ಮುಂಬೈ: ಐಪಿಎಲ್‍ನಲ್ಲಿ ಸತತ ಎರಡು ಬಾಲ್‍ಗಳಿಗೆ ಎರಡು ಸಿಕ್ಸ್ ಸಿಡಿಸಿ ಚೆನ್ನೈ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಬಳಿಕ ಗುಜರಾತ್ ತಂಡದ ಆಟಗಾರ ರಾಹುಲ್ ತೆವಾಟಿಯಾ ಮ್ಯಾಚ್ ಫಿನಿಶರ್ ಎನಿಸಿಕೊಂಡಿದ್ದಾರೆ.
Advertisement
15ನೇ ಆವೃತ್ತಿ ಐಪಿಎಲ್‍ನ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ತೆವಾಟಿಯ ಕಡೆಯ 2 ಎಸೆತಗಳನ್ನು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಮ್ಯಾಚ್ ಫಿನಿಶ್ ಮಾಡಿದ್ದರು. ಈ ಹಿಂದೆ 2016ರಲ್ಲಿ ಧೋನಿ ಕೊನೆಯ 2 ಎಸೆತಗಳಲ್ಲಿ 2 ಸಿಕ್ಸ್ ಸಿಡಿಸಿ ಪುಣೆ ಸೂಪರ್ ಜೈಂಟ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅದಾದ ಬಳಿಕ 2022ರ ಐಪಿಎಲ್‍ನಲ್ಲಿ ತೆವಾಟಿಯ ಸತತ ಎರಡು ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶ್ ಮಾಡಿ ಮಿಂಚಿದ್ದಾರೆ. ಇದನ್ನೂ ಓದಿ: ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ
Advertisement
Advertisement
ಪಂಜಾಬ್ ವಿರುದ್ಧ ಗುಜರಾತ್ ಗೆದ್ದಿದ್ದು ಹೇಗೆ:
ಕೊನೆಯ 12 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 32 ರನ್ ಬೇಕಾಗಿತ್ತು 18ನೇ ಓವರ್‍ನಲ್ಲಿ 13 ರನ್ ಬಂತು. 6 ಎಸೆತಗಳಲ್ಲಿ 19 ರನ್ ಬೇಕಿತ್ತು. ಕೊನೆಯ ಓವರ್ ಎಸೆದ ಓಡನ್ ಸ್ಮಿತ್ ಅವರ ಮೊದಲ ಎಸೆತದಲ್ಲಿ 1 ರನ್ ಬಂತು. ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದರು. ಮೂರನೇ ಎಸೆತದಲ್ಲಿ 4 ರನ್, 4ನೇ ಎಸೆತದಲ್ಲಿ 1 ರನ್ ಬಂತು. ಕೊನೆಯ 2 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 12 ರನ್ ಬೇಕಿತ್ತು. ರಾಹುಲ್ ತೆವಾಟಿಯಾ ಕೊನೆಯ 2 ಎಸೆತಗಳನ್ನು ಸಿಕ್ಸರ್‌ಗಟ್ಟಿ ಗುಜರಾತ್‍ಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು. ಇದನ್ನೂ ಓದಿ: ಐಪಿಎಲ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿ ಕನ್ನಡಿಗನೊಂದಿಗೆ ದಾಖಲೆ ಪಟ್ಟಿ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್
Advertisement