ಮುಂಬೈ: ರಾಜಸ್ಥಾನ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾರ ಬಿಗ್ ಪಾಟ್ನರ್ ಶಿಪ್ ಮೂಲಕ ಯಶಸ್ವಿ ಚೇಸ್ ಮಾಡಿದ ಮುಂಬೈ ತಂಡ 5 ವಿಕೆಟ್‍ಗಳಿಂದ ಗೆದ್ದಿದೆ. ಈ ಮೂಲಕ ಮುಂಬೈ 15ನೇ ಆವೃತ್ತಿಯ ಮೊದಲ ಗೆಲುವು ಕಂಡಿದೆ.
Advertisement
ರಾಜಸ್ಥಾನ ನೀಡಿದ 159 ರನ್‍ಗಳ ಗುರಿ ಬೆನ್ನಟ್ಟಿದ ಮುಂಬೈಗೆ 3ನೇ ವಿಕೆಟ್‍ಗೆ ಯಾದವ್ ಮತ್ತು ತಿಲಕ್ ವರ್ಮಾರ 81 ರನ್ (56 ಎಸೆತ) ಗಳ ಜೊತೆಯಾಟ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿತು. ಅಂತಿಮವಾಗಿ ಕೀರನ್ ಪೊಲಾರ್ಡ್ 10 ರನ್, ಟಿಮ್ ಡೇವಿಡ್ ಅಜೇಯ 26 ರನ್ ( 9 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಸಿಕ್ಸ್ ಮೂಲಕ ಮ್ಯಾಚ್ ಗೆಲ್ಲಿಸಿದ ಸ್ಯಾಮ್ 6 ರನ್ (1 ಎಸೆತ, 1 ಸಿಕ್ಸ್) ಸಿಡಿಸಿ ಇನ್ನೂ 4 ಎಸೆತ ಬಾಕಿ ಇರುವಂತೆ ಮುಂಬೈಗೆ 5 ವಿಕೆಟ್‍ಗಳ ಅಂತರದ ಜಯ ತಂದುಕೊಟ್ಟರು. ಈ ಮೂಲಕ ಸತತ 8 ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವಿನ ನಗೆ ಬೀರಿತು.
Advertisement
Advertisement
ಮುಂಬೈ ನೀಡಿದ 159 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ 2 ರನ್ ಮತ್ತು ಇಶಾನ್ ಕಿಶನ್ 26 ರನ್ (18 ಎಸೆತ, 4 ಬೌಂಡರಿ, 1 ಸಿಕ್ಸ್) ಆರಂಭಿಕ ವೈಫಲ್ಯ ಮತ್ತೆ ಮುಂದುವರಿಯಿತು. ಆ ಬಳಿಕ ಒಂದಾದ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮುಂಬೈಗೆ ಮೊದಲ ಗೆಲುವು ದಕ್ಕಿಸಿಕೊಡಲು ಹೋರಾಟ ನಡೆಸಲು ಮುಂದಾದರು. ತಿಲಕ್ ವರ್ಮಾ ಆಟ 35 ರನ್ (30 ಎಸೆತ, 1 ಬೌಂಡರಿ, 2 ಸಿಕ್ಸ್)ಗೆ ಅಂತ್ಯವಾಯಿತು. ಆದರೆ ಈ ಮೊದಲು ಸೂರ್ಯಕುಮಾರ್ ಜೊತೆ ಉಪಯುಕ್ತ 81 ರನ್ (56 ಎಸೆತ) ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಯಾದವ್ 51 ರನ್ (39 ಎಸೆತ, 5 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Advertisement
ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಎಂದಿನಂತೆ ತಮ್ಮ ಹೊಡಿ ಬಡಿ ಆಟ ಶುರು ಹಚ್ಚಿಕೊಂಡರು. ಆದರೆ ಅವರಿಗೆ ಇತರ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಸಾಥ್ ನೀಡಲಿಲ್ಲ.
ದೇವದತ್ ಪಡಿಕ್ಕಲ್ 15 ರನ್, ಸಂಜು ಸ್ಯಾಮ್ಸನ್ 16 ರನ್, ಡೇರಿಲ್ ಮಿಚೆಲ್ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಬೃಹತ್ ಮೊತ್ತದ ರಾಜಸ್ಥಾನ ತಂಡದ ಪ್ಲಾನ್ ತಲೆಕೆಳಗಾಯಿತು. ಆದರೆ ಒಂದು ಕಡೆ ಬಟ್ಲರ್ ಮಾತ್ರ ಸ್ಫೋಟಕ ಆಟ ನಿಲ್ಲಿಸಲಿಲ್ಲ 15 ಓವರ್‌ಗಳ ವರೆಗೆ ಕ್ರಿಸ್‍ನಲ್ಲಿದ್ದ ಬಟ್ಲರ್ 67 ರನ್ (52 ಎಸೆತ, 5 ಬೌಂಡರಿ, 4 ಸಿಕ್ಸ್) ಬಾರಿಸಿ ಔಟ್ ಆದರು. ಕೆಲ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್ 21 ರನ್ (9 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ರನ್ ಹೆಚ್ಚಿಸಲು ಮುಂದಾದರು. ಅಂತಿಮವಾಗಿ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಪೇರಿಸಿತು.
ಮುಂಬೈ ಪರ ಹೃತಿಕ್ ಶೋಕೀನ್ ಮತ್ತು ರಿಲೆ ಮೆರೆಡಿತ್ ತಲಾ 2 ವಿಕೆಟ್ ಪಡೆದರೆ, ಕುಮಾರ್ ಕಾರ್ತಿಕೇಯ ಮತ್ತು ಡೇನಿಯಲ್ ಸ್ಯಾಮ್ಸ್ ತಲಾ 1 ವಿಕೆಟ್ ಹಂಚಿಕೊಂಡರು.