ಮುಂಬೈ: ಜೋಸ್ ಬಟ್ಲರ್ ಬ್ಯಾಟಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಬೌಲಿಂಗ್ ನೆರವಿನಿಂದ ಡೆಲ್ಲಿ ವಿರುದ್ಧ ರಾಜಸ್ಥಾನ 15 ರನ್‍ಗಳ ಭರ್ಜರಿ ಜಯ ಸಾಧಿಸಿದೆ.
223 ರನ್‍ಗಳ ಬೃಹತ್ ಗುರಿ ಪಡೆದ ಡೆಲ್ಲಿ ತಂಡದ ಗೆಲುವಿಗಾಗಿ ರೋವ್ಮನ್ ಪೊವೆಲ್ ಕಡೆಯ ವರೆಗೆ ಹೋರಾಡಿ 36 ರನ್ (15 ಎಸೆತ, 5 ಬೌಂಡರಿ) ಚಚ್ಚಿ ಔಟ್ ಆಗುವುದರೊಂದಿಗೆ ಸೋಲಿನಲ್ಲೂ ಗಮನ ಸೆಳೆದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್ ಗಳಿಸಲಷ್ಟೇ ಶಕ್ತವಾಯಿತು.
Advertisement
Advertisement
ಬೃಹತ್ ಮೊತ್ತದ ಗುರಿ ಪಡೆದ ಡೆಲ್ಲಿಗೆ ಆರಂಭಿಕ ಆಟಗಾರರಾದ ಪೃಥ್ವಿ ಶಾ 37 ರನ್ (27 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ಡೇವಿಡ್ ವಾರ್ನರ್ 28 ರನ್ (14 ಎಸೆತ, 5 ಬೌಂಡರಿ, 1 ಸಿಕ್ಸ್) ಕೊಡುಗೆ ನೀಡಿ ಔಟ್ ಆದರು. ಆ ಬಳಿಕ ಪಂತ್ 44 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಲಲಿತ್ ಯಾದವ್ 37 ರನ್ (24 ಎಸೆತ, 3 ಬೌಂಡರಿ, 2 ಸಿಕ್ಸ್) ಚಚ್ಚಿ ಪೆವಿಲಿಯನ್ ಸೇರಿಕೊಂಡರು.
Advertisement
Advertisement
ಈ ಮೊದಲು ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಅವರ ಆ ಲೆಕ್ಕಾಚಾರ ಆರಂಭದಿಂದಲೇ ತಲೆಕೆಳಗಾಯಿತು. ರಾಜಸ್ಥಾನದ ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ ರನ್ ಮಳೆ ಸುರಿಸಿದರು. ಆರಂಭದಿಂದಲೇ ಸ್ಫೋಟಕ ಆಟಕ್ಕೆ ಮುಂದಾದ ಇವರಿಬ್ಬರು ಮನಬಂದಂತೆ ಬ್ಯಾಟ್‍ಬೀಸಿ ರನ್ ಪ್ರವಾಹ ಹರಿಸಿದರು.
ಬಟ್ಲರ್ ಬಿರುಗಾಳಿ
ಒಂದು ಕಡೆ ಪಡಿಕ್ಕಲ್ ಇನ್ನೊಂದು ಕಡೆ ಬಟ್ಲರ್ ಬ್ಯಾಟಿಂಗ್ ಬಿರುಗಾಳಿಗೆ ಡೆಲ್ಲಿ ಬೌಲರ್‌ಗಳು ಹೈರಾಣಾದರು. ಸಿಕ್ಕ ಸಿಕ್ಕ ಬೌಲರ್‌ಗಳಿಗೆ ಬೌಂಡರಿ, ಸಿಕ್ಸರ್ ಚಚ್ಚಿದ ಈ ಜೋಡಿಯನ್ನು ಬೇರ್ಪಡಿಸಲು 15ನೇ ಓವರ್‌ನಲ್ಲಿ ಖಲೀಲ್ ಅಹಮ್ಮದ್ ಸಫಲರಾದರು. ಪಡಿಕ್ಕಲ್ 54 ರನ್ (35 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೊದಲು ಬಟ್ಲರ್ ಜೊತೆ ಮೊದಲ ವಿಕೆಟ್‍ಗೆ 155 ರನ್ (91 ಎಸೆತ) ಜೊತೆಯಾಟವಾಡಿ ಡೆಲ್ಲಿಗೆ ಮುಳುವಾದರು.
ಆ ಬಳಿಕ ಬಟ್ಲರ್ ಜೊತೆಗೂಡಿದ ಸಂಜು ಸ್ಯಾಮ್ಸನ್ ನಾನೇನು ಕಮ್ಮಿ ಇಲ್ಲ ಎಂಬಂತೆ ಬೌಂಡರಿ, ಸಿಕ್ಸ್ ಸಿಡಿಸಿ ಮೆರೆದಾಡಿದರು. ಇತ್ತ ಬಟ್ಲರ್ ಐಪಿಎಲ್‍ನ ಕಳೆದ 8 ಇನ್ನಿಂಗ್ಸ್‌ಗಳ ಪೈಕಿ 4ನೇ ಶತಕ ಬಾರಿಸಿ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದರು. ಅಂತಿಮವಾಗಿ ಬಟ್ಲರ್ 116 ರನ್ (65 ಎಸೆತ, 9 ಬೌಂಡರಿ, 9 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಸ್ಯಾಮ್ಸನ್ ಅಜೇಯ 46 ರನ್ (19 ಎಸೆತ, 5 ಬೌಂಡರಿ, 3 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 222 ರನ್‍ಗಳ ಬೃಹತ್ ಮೊತ್ತ ಪೇರಿಸಿತು.
ರನ್ ಏರಿದ್ದು ಹೇಗೆ?
41 ಎಸೆತ 50 ರನ್
66 ಎಸೆತ 100 ರನ್
87 ಎಸೆತ 150 ರನ್
112 ಎಸೆತ 200 ರನ್
120 ಎಸೆತ 222 ರನ್