ಢಾಕಾ: ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಬಾಂಗ್ಲಾ ದೇಶದ ಆಲ್ ರೌಂಡರ್ ಆಟಗಾರ ಶಕೀಬ್ ಅಲ್ ಹಸನ್ ಏಕೆ ಮಾರಾಟವಾಗದೇ ಉಳಿದುಕೊಂಡರು ಎಂಬುವುದನ್ನು ಶಕೀಬ್ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ಅವರು ಫೇಸ್‍ಬುಕ್ ಪೋಸ್ಟ್ ಮಾಡಿ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ (ಐಪಿಎಲ್) ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜಿನಲ್ಲಿ ಮಾರಾಟವಾಗದ 76 ಆಟಗಾರರಲ್ಲಿ ಬಾಂಗ್ಲಾದೇಶದ ಆಲ್ ರೌಂಡರ್ ಮತ್ತು ಮಾಜಿ ನಾಯಕ ಶಕೀಬ್ ಅಲ್ ಹಸನ್ ಕೂಡ ಒಬ್ಬರಾಗಿದ್ದಾರೆ. ಶಕೀಬ್ 2011ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಐಪಿಎಲ್‍ನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಐಪಿಎಲ್ ವಿಜೇತ ತಂಡದ ಭಾಗವಾಗಿದ್ದರು.
Advertisement
Advertisement
ಈ ಹಿಂದೆ ಶಕೀಬ್ ಅವರನ್ನು ಐಪಿಎಲ್‍ನಲ್ಲಿ ಒಂದೆರಡು ಫ್ರಾಂಚೈಸಿಗಳು ಸಂಪರ್ಕಿಸಿದ್ದವು. ಆದರೆ ದಕ್ಷಿಣ ಆಫ್ರಿಕಾದ ಸರಣಿಗಾಗಿ ರಾಷ್ಟ್ರೀಯ ತಂಡಕ್ಕೆ ಅವರು ಆಯ್ಕೆಯಾದ ಹಿನ್ನೆಲೆ, ಅವರು ಐಪಿಎಲ್‍ನ ಪೂರ್ಣ ಆವೃತ್ತಿಯಲ್ಲಿ ಉಳಿದುಕೊಳ್ಳಲಾಗದ ಕಾರಣ ಅವರನ್ನು ಖರೀದಿಸಲು ಯಾವುದೇ ತಂಡಗಳು ಮುಂದಾಗಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಹಾರಿದವ ಒಬ್ಬ, ಹಿಡಿದವ ಇನ್ನೊಬ್ಬ – ಮ್ಯಾಕ್ಸ್‌ವೆಲ್ ಕ್ಯಾಚ್ ಕಂಡು ದಂಗಾದ ಫೀಲ್ಡರ್
Advertisement
ಕೆಲವು ತಂಡಗಳು ಅವರನ್ನು ಸಂಪರ್ಕಿಸಿದವು. ಆದರೆ ಶ್ರೀಲಂಕಾದ ಸರಣಿಯಿಂದಾಗಿ ಅವರು ಐಪಿಎಲ್‍ನ ಪೂರ್ಣ ಆವೃತ್ತಿಯವರೆಗೆ ಲಭ್ಯರಿಲ್ಲ. ಅದೇ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಿಲ್ಲ. ಇದು ಅಂತ್ಯವಲ್ಲ ಮುಂದಿನ ವರ್ಷ ಮತ್ತೆ ಐಪಿಎಲ್ ಬರುತ್ತೇ ನಿರಾಶೆಗೊಳಗಾಗಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದರು.
Advertisement
ಶಕೀಬ್ ಐಪಿಎಲ್‍ನ ಕೊನೆಯ ಎರಡು ಸೀಸನ್‍ಗಳಲ್ಲಿ 11 ಪಂದ್ಯಗಳಲ್ಲಿ ಕೇವಲ 56 ರನ್‍ಗಳನ್ನು ಗಳಿಸಿ ಕೇವಲ 6 ವಿಕೆಟ್‍ಗಳನ್ನು ಪಡೆದಿದ್ದಾರೆ. ಅವರು ಈ ಹಿಂದೆ ಐಪಿಎಲ್ 2020ರ ಸೀಸನ್ ಸಹ ಕಳೆದುಕೊಂಡಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್
ಒಂದು ವೇಳೆ ಐಪಿಎಲ್ 2022ರ ಕಾರಣದಿಂದಾಗಿ ಶಕೀಬ್ ದಕ್ಷಿಣ ಆಫ್ರಿಕಾ ಸರಣಿಯನ್ನು ಕಳೆದುಕೊಂಡಿದ್ದರೆ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿತ್ತು. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಐಪಿಎಲ್‍ಗೆ ಆಯ್ಕೆಯಾಗಲು ಅವರು ಶ್ರೀಲಂಕಾ ಸರಣಿಯನ್ನು ಬಿಟ್ಟುಬಿಡಬೇಕಾಗಿತ್ತು ಎಂದು ತಿಳಿಸಿದರು.
ಬಾಂಗ್ಲಾದೇಶ ಕ್ರಿಕೆಟ್ ತಂಡವು ಇದೇ ಮಾರ್ಚ್ ಅಂತ್ಯದಲ್ಲಿ ಮತ್ತು ಏಪ್ರಿಲ್ ಆರಂಭದಲ್ಲಿ, ಐಪಿಎಲ್ 2022ರ ಮಧ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.
ಅಫ್ಘಾನಿಸ್ತಾನ ವಿರುದ್ಧದ ಸರಣಿಯ ನಂತರ ಬಾಂಗ್ಲಾ ತಂಡವು 3 ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈ ಗೊಳ್ಳಲಾಗಿದೆ. ಏಕದಿನ ಸರಣಿಯು ಮಾರ್ಚ್ 23 ರಂದು ಪೂರ್ಣಗೊಳ್ಳುತ್ತದೆ. ಎರಡು ಟೆಸ್ಟ್ ಪಂದ್ಯಗಳು ಏಪ್ರಿಲ್ 12 ರವರೆಗೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆ ಬಾಂಗ್ಲಾ ಆಟಗಾರರು ಐಪಿಎಲ್‍ನ ಮೊದಲ 15 ದಿನಗಳವರೆಗೆ ಲಭ್ಯವಿರುವುದಿಲ್ಲ.