ಪುಣೆ: ಪಂಜಾಬ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಜ್ಯೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್ ಮತ್ತು ಸೂರ್ಯಕುಮಾರ್ ಯಾದವ್ ಹೋರಾಟದ ನಡುವೆಯು ಗೆಲುವು ಮರಿಚಿಕೆಯಾಯಿತು.
Advertisement
198 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭದಲ್ಲೇ ಆಫಾತ ಎದುರಾಯಿತು ಇಶಾನ್ ಕಿಶನ್ 3 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ರೋಹಿತ್ ಶರ್ಮಾ 28 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ಬಂದ ಜ್ಯೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್ ಮುಂಬೈ ಬೌಲರ್‌ಗಳಿಗೆ ಅಷ್ಟ ದಿಕ್ಕುಗಳನ್ನು ಪರಿಚಯಿಸುವಂತೆ ಬ್ಯಾಟ್ ಬೀಸಲು ಆರಂಭಿಸಿ 8ನೇ ಓವರ್‌ನ ಕೊನೆಯ 4 ಎಸೆತಗಳನ್ನು ಸತತ ಸಿಕ್ಸರ್‌ಗಟ್ಟಿ ಅಬ್ಬರಿಸಿ ಬೊಬ್ಬಿರಿದರು. ಇನ್ನೇನು ಅರ್ಧಶತಕದ ಹೊಸ್ತಿಲಲ್ಲಿದ್ದ ವೇಳೆ ಬ್ರೆವಿಸ್ 49 ರನ್ (25 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ನಂತರ ಸೂರ್ಯ ಕುಮಾರ್ ಯಾದವ್ 43 ರನ್ (30 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡಂತೆ ಮುಂಬೈ ಗೆಲುವು ಮತ್ತಷ್ಟು ದೂರವಾಯಿತು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 186 ರನ್ ಪೇರಿಸಲಷ್ಟೆ ಶಕ್ತವಾಗಿ 13 ರನ್‍ಗಳಿಂದ ಸೋಲು ಕಂಡಿತು.
Advertisement
Advertisement
ಈ ಮೊದಲು ಟಾಸ್ ಗೆದ್ದ ಮುಂಬೈ ಕ್ಯಾಪ್ಟನ್ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಇತ್ತ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮೊರೆ ಹೋಯಿತು. ಮಯಾಂಕ್ ಅಗರ್‌ವಾಲ್ ಮತ್ತು ಶಿಖರ್ ಧವನ್ ಮುಂಬೈ ಬೌಲರ್‌ಗಳ ದಾಳಿಯನ್ನು ಬೌಂಡರಿ, ಸಿಕ್ಸರ್‌ಗೆ ಬಡಿದಟ್ಟಿದರು. ಈ ಜೋಡಿ ಮೊದಲ ವಿಕೆಟ್‍ಗೆ 97 ರನ್ (57 ಎಸೆತ)ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಮುರುಗನ್ ಅಶ್ವಿನ್ ಬರಬೇಕಾಯಿತು. ಮಯಾಂಕ್ ಅಗರ್‌ವಾಲ್ 52 ರನ್ (32 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು.
Advertisement
ಬಳಿಕ ಬಂದ ಬ್ಯಾಟ್ಸ್‌ಮ್ಯಾನ್‌ಗಳು ಮುಂಬೈ ಬೌಲರ್‌ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ಇತ್ತ ಧವನ್ ಮಾತ್ರ ತಮ್ಮ ಹೊಡಿಬಡಿ ಆಟ ಮುಂದುವರಿಸಿದರು. ಅಂತಿಮವಾಗಿ 70 ರನ್ (50 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ಕೊನೆಗೆ ಜಿತೇಶ್ ಶರ್ಮಾ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಅಜೇಯ 30 ರನ್ (15 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು.