ಮುಂಬೈ: ಐಪಿಎಲ್ ಇತಿಹಾಸದಲ್ಲಿ ದುಬಾರಿ ಬೆಲೆ ನೀಡಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಲಕ್ನೋ ತಂಡ ಖರೀದಿಸಿ ನಾಯಕ ಪಟ್ಟ ನೀಡಿದೆ.
ಹರಾಜಿಗೂ ಮೊದಲು ಲಕ್ನೋ ತಂಡ ಮೂವರು ಆಟಗಾರರನ್ನು ಆರಿಸಿಕೊಂಡಿದೆ. ಕೆಎಲ್ ರಾಹುಲ್ ಜೊತೆ ಆಸ್ಟ್ರೇಲಿಯದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಭಾರತದ ಯುವ ಆಟಗಾರ ರವಿ ಬಿಷ್ಣೋಯ್ ಅವರನ್ನು ಲಕ್ನೋ ತಂಡ ಖರೀದಿಸಿದೆ.
Advertisement
We wanted the best and we didn't settle for less. ????????#TeamLucknow #IPL2022 @klrahul11 @MStoinis @bishnoi0056 pic.twitter.com/p9oM8M9tHy
— Lucknow Super Giants (@LucknowIPL) January 21, 2022
Advertisement
ರಾಹುಲ್ ಅವರಿಗೆ ಬರೋಬ್ಬರಿ 17 ಕೋಟಿ ರೂ. ನೀಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರನಾಗಿ ರಾಹುಲ್ ಹೊರಹೊಮ್ಮಿದ್ದಾರೆ. ಸ್ಟೊಯಿನಿಸ್ 9.2 ಕೋಟಿ ರೂ. ಬಿಷ್ಣೋಯ್ ಅವರನ್ನು 4 ಕೋಟಿ ರೂ. ನೀಡಿ ಲಕ್ನೋ ತಂಡ ಖರೀದಿ ಮಾಡಿದೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್
Advertisement
ಈ ಹಿಂದೆ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ ನೀಡಿ ರಾಜಸ್ಥಾನ ತಂಡ ಖರೀದಿಸಿತ್ತು. ಈ ಬಾರಿ ಐಪಿಎಲ್‌ನಲ್ಲಿ ಚೆನ್ನೈ ತಂಡ ರವೀಂದ್ರ ಜಡೇಜಾ ಅವರಿಗೆ 16 ಕೋಟಿ ರೂ., ಧೋನಿಗೆ 12 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡರೆ, ಆರ್‌ಸಿಬಿ 15 ಕೋಟಿ ರೂ. ನೀಡಿ ಕೊಹ್ಲಿ ಅವರನ್ನು ಉಳಿಸಿಕೊಂಡಿದೆ.
Advertisement
ಮೆಗಾ ಹರಾಜಿನ ಮೊದಲು ಡ್ರಾಫ್ಟ್ ಪಿಕ್‌ನ ಭಾಗವಾಗಿ ಲಭ್ಯವಿರುವ ಆಟಗಾರರ ಪೈಕಿ ಇಬ್ಬರು ಭಾರತೀಯ, ಒಬ್ಬ ವಿದೇಶಿ ಆಟಗಾರನನ್ನು ಆರಿಸಿಕೊಳ್ಳಲು ಲಕ್ನೋ ಮತ್ತು ಅಹಮದಾಬಾದ್ ತಂಡಕ್ಕೆ ಐಪಿಎಲ್ ಆಡಳಿತ ಮಂಡಳಿ ಅವಕಾಶ ನೀಡಿತ್ತು.
ರಾಹುಲ್ ಕಳೆದ ಎರಡು ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಹುಲ್ ಮುನ್ನಡೆಸಿದ್ದರು. ಸ್ಟೊಯಿನಿಸ್ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದರೆ ಬಿಷ್ಣೋಯ್ ಪಂಜಾಬ್ ತಂಡದಲ್ಲಿ ಆಡಿದ್ದರು. ಇದನ್ನೂ ಓದಿ: ಒಂದೇ ರೈಡ್‍ನಲ್ಲಿ 8 ಅಂಕ – ವಿವಾದಾತ್ಮಕ ತೀರ್ಪು, ಸೋತ ಬುಲ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಐಪಿಎಲ್ ಆಟ ಆರಂಭಿಸಿದ್ದ ರಾಹುಲ್ 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೇರಿದ್ದರು. 2018ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 11 ಕೋಟಿ ರೂ. ನೀಡಿ ರಾಹುಲ್ ಅವರನ್ನು ಖರೀದಿಸಿತ್ತು.