ಪುಣೆ: ಪ್ಯಾಟ್ಸ್ ಕಮ್ಮಿನ್ಸ್ ಸಿಡಿಲಬ್ಬರದ ಬ್ಯಾಟಿಂಗ್‍ಗೆ ಬೆಚ್ಚಿ ಬಿದ್ದ ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲು ಅನುಭವಿಸಿದೆ. ಕೆಕೆಆರ್ 5 ವಿಕೆಟ್‍ಗಳ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
Advertisement
162 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ಆರಂಭಿಕ ಆಘಾತ ಅನುಭವಿಸಿತು. ರಹಾನೆ 7 ರನ್ ಮತ್ತು ಶ್ರೇಯಸ್ ಅಯ್ಯರ್ 10 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ವೆಂಕಟೇಶ್ ಅಯ್ಯರ್ ತಂಡಕ್ಕೆ ಆಧಾರವಾದರು. ಆರಂಭದಿಂದ ಕೊನೆಯ ವರೆಗೆ ತಂಡಕ್ಕಾಗಿ ಹೋರಾಡಿದ ಅಯ್ಯರ್ ಅಜೇಯ 50 ರನ್ (41 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಬಿರುಸಿನ ಬ್ಯಾಟಿಂಗ್ ಮೂಲಕ ಮುಂಬೈಗೆ ನಡುಕ ಹುಟ್ಟಿಸಿದ ಪ್ಯಾಟ್ ಕಮ್ಮಿನ್ಸ್ 56 ರನ್ ಕೇವಲ 15 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸ್) ಚಚ್ಚಿ ಇನ್ನೂ 24 ಎಸೆತ ಬಾಕಿ ಇರುವಂತೆ ಕೋಲ್ಕತ್ತಾ ತಂಡಕ್ಕೆ 5 ವಿಕೆಟ್‍ಗಳ ಗೆಲುವು ತಂದುಕೊಟ್ಟರು.
Advertisement
Advertisement
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ 2ನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ 3 ರನ್, 7ನೇ ಓವರ್‌ನಲ್ಲಿ ಡೆವಾಲ್ಡ್ ಬ್ರೆವಿಸ್ 29 ರನ್ (19 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು 10ನೇ ಓವರ್‌ನಲ್ಲಿ ಇಶಾನ್ ಕಿಶನ್ 14 ರನ್ (21 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಕಳೆದುಕೊಂಡಿತು.
Advertisement
ಆ ಬಳಿಕ ಒಂದಾದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮುಂಬೈ ತಂಡಕ್ಕೆ ನೆರವಾದರು. ಉತ್ತಮ ಜೊತೆಯಾಟದ ಮೂಲಕ ರನ್ ಕಲೆ ಹಾಕಿದ ಈ ಜೋಡಿ 4ನೇ ವಿಕೆಟ್‍ಗೆ 83 ರನ್ (49 ಎಸೆತ)ಗಳ ಜೊತೆಯಾಟವಾಡಿತು. ಯಾದವ್ 52 ರನ್ (36 ಎಸೆತ, 5 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಬಂದ ಪೋಲಾರ್ಡ್ ಬಿರುಸಿನ 22 ರನ್ (5 ಎಸೆತ, 3 ಸಿಕ್ಸ್) ಮತ್ತು ತಿಲಕ್ ವರ್ಮಾ ಅಜೇಯ 38 ರನ್ (27 ಎಸೆತ, 3 ಬೌಂಡರಿ, 2 ಸಿಕ್ಸ್) ನೆರವಿನಿಂದ ನಿಗದಿತ ಓವರ್‌ಗಳಲ್ಲಿ ಮುಂಬೈ 4 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತು.
ಕೋಲ್ಕತ್ತಾ ಪರ ಪ್ಯಾಟ್ ಕಮ್ಮಿನ್ಸ್ 2 ಮತ್ತು ಉಮೇಶ್ ಯಾದವ್, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.