ಮುಂಬೈ: ಚೆನ್ನೈಗೆ ಬೃಹತ್ ಮೊತ್ತ ಟಾರ್ಗೆಟ್ ನೀಡಿ ಬೌಲಿಂಗ್ ಮೂಲಕ ಕಟ್ಟಿಹಾಕಿದ ಪಂಜಾಬ್ ಕಿಂಗ್ಸ್ 54 ರನ್‍ಗಳ ಭರ್ಜರಿ ಜಯ ದಾಖಲಿಸಿದೆ.
Advertisement
ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಚೆನ್ನೈ ತಂಡ 18 ಓವರ್‌ಗಳಲ್ಲಿ 126 ರನ್‍ಗಳಿಗೆ ಆಲೌಟ್ ಆಯಿತು. ಅಲ್ಲದೇ ಟೂರ್ನಿಯಲ್ಲಿ ಸತತ ಮೂರನೇ ಸೋಲನುಭವಿಸಿತು.
Advertisement
180 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಪಂಜಾಬ್ ಬೌಲರ್‌ಗಳು ಶಾಕ್ ಮೇಲೆ ಶಾಕ್ ನೀಡಿದರು. ಚೆನ್ನೈ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ರಾಬಿನ್ ಉತ್ತಪ್ಪ 13 ರನ್, ಗಾಯಕ್ವಾಡ್ 1, ಅಂಬಾಟಿ ರಾಯುಡು 13 ರನ್, ಮೊಯಿನ್ ಅಲಿ ಮತ್ತು ಜಡೇಜಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು.
Advertisement
Advertisement
ಬಳಿಕ ಒಂದಾದ ಶಿವಂ ದುಬೆ ಮತ್ತು ಮಹೇಂದ್ರ ಸಿಂಗ್ ತಂಡಕ್ಕೆ ಚೇತರಿಕೆ ನೀಡದರು ಕೂಡ ಯಾವುದೇ ಪ್ರಯೋಜನ ಸಿಗಲಿಲ್ಲ. ದುಬೆ 57 ರನ್ (30 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಧೋನಿ 23 ರನ್ (28 ಎಸೆತ,1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಚೆನ್ನೈ 17.6 ಎಸೆತಗಳಲ್ಲಿ 126 ರನ್‍ಗಳಿಗೆ ಸರ್ವಪತನ ಕಂಡಿತು.
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ ನಾಯಕ ಮಯಾಂಕ್ ಅಗರ್ವಾಲ್ ಕೇವಲ 4 ರನ್ (2 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿದರು. ಆದರೆ ಇತ್ತ ಶಿಖರ್ ಧವನ್ ಎಂದಿನಂತೆ ಬ್ಯಾಟಿಂಗ್ ಮುಂದುವರಿಸಿ 33 ರನ್ (24 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು.
ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದ್ದರು. ಬೌಂಡರಿ, ಸಿಕ್ಸರ್‌ಗಳನ್ನು ಮನಬಂದಂತೆ ಚಚ್ಚಿದ ಲಿವಿಂಗ್ಸ್ಟೋನ್ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. ಅಲ್ಲದೆ ಶಿಖರ್ ಧವನ್ ಜೊತೆ 3ನೇ ವಿಕೆಟ್‍ಗೆ 95 ರನ್ (52 ಎಸೆತ) ಜೊತೆಯಾಟವಾಡಿ ಮಿಂಚಿದರು. ಲಿವಿಂಗ್ಸ್ಟೋನ್ ಆಟ 60 ರನ್ (32 ಎಸೆತ, 5 ಬೌಂಡರಿ, 5 ಸಿಕ್ಸ್) ಬಾರಿಸಿ ಆಟ ಕೊನೆಗೊಳಿಸಿದರು. ನಂತರ ಜಿತೇಶ್ ಶರ್ಮಾ 26 ರನ್ (17 ಎಸೆತ, 3 ಸಿಕ್ಸ್) ಸಿಡಿಸಿ ಗಮನ ಸೆಳೆದರು. ಅಂತಿಮವಾಗಿ ಪಂಜಾಬ್ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 180 ರನ್ ಸಿಡಿಸಿತು.