ಮುಂಬೈ: ಬೌಲರ್‌ಗಳ ಮೇಲಾಟಕ್ಕೆ ಸಾಕ್ಷಿಯಾದ ಮುಂಬೈ ಮತ್ತು ಚೆನ್ನೈ ನಡುವಿನ ಪಂದ್ಯದಲ್ಲಿ 5 ವಿಕೆಟ್‍ಗಳಿಂದ ಮುಂಬೈ ಗೆದ್ದು ಚೆನ್ನೈಗೆ ತೆರೆದುಕೊಂಡಿದ್ದ ಪ್ಲೇ ಆಫ್ ಬಾಗಿಲನ್ನು ಮುಚ್ಚಿಸಿದೆ.
Advertisement
98 ರನ್‍ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ಚೆನ್ನೈ ಬೌಲರ್‌ಗಳ ಪ್ರತಿರೋಧದ ನಡುವೆಯೂ ತಿಲಕ್ ವರ್ಮಾರ ಜವಾಬ್ದಾರಿಯುತ ಆಟ ಮುಂಬೈ ಗೆಲುವಿಗೆ ನೆರವಾಯಿತು. ತಿಲಕ್ ವಮಾ ಅಜೇಯ 34 ರನ್ (32 ಎಸೆತ, 4 ಬೌಂಡರಿ) ನೆರವಿನಿಂದ 14.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 103 ಸಿಡಿಸಿ ಇನ್ನೂ 31 ಎಸೆತ ಬಾಕಿ ಇರುವಂತೆ ಮುಂಬೈ 5 ವಿಕೆಟ್‍ಗಳ ಅಂತರದ ಜಯ ದಾಖಲಿಸಿತು. ಈ ಮೂಲಕ ಟೂರ್ನಿಯ ಮೂರನೇ ಗೆಲುವಿನ ಸಂಭ್ರಮ ಪಟ್ಟಿತು.
Advertisement
Advertisement
98 ರನ್‍ಗಳ ಅಲ್ಪಮೊತ್ತ ಗುರಿ ಪಡೆದ ಮುಂಬೈ ಕೂಡ ಚೆನ್ನೈ ಬೌಲರ್‌ಗಳ ಮುಂದೆ ಪರದಾಟ ಆರಂಭಿಸಿತು. ಇಶಾನ್ ಕಿಶನ್ 6 ರನ್‍ಗೆ ಆಟ ನಿಲ್ಲಿಸಿದರು. ಆ ಬಳಿಕ ರೋಹಿತ್ ಶರ್ಮಾ 18 ರನ್ (14 ಎಸೆತ, 4 ಬೌಂಡರಿ) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡರು. ನಂತರ ದಿಡೀರ್ ಕುಸಿತ ಕಂಡ ಮುಂಬೈ 33 ರನ್‍ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಜೊತೆಯಾದ ತಿಲಕ್ ವರ್ಮಾ ಮತ್ತು ಹೃತಿಕ್ ಶೋಕೀನ್ ತಂಡದ ಗೆಲುವಿಗಾಗಿ ಹೋರಾಡಿದರು. ಶೋಕೀನ್ 18 ರನ್ (23 ಎಸೆತ, 2 ಬೌಂಡರಿ) ಬಾರಿಸಿ ಔಟ್ ಆದರು.
Advertisement
ಈ ಮೊದಲು ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಚೆನ್ನೈ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಇತ್ತ ರೋಹಿತ್ ನಿರ್ಧಾರವನ್ನು ಸರಿಯಾಗಿ ಬಳಸಿಕೊಂಡ ಮುಂಬೈ ಬೌಲರ್‌ಗಳು ನಾ ಮುಂದು ತಾ ಮುಂದು ಎನ್ನುವಂತೆ ವಿಕೆಟ್ ಬೇಟೆ ಆರಂಭಿಸಿದರು.
ಚೆನ್ನೈ ಬ್ಯಾಟಿಂಗ್ ಬೆನ್ನೆಲುಬು ಮುರಿದ ಸ್ಯಾಮ್ಸ್
ಆರಂಭದಲ್ಲೇ ಬಿಗಿ ದಾಳಿಯ ಮೂಲಕ ಡೇನಿಯಲ್ ಸ್ಯಾಮ್ಸ್ ಚೆನ್ನೈ ತಂಡದ ಅಕ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ಕಾನ್ವೇ ಮತ್ತು ಅಲಿಯನ್ನು ಶೂನ್ಯಕ್ಕೆ ಪೆವಿಲಿಯನ್‍ಗೆ ಅಟ್ಟಿದರೆ, ಗಾಯಕ್ವಾಡ್‌ರನ್ನು 7 ರನ್‍ಗಳಿಗೆ ಡಗೌಟ್ ಸೇರಿಸಿದರು.
ಒಂದು ಕಡೆ ವಿಕೆಟ್ ಪಟಪಟನೇ ಉರುಳುತ್ತಿದ್ದರೆ, ಇನ್ನೊಂದೆಡೆ ಧೋನಿ ತಂಡಕ್ಕಾಗಿ ಏಕಾಂಗಿ ಹೋರಾಟ ನಡೆಸಿದರು. ಆದರೆ ಇವರಿಗೆ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಸಾಥ್ ನೀಡಲಿಲ್ಲ. ಧೋನಿ ಅಜೇಯ 36 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿದ್ದನ್ನು ಹೊರತು ಪಡಿಸಿ ಬ್ರಾವೋ ಸಿಡಿಸಿದ 12 ರನ್ (15 ಎಸೆತ, 1 ಸಿಕ್ಸ್) ಅತಿ ಹೆಚ್ಚಿನ ಗಳಿಕೆಯಾಯಿತು.
ಅಂತಿಮವಾಗಿ ಚೆನ್ನೈ ತಂಡ 16 ಓವರ್‌ಗಳಲ್ಲಿ ಸರ್ವ ಪತನ ಕಂಡಿತು. ಮುಂಬೈ ಪರ ಸ್ಯಾಮ್ಸ್ 3 ವಿಕೆಟ್ ಕಿತ್ತು ಮಿಂಚಿದರೆ, ರಿಲೆ ಮೆರೆಡಿತ್ ಮತ್ತು ಕುಮಾರ್ ಕಾರ್ತಿಕೇಯ ತಲಾ 2 ವಿಕೆಟ್ ಪಡೆದರು. ಇನ್ನೂಳಿದ 2 ವಿಕೆಟ್‍ಗಳನ್ನು ತಲಾ ಒಂದೊಂದರಂತೆ ಬುಮ್ರಾ ಮತ್ತು ರಮಣದೀಪ್ ಸಿಂಗ್ ಹಂಚಿಕೊಂಡು ಚೆನ್ನೈ ಬ್ಯಾಟ್ಸ್‌ಮ್ಯಾನ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು.