ಮುಂಬೈ: ಚೆನ್ನೈ ಮತ್ತು ಲಕ್ನೋ ನಡುವಿನ ರೋಚಕವಾದ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಗೈದ ಬ್ಯಾಟ್ಸ್‌ಮ್ಯಾನ್‌ಗಳ ನೆರವಿನಿಂದ ಸಿಎಸ್‍ಕೆ ವಿರುದ್ಧ ಲಕ್ನೋ 6 ವಿಕೆಟ್‍ಗಳ ರೋಚಕ ಜಯ ದಾಖಲಿಸಿದೆ.
Advertisement
ಲಕ್ನೋ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 34 ರನ್ ಬೇಕಿತ್ತು. 19ನೇ ಓವರ್‌ನಲ್ಲಿ 25 ರನ್ ಹರಿದುಬಂತು. 20ನೇ ಓವರ್ ಮೊದಲ ಎಸೆತವನ್ನೆ ಸಿಕ್ಸರ್‌ಗಟ್ಟಿ ಆಯುಷ್ ಬದೋನಿ ಗೆಲುವಿನ ನಗೆ ತರಿಸಿದರು.
Advertisement
211 ರನ್‍ಗಳ ಬೃಹತ್ ಮೊತ್ತ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾಯಿತು. ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 99 ರನ್ (62 ಎಸೆತ) ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟಿತು. ರಾಹುಲ್ 40 ರನ್ (26 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಡಿ ಕಾಕ್ ಮಾತ್ರ ಸಿಎಸ್‍ಕೆ ಬೌಲರ್‌ಗಳನ್ನು ದಂಡಿಸುತ್ತ ಅರ್ಧಶತಕ ಸಿಡಿಸಿ ಮಿಂಚಿದರು.
Advertisement
Advertisement
ಡಿ ಕಾಕ್ 61 ರನ್ (45 ಎಸೆತ, 9 ಬೌಂಡರಿ) ಸಿಡಿಸಿ ಔಟ್ ಆದರು. ಕೊನೆಗೆ ಎವಿನ್ ಲೆವಿಸ್ ಅಜೇಯ 55 ರನ್ (23 ಎಸೆತ, 6 ಬೌಂಡರಿ, 3 ಸಿಕ್ಸ್) ಮತ್ತು ಆಯುಷ್ ಬದೋನಿ 19 ರನ್ (9 ಎಸೆತ, 2 ಸಿಕ್ಸ್) ಸಿಡಿಸಿ 19.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 211 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದರು.
ಈ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲಿ ಋತುರಾಜ್ ಗಾಯಕ್ವಾಡ್ ವಿಕೆಟ್ ಬೇಗನೆ ಕಳೆದುಕೊಂಡಿತು. ಆ ಬಳಿಕ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಮೋಯಿನ್ ಅಲಿ ಲಕ್ನೋ ಬೌಲರ್‌ಗಳನ್ನು ಚೆಂಡಾಡಿದರು. ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸಿದ ಈ ಜೋಡಿ 2ನೇ ವಿಕೆಟ್‍ಗೆ 56 ರನ್ (30 ಎಸೆತ) ಜೊತೆಯಾಟವಾಡಿತು. ಉತ್ತಪ್ಪ 50 ರನ್ (27 ಎಸೆತ 8 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರೆ, ಅಲಿ 35 ರನ್ (22 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ ಪೆವಿಯನ್ ಸೇರಿದರು.
ಇವರಿಬ್ಬರು ಔಟ್ ಆದ ಬಳಿಕ ಜೊತೆಯಾದ ಶಿವಂ ದುಬೆ ಮತ್ತು ಅಂಬಾಟಿ ರಾಯುಡು ಸಿಎಸ್‍ಕೆ ರನ್ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಈ ಜೋಡಿ 4ನೇ ವಿಕೆಟ್‍ಗೆ 60 ರನ್ (37 ಎಸೆತ) ಜೊತೆಯಾಟವಾಡಿತು. ರಾಯುಡು 27 ರನ್ (20 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ದುಬೆ ಅಬ್ಬರ ಮುಂದುವರಿಯಿತು. ಆದರೆ ಇನ್ನೇನು ಅರ್ಧಶತಕ ಸಿಡಿಸಬೇಕೆನ್ನುವಷ್ಟರಲ್ಲಿ 49 ರನ್ (30 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ಕ್ಯಾಚ್ ನೀಡಿ ಹೊರನಡೆದರು. ಇನ್ನಿಂಗ್ಸ್‌ನ ಕೊನೆಯಲ್ಲಿ ರವೀಂದ್ರ ಜಡೇಜಾ 17 ರನ್ (9 ಎಸೆತ, 3 ಬೌಂಡರಿ) ಸಿಡಿಸಿ ಔಟ್ ಆದರು. ಧೋನಿ ಇನ್ನಿಂಗ್ಸ್‌ನ ಕೊನೆಯ ಎಸೆತವನ್ನು ಬೌಂಡರಿ ಚಚ್ಚಿ ಅಜೇಯ 16 ರನ್ (6 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದರು.
ಅಂತಿಮವಾಗಿ ಸಿಎಸ್‍ಕೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 210 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಲಕ್ನೋ ಪರ ಬೌಲಿಂಗ್‍ನಲ್ಲಿ ಅವೇಶ್ ಖಾನ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು.
ರನ್ ಏರಿದ್ದು ಹೇಗೆ?
50 ರನ್ 28 ಎಸೆತ
100 ರನ್ 55 ಎಸೆತ
150 ರನ್ 92 ಎಸೆತ
200 ರನ್ 115 ಎಸೆತ
210 ರನ್ 120 ಎಸೆತ