ಮುಂಬೈ: ಕೋಲ್ಕತ್ತಾ ಗೆಲುವಿಗಾಗಿ ಬ್ಯಾಟಿಂಗ್‍ನಲ್ಲಿ ರಿಂಕು ಸಿಂಗ್ ಮತ್ತು ನಿತೇಶ್ ರಾಣಾ ಹೋರಾಟ ಕಡೆಗೂ ಯಶಸ್ವಿ ಕಂಡು ರಾಜಸ್ಥಾನ ವಿರುದ್ಧ 7 ವಿಕೆಟ್‍ಗಳ ಜಯ ದಾಖಲಿಸಿತು.
Advertisement
ರಾಜಸ್ಥಾನ ನೀಡಿದ 153 ರನ್‍ಗಳ ಸಣ್ಣ ಮೊತ್ತವನ್ನು ಬೆನ್ನಟ್ಟಲು ತಿಣುಕಾಡಿದ ಕೋಲ್ಕತ್ತಾ ತಂಡ ಕಡೆಗೆ ರಾಣಾ ಅಜೇಯ 48 ರನ್ (37 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ರಿಂಕು ಸಿಂಗ್ 42 ರನ್ (23 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿದ ನೆರವಿನಿಂದ ಸೋಲಿನ ಸುಳಿಯಿಂದ ತಪ್ಪಿಸಿಕೊಂಡಿತು. ಕೊನೆಯ ಹಂತದಲ್ಲಿ ರಾಜಸ್ಥಾನ ತಂಡದ ಬೌಲರ್‌ಗಳ ಮುಂದೆ ಮೇಲುಗೈ ಸಾಧಿಸಿದ ಕೋಲ್ಕತ್ತಾ 3 ವಿಕೆಟ್ ಕಳೆದುಕೊಂಡು 158 ರನ್ ಸಿಡಿಸಿ ಇನ್ನೂ 5 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಅಂತರದ ಗೆಲುವಿನ ಸಂಭ್ರಮ ಆಚರಿಸಿತು.
Advertisement
Advertisement
ಸಣ್ಣ ಮೊತ್ತವನ್ನು ಚೇಸ್ ಮಾಡುವ ಹುಮ್ಮಸ್ಸಿನಲ್ಲಿ ಕಣಕ್ಕಿಳಿದ ಕೋಲ್ಕತ್ತಾ ಬ್ಯಾಟ್ಸ್‌ಮ್ಯಾನ್‌ಗಳು ರಾಜಸ್ಥಾನ ಸ್ಥಾನದ ಬೌಲರ್‌ಗಳ ಮುಂದೆ ಕೇವಲ 32 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡರು. ನಂತರ ಒಂದಾದ ಶ್ರೇಯಸ್ ಅಯ್ಯರ್ ಮತ್ತು ನಿತೇಶ್ ರಾಣಾ ರಾಜಸ್ಥಾನ ಬೌಲರ್‌ಗಳಿಗೆ ತಿರುಗೇಟು ನೀಡಿದರು. 3ನೇ ವಿಕೆಟ್‍ಗೆ ಈ ಜೋಡಿ 60 ರನ್ (43 ಎಸೆತ) ಒಟ್ಟುಗೂಡಿಸಿ ಬೇರ್ಪಟ್ಟಿತು. ಅಯ್ಯರ್ ಉಪಯುಕ್ತ 34 ರನ್ (32 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಈ ಗೆಲುವಿನಲ್ಲಿ ರಿಂಕು, ರಾಣಾ ಜೋಡಿ 4ನೇ ವಿಕೆಟ್‍ಗೆ 66 ರನ್ (38 ಎಸೆತ) ಜೊತೆಯಾಟವಾಡಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ತಂಡ ಈ ಬಾರಿ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ದೇವದತ್ ಪಡಿಕ್ಕಲ್ 2 ರನ್‍ಗಳಿಗೆ ಗಂಟು ಮೂಟೆ ಕಟ್ಟಿದರು. ಬಟ್ಲರ್ ನಿಧಾನವಾಗಿ ಅಬ್ಬರಿಸುವ ಸೂಚನೆ ನೀಡಿದರೂ ಅವರ ಆಟ 22 ರನ್ (25 ಎಸೆತ, 3 ಬೌಂಡರಿ)ಗೆ ಅಂತ್ಯವಾಯಿತು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿಯಾಗಿ ನಿಂತು ಹೋರಾಟ ನಡೆಸಿದ ಸಂಜು ಸ್ಯಾಮ್ಸನ್ 54 ರನ್ (49 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿ ಕೆಲ ಹೊತ್ತು ರಾಜಸ್ಥಾನದ ರನ್ ಏರಿಕೆಗೆ ಮುಂದಾದರು.
ನಂತರ ಕೆಲ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಅಜೇಯ 27 ರನ್ (13 ಎಸೆತ, 1 ಬೌಂಡರಿ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ 150ರ ಗಡಿದಾಟಿತು. ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಕೆಕೆಆರ್ ಬೌಲರ್‌ಗಳು ರಾಜಸ್ಥಾನ ತಂಡದ 5 ವಿಕೆಟ್ ಕಿತ್ತು 152 ರನ್‍ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.