ಮುಂಬೈ: ಕೊನೆಯ ಎಸೆತದಲ್ಲಿ ಕೆಕೆಆರ್ ಗೆಲುವಿಗೆ 3 ರನ್ ಬೇಕಾಗಿದ್ದ ವೇಳೆ ಲಕ್ನೋ ಗೆಲುವಿಗಾಗಿ ಮಾರ್ಕಸ್ ಸ್ಟೋಯಿನಿಸ್ ಎಸೆದ ಕೊನೆಯ ಎಸೆತದಲ್ಲಿ ಉಮೇಶ್ ಯಾದವ್ ಬೌಲ್ಡ್ ಆಗುವ ಮೂಲಕ ಸ್ಟನಿಂಗ್ ವಿನ್ನಿಂಗ್ ಮೂಮೆಂಟ್ ಲಕ್ನೋ ಪಾಲಾಯಿತು. ಈ ಮೂಲಕ ಲಕ್ನೋ ಪ್ಲೇ ಆಫ್‍ಗೆ ಎರಡನೇ ತಂಡವಾಗಿ ಎಂಟ್ರಿಕೊಟ್ಟಿದೆ.
Advertisement
ಗೆದ್ದಿದ್ದು ಹೇಗೆ?
19 ಓವರ್‌ನಲ್ಲಿ ಕೋಲ್ಕತ್ತಾಗೆ 17 ರನ್ ಹರಿದುಬಂತು. ಕೊನೆಯ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 21 ರನ್ ಬೇಕಾಗಿತ್ತು. ಸ್ಟೋಯಿನಿಸ್ ಎಸೆದ ಮೊದಲ ಎಸೆತವನ್ನೇ ರಿಂಕು ಸಿಂಗ್ ಬೌಂಡರಿಗಟ್ಟಿದರು, ಆ ಬಳಿಕ ಸತತ ಎರಡು ಎಸೆತಗಳನ್ನು ಸಿಕ್ಸ್ ಬಾರಿಸಿದರು. 4 ನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತದಲ್ಲಿ ರಿಂಕು ಸಿಂಗ್ ಔಟ್ ಆದರು. ಕೊನೆಯ ಎಸೆತದಲ್ಲಿ ಕೆಕೆಆರ್ ಗೆಲುವಿಗೆ 3 ರನ್ ಬೇಕಾಗಿತ್ತು. ಉಮೇಶ್ ಯಾದವ್ ಕ್ರೀಸ್‍ನಲ್ಲಿದ್ದರು. ಆದರೆ ಸ್ಟೋಯಿನಿಸ್ ಎಸೆದ ಯಾರ್ಕರ್ ಎಸೆತವನ್ನು ಜಡ್ಜ್ ಮಾಡಲು ಎಡವಿದ ಯಾದವ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಕೆಕೆಆರ್ ಸೋತರೆ, ಲಕ್ನೋ 2 ರನ್‍ಗಳ ರೋಚಕ ಜಯ ಸಾಧಿಸಿತು.
Advertisement
Advertisement
ಲಕ್ನೋ ನೀಡಿದ 211 ರನ್‍ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಕೆಕೆಆರ್ ಆರಂಭದಲ್ಲಿ ನಿಧಾನವಾಗಿ ಕಂಡರು, ಕೊನೆಯಲ್ಲಿ ರೋಚಕವಾಗಿತ್ತು. ಕೋಲ್ಕತ್ತಾ ಪರ ನಿತೀಶ್ ರಾಣಾ 42 ರನ್ (22 ಎಸೆತ, 9 ಬೌಂಡರಿ), ಶ್ರೇಯಸ್ ಅಯ್ಯರ್ 50 ರನ್ (29 ಎಸೆತ, 4 ಬೌಂಡರಿ, 3 ಸಿಕ್ಸ್) ಮತ್ತು ಬಿಲ್ಲಿಂಗ್ಸ್ 36 ರನ್ (24 ಎಸೆತ, 2 ಬೌಂಡರಿ, 3 ಸಿಕ್ಸ್) ಬಾರಿಸಿ ಔಟ್ ಆದರು. ಆ ಬಳಿಕ ರಿಂಕು ಸಿಂಗ್ 40 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ಚಚ್ಚಿ ಹೋರಾಡಿ ಕೊನೆಯಲ್ಲಿ ವಿಕೆಟ್ ಕೈ ಚೆಲ್ಲಿ ಕೆಕೆಆರ್ ಸೋಲುವಂತಾದರು.
Advertisement
ಈ ಮೊದಲು ಟಾಸ್‍ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ರಾಹುಲ್ ನಿರ್ಧಾರಕ್ಕೆ ಆರಂಭದಿಂದಲೇ ಬೆಂಬಲವಾಗಿ ಕ್ವಿಂಟನ್ ಡಿ ಕಾಕ್ ನಿಂತರು.
ರಾಹುಲ್, ಡಿಕಾಕ್ ದಾಖಲೆಯ ಆಟ
ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ಈ ಜೋಡಿ ಕೆಲ ಓವರ್‌ಗಳ ಆಟದ ಬಳಿಕ ಇಬ್ಬರೂ ಕೂಡ ಕೆಕೆಆರ್ ಬೌಲರ್‌ಗಳ ಮೇಲೆ ಸವಾರಿ ಆರಂಭಿಸಿದರು. ಡಿಕಾಕ್ ಅಂತೂ ಬೌಂಡರಿ, ಸಿಕ್ಸ್ ಸಿಡಿಸಿ ಕೆಕೆಆರ್ ಬೌಲರ್‌ಗಳ ಬೆವರಿಳಿಸಿದರು.
ಕೋಲ್ಕತ್ತಾದ 6 ಮಂದಿ ಬೌಲರ್‌ಗಳು ದಾಳಿಗಿಳಿದರೂ ರನ್ ವೇಗಕ್ಕೆ ಬ್ರೇಕ್ ಹಾಕುವಲ್ಲಿ ಸಾಧ್ಯವಾಗಲಿಲ್ಲ. ಮೊದಲ ಎಸೆತದಿಂದ ಕೊನೆಯ ಎಸೆತದ ವರೆಗೆ ಕೆಕೆಆರ್ ತಂಡವನ್ನು ಕಾಡಿದ ಈ ಜೋಡಿ ಅಜೇಯ 210 ರನ್ (120 ಎಸೆತ) ಗಳಿಂದ ಮೊದಲನೇ ವಿಕೆಟ್‍ಗೆ ದಾಖಲೆಯ ಜೊತೆಯಾಟವಾಡಿ ಮಿಂಚಿತು.
ಡಿಕಾಕ್ ಅಜೇಯ 140 ರನ್ (70 ಎಸೆತ, 10 ಬೌಂಡರಿ, 10 ಸಿಕ್ಸ್) ಮತ್ತು ರಾಹುಲ್ 68 ರನ್ (51 ಎಸೆತ, 3 ಬೌಂಡರಿ, 4 ಸಿಕ್ಸ್) ಚಚ್ಚಿ ಬಿಸಾಕಿದರು. ಈ ಮೂಲಕ ಲಕ್ನೋ ವಿಕೆಟ್ ನಷ್ಟವಿಲ್ಲದೆ 20 ಓವರ್‌ಗಳಲ್ಲಿ 210 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಇತ್ತ ಕೆಕೆಆರ್ ಬೌಲರ್‌ಗಳ ಪಾಡಂತೂ ಹೇಳತೀರದಾಯಿತು. ಒಂದು ವಿಕೆಟ್ ಪಡೆಯಲಾಗದೆ, ಭರ್ಜರಿ ರನ್ ನೀಡಿ ದುಬಾರಿ ಎನಿಸಿಕೊಂಡರು.
ರನ್ ಏರಿದ್ದು ಹೇಗೆ?
44 ಎಸೆತ 50 ರನ್
77 ಎಸೆತ 100 ರನ್
104 ಎಸೆತ 150 ರನ್
200 ಎಸೆತ 118 ರನ್
210 ಎಸೆತ 120 ರನ್