ಮುಂಬೈ: ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
Advertisement
15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ರಾಜಸ್ಥಾನ ಫ್ರಾಂಚೈಸಿ ಬೌಲಿಂಗ್ ಕೋಚ್ ಆಗಿ ಮಾಲಿಂಗರನ್ನು ನೇಮಕ ಮಾಡಿದೆ. ಮಾಲಿಂಗ ಈ ಹಿಂದೆ 2019ರ ವರೆಗೆ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾಗಿದ್ದರು. 2021ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಮಾಲಿಂಗ ಇದೀಗ ಐಪಿಎಲ್‍ನಲ್ಲಿ ಕೋಚ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್ ಎಸೆಯುವ ಮುನ್ನ ನಾನ್‍ಸ್ಟ್ರೈಕ್ ಬಿಟ್ಟರೆ ಉಳಿಗಾಲವಿಲ್ಲ
Advertisement
*???????????????????????? ???????????? ????????????????*
Lasith Malinga. IPL. Pink. ????#RoyalsFamily | #TATAIPL2022 | @ninety9sl pic.twitter.com/p6lS3PtlI3
— Rajasthan Royals (@rajasthanroyals) March 11, 2022
Advertisement
ಮಾಲಿಂಗ ಐಪಿಎಲ್‍ನಲ್ಲಿ 2009 ರಿಂದ 2019ರ ವರೆಗೆ ಒಟ್ಟು 122 ಪಂದ್ಯಗಳನ್ನು ಆಡಿ 170 ವಿಕೆಟ್ ಪಡೆದಿದ್ದಾರೆ. ಇದೀಗ ಕೋಚ್ ಆಗಿ ಕಾರ್ಯನಿರ್ವಹಿಸಲು ಸಿದ್ಧರಾಗಿದ್ದಾರೆ. ರಾಜಸ್ಥಾನ ತಂಡದ ಮೆಂಟರ್ ಆಗಿ ಕುಮಾರ ಸಂಗಕ್ಕಾರ ಇದ್ದು, ನಾಯಕರಾಗಿ ಸಂಜು ಸ್ಯಾಮ್ಸನ್ ತಂಡದಲ್ಲಿದ್ದಾರೆ. ಮಾರ್ಚ್ 29 ರಂದು ರಾಜಸ್ಥಾನ ರಾಯಲ್ಸ್ ತಂಡ ಮೊದಲ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶ್ರೀಶಾಂತ್ ವಿದಾಯ
Advertisement
15ನೇ ಆವೃತ್ತಿ ಐಪಿಎಲ್ ಮಾರ್ಚ್ 26 ರಂದು ಐಪಿಎಲ್ ಆರಂಭವಾಗುತ್ತಿದ್ದು, ಮುಂಬೈ ಮತ್ತು ಪುಣೆಯಲ್ಲಿ ಒಟ್ಟು 70 ಲೀಗ್ ಮತ್ತು 4 ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಒಟ್ಟು 65 ದಿನಗಳ ಕಾಲ ಟೂರ್ನಿ ನಡೆಯಲಿದೆ.