ಮುಂಬೈ: ಕೋಲ್ಕತ್ತಾ ತಂಡದ ಸ್ಟಾರ್ ಆಲ್‍ರೌಂಡರ್ ಆಂಡ್ರೆ ರೆಸೆಲ್ ಆಟಕ್ಕೆ ಬೆಚ್ಚಿಬಿದ್ದ ಪಂಜಾಬ್ ಕೆಕೆಆರ್‌ಗೆ ತಲೆಬಾಗಿದೆ.
Advertisement
ಗೆಲುವಿಗೆ 138 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ರೆಸೆಲ್ ಮತ್ತು ಬಿಲ್ಲಿಂಗ್ಸ್ 12 ಓವರ್‌ನಲ್ಲಿ ಬರೋಬ್ಬರಿ 30 ರನ್ ಚಚ್ಚಿದ್ರು. 12ನೇ ಓವರ್ ಎಸೆಯಲು ಬಂದ ಓಡೆನ್ ಸ್ಮಿತ್‍ರ ಮೊದಲ ಎಸೆತವನ್ನು ಬೌಂಡರಿಗಟ್ಟಿದ ರೆಸೆಲ್ ಮುಂದಿನ 2 ಎಸೆತಗಳನ್ನು ಸಿಕ್ಸರ್‌ಗಟ್ಟಿದರು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತ ಮತ್ತೆ ಸಿಕ್ಸ್, ಕೊನೆಯ ಎಸೆತ ನೋ ಬಾಲ್ 2 ರನ್ ಬಂತು. ಫ್ರಿ ಹಿಟ್‍ನಲ್ಲಿ ಬಿಲ್ಲಿಂಗ್ಸ್ ಸಿಕ್ಸ್ ಸಿಡಿಸಿ ಒಟ್ಟು 30 ರನ್ ಕಸಿದರು.
Advertisement
Advertisement
ಅಂತಿಮವಾಗಿ ರಸೆಲ್ ಅಜೇಯ 70 ರನ್ (31 ಎಸೆತ, 2 ಬೌಂಡರಿ, 8 ಸಿಕ್ಸ್) ಮತ್ತು ಬಿಲ್ಲಿಂಗ್ಸ್ 24 ರನ್ (23 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ 14.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 141 ಸಿಡಿಸಿ ಕೆಕೆಆರ್‌ಗೆ ಗೆಲುವು ತಂದುಕೊಟ್ಟರು.
Advertisement
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಆರಂಭದಲ್ಲೇ ಉಮೇಶ್ ಯಾದವ್ ದಾಳಿಗೆ ತತ್ತರಿಸಿತು. ಪಂಜಾಬ್‍ನ ಆರಂಭಿಕ ಜೋಡಿ ಮಯಾಂಕ್ ಅಗರ್‌ವಾಲ್ 1 ರನ್ ಮತ್ತು ಶಿಖರ್ ಧವನ್ 16 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಬೇಗನೆ ಪೆವಿಯನ್ ಸೇರಿಕೊಂಡರು. ಆ ಬಳಿಕ ಭಾನುಕಾ ರಾಜಪಕ್ಸೆ 31 ರನ್ (9 ಎಸೆತ, 3 ಸಿಕ್ಸ್, 3 ಬೌಂಡರಿ) ಸಿಡಿಸಿದ್ದನ್ನು ಹೊರತು ಪಡಿಸಿ ಕಗಿಸೊ ರಬಾಡ ಕೊನೆಯಲ್ಲಿ 25 ರನ್ (16 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 130ರ ಗಡಿದಾಟಿಸಿದರು.
ಅಂತಿಮವಾಗಿ ಪಂಜಾಬ್ 18.2 ಓವರ್‌ಗಳಲ್ಲಿ 137 ರನ್‍ಗಳಿಗೆ ಆಲೌಟ್ ಆಯಿತು. ಉಮೇಶ್ ಯಾದವ್ 4 ವಿಕೆಟ್ ಕಿತ್ತು ಮಿಂಚಿದರೆ, ಟೀಮ್ ಸೌಥಿ 2 ಮತ್ತು ಶಿವಂ ಮಾವಿ, ಸುನೀಲ್ ನರೇನ್, ರಸೆಲ್ ತಲಾ 1 ವಿಕೆಟ್ ಕಿತ್ತರು.