ಪುಣೆ: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಸ್ಟಾರ್ ಆಲ್‍ರೌಂಡರ್ ಆಂಡ್ರೆ ರಸೆಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಿ ಹೈದರಾಬಾದ್ ವಿರುದ್ಧ 54 ರನ್‍ಗಳ ಗೆಲುವಿನ ರೂವಾರಿಯಾದರು. ಜೊತೆಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿಡುವಲ್ಲಿ ನೆರವಾದರು.
ಕೋಲ್ಕತ್ತಾ ನೀಡಿದ 178 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ರಸೆಲ್ ಪ್ರಮುಖ ಮೂರು ವಿಕೆಟ್ ಕಿತ್ತು ಮುಳುವಾದರು. ಇತ್ತ ಬ್ಯಾಟಿಂಗ್ ವೈಫಲ್ಯದಿಂದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್ ಪೇರಿಸಲಷ್ಟೇ ಶಕ್ತವಾಗಿ ಸೋಲುಂಡಿತು. ಜೊತೆಗೆ ತನ್ನ ಪ್ಲೇ ಆಫ್ ಹಾದಿಯನ್ನು ಇನ್ನಷ್ಟು ದುರ್ಗಮಗೊಳಿಸಿಕೊಂಡಿದೆ.
Advertisement
ಹೈದರಾಬಾದ್ ಪರ ಅಭಿಷೇಕ್ ಶರ್ಮಾ 43 ರನ್ (28 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಮಾಕ್ರಾರ್ಮ್ 32 ರನ್ (25 ಎಸೆತ, 3 ಸಿಕ್ಸ್) ಬಾರಿಸಿದನ್ನು ಹೊರತು ಪಡಿಸಿ ಇನ್ನೂಳಿದ 7 ಮಂದಿ ಆಟಗಾರರು ಒಂದಂಕಿ ಮೊತ್ತಕ್ಕೆ ಸುಸ್ತಾದರು.
Advertisement
Advertisement
ಈ ಮೊದಲು ಟಾಸ್ ಗೆದ್ದ ಕೋಲ್ಕತ್ತಾ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ಆದರೆ ಕೋಲ್ಕತ್ತಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ 7 ರನ್‍ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು.
Advertisement
ಈ ಮೊದಲು ಟಾಸ್ ಗೆದ್ದ ಕೋಲ್ಕತ್ತಾ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ಆದರೆ ಕೋಲ್ಕತ್ತಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ 7 ರನ್‍ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು.
ನಂತರ ಒಂದಾದ ಅಜಿಂಕ್ಯಾ ರಹಾನೆ ಮತ್ತು ನಿತೀಶ್ ರಾಣಾ ಕೋಲ್ಕತ್ತಾ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ದೊಡ್ಡ ಮೊತ್ತ ಪೇರಿಸಲು ಈ ಜೋಡಿ ವಿಫಲವಾಯಿತು. ರಹಾನೆ 28 ರನ್ (24 ಎಸೆತ, 3 ಸಿಕ್ಸ್) ಮತ್ತು ರಾಣಾ 26 ರನ್ (16 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ 2ನೇ ವಿಕೆಟ್‍ಗೆ 48 ರನ್ (33) ಜೊತೆಯಾಟವಾಡಿ ಈ ಜೋಡಿ ಬೇರ್ಪಟ್ಟಿತು.
ಉಮ್ರಾನ್ ಮಲಿಕ್ ಘಾತಕ ದಾಳಿ
ಕೋಲ್ಕತ್ತಾದ ಅಗ್ರಕ್ರಮಾಂಕದ ಮೇಲೆ ಹೈದರಾಬಾದ್ ಘಾತಕ ವೇಗಿ ಉಮ್ರಾನ್ ಮಲಿಕ್ ತಮ್ಮ ಉರಿ ಚೆಂಡಿನ ದಾಳಿಯ ಮೂಲಕ ಪ್ರಮುಖ 3 ವಿಕೆಟ್ ಕಿತ್ತು ಸವಾರಿ ನಡೆಸಿದರು. ಆ ಬಳಿಕ ಕೋಲ್ಕತ್ತಾ ತಂಡಕ್ಕೆ ಸ್ಯಾಮ್ ಬಿಲ್ಲಿಂಗ್ಸ್ ಮತ್ತು ರಸೆಲ್ ರನ್ ಹೆಚ್ಚಿಸುವ ಸಾಹಸಕ್ಕೆ ಮುಂದಾದರು.
ಬಿಲ್ಲಿಂಗ್ಸ್ 34 ರನ್ (29 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ 18ನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಇತ್ತ ರೆಸೆಲ್ ಮಾತ್ರ ತಮ್ಮ ಎಂದಿನ ಹೊಡಿಬಡಿ ಆಟದ ಮೂಲಕ ಕೆಲಕಾಲ ಪ್ರೇಕ್ಷಕರನ್ನು ರಂಜಿಸಿದರು. ಜೊತೆಗೆ ಅಜೇಯ 49 ರನ್ (28 ಎಸೆತ, 3 ಬೌಂಡರಿ, 4 ಸಿಕ್ಸ್) ಚಚ್ಚಿ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು.
ಅಂತಿಮವಾಗಿ ಕೋಲ್ಕತ್ತಾ ತಂಡ 6 ವಿಕೆಟ್ ಕಳೆದುಕೊಂಡು 177 ರನ್ ಪೇರಿಸಿತು. ಹೈದರಾಬಾದ್ ಪರ ಉಮ್ರಾನ್ ಮಲಿಕ್ 3 ವಿಕೆಟ್ ಕಿತ್ತು ಮಿಂಚಿದರೆ, ಭುವನೇಶ್ವರ್ ಕುಮಾರ್, ಜಾನ್ಸನ್ ಮತ್ತು ನಟರಾಜನ್ ತಲಾ 1 ವಿಕೆಟ್ ಪಡೆದರು.