ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

Public TV
2 Min Read
ROHITH SHARMA

ಮುಂಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್ 2022ರ ಆವೃತ್ತಿಯಲ್ಲಿ ಅತ್ಯಂತ ಕಳಪೆ ಆಟವನ್ನು ಪ್ರದರ್ಶಿಸುತ್ತಿದೆ.

ಹಾಲಿ ಚಾಂಪಿಯನ್ ತಂಡವು ಈಗಾಗಲೇ ಸತತ ಆರು ಸೋಲುಗಳನ್ನು ಕಂಡು ಐಪಿಎಲ್ ಪಾಯಿಂಟ್ಸ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೀಮ್ಸ್‌ಗಳು ಹರಿದಾಡುತ್ತಿದ್ದು, ರೋಹಿತ್ ಪಡೆಯು ಟ್ರೋಲ್‍ಗೆ ಗುರಿಯಾಗಿದೆ. ಇದನ್ನೂ ಓದಿ: ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

ಕನ್ನಡದ ಹೆಮ್ಮೆ ಕೆಜಿಎಫ್ ಚಾಪ್ಟರ್-2 ಚಿತ್ರದ ಯಶ್ ಅವರ ವೈಲೆನ್ಸ್.. ವೈಲೆನ್ಸ್.. ಎಂಬ ಜನಪ್ರಿಯ ಡೈಲಾಗ್ ಬದಲು ನೆಟ್ಟಿಗರು ಸೋಲು ಸೋಲು ಸೋಲು ಎಂದು ಬರೆದು ಮುಂಬೈ ತಂಡಕ್ಕೆ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

ದಾಖಲೆಯ 5 ಬಾರಿಯ ಐಪಿಎಲ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಮುಂಬೈ ತಂಡವು ಈ ಬಾರಿ ಆವೃತ್ತಿಯಲ್ಲಿ ಆಡಿರುವ ಆರಕ್ಕೆ ಆರೂ ಪಂದ್ಯಗಳಲ್ಲಿ ಸೋಲುಂಡಿದೆ. ಹೀಗಾಗಿ ಕನಿಷ್ಠ ಪಕ್ಷ ಒಂದು ಪಂದ್ಯವನ್ನಾದರು ಮುಂಬೈ ತಂಡ ಗೆಲ್ಲಲಿ ಎಂದು ನೆಟ್ಟಿಗರೊಬ್ಬರು ಅಪಹಾಸ್ಯ ಮಾಡಿದ್ದಾರೆ.

ನಾಯಕ ರೋಹಿತ್ ಶರ್ಮಾ ಅವರ ಯೋಜನೆಗಳೆಲ್ಲವೂ ವಿಫಲವಾಗಿವೆ. ಬ್ಯಾಟಿಂಗ್‍ನಲ್ಲಿ ಅತ್ಯಂತ ಕಳಪೆ ಆಟವನ್ನು ತೋರುತ್ತಿರುವ ಎಮ್‍ಐ ತಂಡವು ಬೌಲಿಂಗ್‍ನಲ್ಲೂ ಸಹ ಅಷ್ಟೇ ಕಳಪೆ ಆಟವನ್ನು ತೋರುತ್ತಿದೆ. ಇದರ ನಡುವೆಯೂ ಮುಂಬೈ ತಂಡದ ಅಭಿಮಾನಿಗಳು ತಂಡದ ಮೇಲಿನ ಅಭಿಮಾನವನ್ನು ಕಳೆದುಕೊಂಡಿಲ್ಲ.

Share This Article