ಬೆಂಗಳೂರು: 15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂಬ ಸುದ್ದಿ ಮೂಲಗಳಿಂದ ವರದಿಯಾಗಿದೆ.
Advertisement
ಹರಾಜು ಪ್ರಕ್ರಿಯೆಯ ದಿನಾಂಕವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಐಪಿಎಲ್ ಫ್ರಾಂಚೈಸ್‍ಗಳಿಗೆ ಈ ಬಗ್ಗೆ ತಿಳಿಸಿದೆ ಎಂದು ಆಪ್ತಮೂಲಗಳಿಂದ ವರದಿ ಹೊರಬಿದ್ದಿದೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ತವರು ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿದ ಅಶ್ವಿನ್
Advertisement
Advertisement
ಈಗಾಗಲೇ 8 ತಂಡಗಳು ಮೆಗಾ ಹರಾಜಿಗೂ ಮುನ್ನ ಗರಿಷ್ಠ 4 ಮಂದಿ ಆಟಗಾರರನ್ನು ಉಳಿಸಿಕೊಂಡಿದೆ. ಆ ಬಳಿಕ ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ 2 ತಂಡಗಳು ಸಹಿತ ಒಟ್ಟು 10 ತಂಡಗಳು ಆಟಗಾರರನ್ನು ಖರೀದಿಸಲು ತುದಿಗಾಲಲ್ಲಿ ನಿಂತಿದೆ. ಈ ನಡುವೆ ಬಿಸಿಸಿಐ ಹರಾಜು ಪ್ರಕ್ರಿಯೆ, ಟಿವಿ ಪ್ರಸಾರದ ಹಕ್ಕು ಬಗ್ಗೆ ಈಗಾಗಲೇ ಚರ್ಚೆನಡೆಸಿದ್ದು ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ತಿಳಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ
Advertisement
8 ತಂಡಗಳ ಪೈಕಿ ಡೆಲ್ಲಿ ಕಾಪಿಟಲ್ಸ್ 47.5 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 48 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 48 ಕೋಟಿ, ಮುಂಬೈ ಇಂಡಿಯನ್ಸ್ 48 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 57 ಕೋಟಿ, ರಾಜಸ್ಥಾನ್ ರಾಯಲ್ಸ್ 62 ಕೋಟಿ, ಸನ್ ರೈಸರ್ಸ್ ಹೈದರಾಬಾದ್ 68 ಕೋಟಿ,ಪಂಜಾಬ್ ಕಿಂಗ್ಸ್ 72 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಈ ಹಣದಲ್ಲಿ ಇತರ ಆಟಗಾರರನ್ನು ಖರೀದಿಸಬೇಕಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ತಲಾ 90 ಕೋಟಿ ರೂಪಾಯಿಯನ್ನು ಹರಾಜಿನಲ್ಲಿ ವ್ಯಯಿಸಲಿದೆ. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್