ಮುಂಬೈ: ಸತತ ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಮುಂಬೈ ಇಂಡಿಯನ್ಸ್ ಆಸೆಗೆ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ತಣ್ಣೀರು ಎರಚಿದೆ. 165 ರನ್‌ಗಳ ಸಾಧಾರಣ ಮೊತ್ತ ಗಳಿಸಿದರೂ ಕೆಕೆಆರ್ ತಂಡವು ಮುಂಬೈ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿ, ಪ್ಲೇ ಆಫ್ ಕನಸು ಜೀವಂತವಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ, 166 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 17.3 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 113 ರನ್‌ಗಳಿಸಿ, ಸೋಲನ್ನು ಒಪ್ಪಿಕೊಂಡಿತು.
Advertisement
Advertisement
ಟಾಸ್ ಗೆದ್ದು ಮೊದಲು ಫೀಲ್ಡಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡವು (MI) ಐಪಿಎಲ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಚೊಚ್ಚಲ 5 ವಿಕೆಟ್ (10ಕ್ಕೆ 5) ಸಾಧನೆ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 165 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಬ್ಯಾಟ್ಸ್ಮನ್‌ಗಳ ವೈಫಲ್ಯ ಕಂಡಿತು. ಮತ್ತೆ ಫಾರ್ಮ್ ಕಳೆದುಕೊಂಡ ರೋಹಿತ್ ಶರ್ಮಾ 2 ರನ್‌ಗಳಿಗೆ ಮಂಡಿಯೂರಿದರು.
Advertisement
Advertisement
ಇದರ ಬೆನ್ನಲ್ಲೇ ತಿಲಕ್‌ವರ್ಮಾ 6 ರನ್, ರಮಣದೀಪ್ ಸಿಂಗ್ 12 ರನ್, ಟಿಮ್ ಡೇವಿಡ್ 13 ರನ್‌ಗಳಿಸಿ ಹೊರ ನಡೆದರು. ಆದರೂ ಕೆಕೆಆರ್ ವಿರುದ್ಧ ಸತತ ಹೋರಾಟ ನಡೆಸಿದ ಇಶಾನ್ ಕಿಶನ್ ಜವಾಬ್ದಾರಿ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ 51 ರನ್ (1 ಸಿಕ್ಸರ್, 5 ಬೌಂಡರಿ) ಗಳಿಸಿ 43ನೇ ಎಸೆತದಲ್ಲಿ ಬೌಂಡರಿ ಕ್ಯಾಚ್ ನೀಡಿದರು. ಆದರೂ ಕಿರನ್ ಪೋಲಾರ್ಡ್ ಅವರ ನಿಲುವಿನಿಂದ ಗೆಲುವಿನ ಕನಸು ಉಳಿಸಿಕೊಂಡಿದ್ದ ಮುಂಬೈ 17ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸ್ ಎತ್ತುವ ಪ್ರಯತ್ನದಲ್ಲಿ ಕೀಪರ್ ಕ್ಯಾಚ್ ನೀಡಿದರು. ಇದರಿಂದ ಮುಂಬೈ ಸಂಪೂರ್ಣ ಗೆಲುವಿನ ಭರವಸೆ ಕಳೆದುಕೊಂಡಿತು. ಪೊಲಾರ್ಡ್ 15 ರನ್‌ಗಳಿಸಿ ಹೊರನಡೆದರು.
ಬೂಮ್ರಾ ಮಾರಕ ದಾಳಿ: ಪವರ್‌ಪ್ಲೇ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 60 ರನ್ ಕಲೆಹಾಕಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ (ಕೆಕೆಆರ್)ಗೆ ಕಡಿವಾಣ ಹಾಕಿದ್ದು ಮುಂಬೈ ಪ್ರೈಮ್ ಬೌಲರ್ ಜಸ್ಪಿತ್ ಬುಮ್ರಾ. 18ನೇ ಓವರ್‌ನಲ್ಲಿ ಮೇಡನ್ ಸೇರಿದಂತೆ 3 ವಿಕೆಟ್ ಕಬಳಿಸಿದ ಜಸ್ಪಿತ್ ಬುಮ್ರಾ ಐಪಿಎಲ್‌ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದು ಕೇವಲ ಐಪಿಎಲ್ ಅಷ್ಟೇ ಅಲ್ಲದೆ ಟಿ20 ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಬೌಲರ್ ಆಗಿ ಮಿಂಚಿದ್ದಾರೆ.
4 ಓವರ್‌ಗೆ ಕೇವಲ 10 ರನ್ ನೀಡಿ 1 ಮೇಡನ್ ಸೇರಿದಂತೆ 5 ವಿಕೆಟ್ ಪಡೆದ ದಾಖಲೆಯನ್ನ ಬುಮ್ರಾ ಮಾಡಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ ಕೇವಲ 1 ರನ್ ನೀಡಿದ ಬುಮ್ರಾ ಬೌಲಿಂಗ್ ದಾಳಿಗೆ ಕೆಕೆಆರ್ 165 ರನ್ ಗಳಿಸಲಷ್ಟೇ ಶಕ್ತವಾಯಿತು. 2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್ ನೀಡಿ 4 ವಿಕೆಟ್ ಪಡೆದಿದ್ದು ಬುಮ್ರಾರ ಇದುವರೆಗಿನ ಬೆಸ್ಟ್ ಬೌಲಿಂಗ್ ಆಗಿತ್ತು. ಈ ಮೂಲಕ ಬೂಮ್ರಾ 10 ರನ್ ನೀಡಿ ಐಪಿಎಲ್‌ನಲ್ಲಿ 5 ವಿಕೆಟ್ ಸಾಧನೆ ಮಾಡಿದರು.
15ನೇ ಓವರ್‌ನಲ್ಲಿ ರಸೆಲ್ ಜೊತೆಗೆ ನಿತೀಶ್ ರಾಣಾ ಅವರನ್ನು ತಮ್ಮ ಮಿಂಚಿನ ಬೌಲಿಂಗ್ ದಾಳಿಯಿಂದ ಹೊರ ದಬ್ಬಿದರು. ಪರಿಣಾಮ 14.5 ಓವರ್‌ಗಳಲ್ಲಿ 139 ರನ್ನಿಗೆ 5 ವಿಕೆಟ್ ಕಳೆದುಕೊಂಡಿತು. 26 ಎಸೆತಗಳನ್ನು ಎದುರಿಸಿದ ರಾಣಾ 43 ರನ್ (4 ಸಿಕ್ಸರ್, 3 ಬೌಂಡರಿ) ಗಳಿಸಿ ಹೊರನಡೆದರು. 18ನೇ ಓವರ್‌ನಲ್ಲಿ ಮತ್ತೆ 3 ವಿಕೆಟ್ ಗಳಿಸಿದ ಬೂಮ್ರಾ ಬಲವಾದ ಪೆಟ್ಟು ನೀಡಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೋಲ್ಕತ್ತ ಪರ ನಿತೀಶ್ ರಾಣಾ ಹಾಗೂ ವೆಂಕಟೇಶ್ ಅಯ್ಯರ್ ತಲಾ 43 ರನ್ ಗಳಿಸಿದರು. ಇಬ್ಬರ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಈ ಪಂದ್ಯಕ್ಕಾಗಿ ಕೆಕೆಆರ್ ತಂಡದಲ್ಲಿ 5 ಬದಲಾವಣೆಗಳನ್ನು ತರಲಾಗಿತ್ತು. ಮಗದೊಮ್ಮೆ ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಹಾಗೂ ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 60 ರನ್ ಪೇರಿಸಿದರು. ಅಜಿಂಕ್ಯಾ ರಹಾನೆ 24 ಎಸೆತಗಳಲ್ಲಿ 25 ರನ್ ಬಾರಿಸಿದರೆ, ವೆಂಕಟೇಶ್ 24 ಎಸೆತಗಳಲ್ಲಿ 43 ರನ್ (4 ಸಿಕ್ಸರ್, 3 ಬೌಂಡರಿ) ಸಿಡಿಸಿ ಮಿಂಚಿದರು.
ಬಳಿಕ ಕ್ರೀಸ್‌ಗಿಳಿಸಿದ ನಿತೀಶ್ ರಾಣಾ ಮುಂಬೈ ವಿರುದ್ಧ ಹೋರಾಡಿದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ವೆಂಕಟೇಶ್ ವಿಕೆಟ್ ನಷ್ಟವಾಯಿತು. 24 ಎಸೆತಗಳನ್ನು ಎದುರಿಸಿದ ವೆಂಕಟೇಶ್ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಕ್ರೀಸ್‌ಗಿಳಿಯುವ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದೇಕೆ? ರಹಸ್ಯ ಬಿಚ್ಚಿಟ್ಟ ಮಿಶ್ರಾ
ಭರವಸೆಯ ಆಟಗಾರ ಆಂಡ್ರೆ ರಸೆಲ್ (9 ರನ್), ನಾಯಕ ಶ್ರೇಯಸ್ ಅಯ್ಯರ್ (6ರನ್) ಇಬ್ಬರ ಬ್ಯಾಟಿಂಗ್ ವೈಫಲ್ಯ ತಂಡವನ್ನು 170 ಗಡಿಯೊಳಗೇ ಕಟ್ಟಿಹಾಕಿತು. 13ನೇ ಓವರ್ ಮುಕ್ತಾಯದ ವೇಳೆಗೆ 131 ರನ್‌ಗಳಿದ್ದರೂ ಸಹ ನಂತರ ಪ್ರಮುಖ ಬ್ಯಾಟ್ಸ್ಮನ್‌ಗಳ ಬ್ಯಾಟಿಂಗ್ ವೈಫಲ್ಯ ತಂಡವನ್ನು ಅತೀ ಕಡಿಮೆ ರನ್‌ಗಳಲ್ಲೇ ಕಟ್ಟಿ ಹಾಕಿತು.
ಶೆಲ್ಡನ್ ಜ್ಯಾಕ್ಸನ್ 5 ರನ್ ಗಳಿಸಿದರೆ, ಪ್ಯಾಟ್ ಕಮಿನ್ಸ್ ಹಾಗೂ ಸುನಿಲ್ ನಾರಾಯಣ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರೆ, ವರುಣ್ ಚಕ್ರವರ್ತಿ ಯಾವುದೇ ರನ್ ಕಲೆ ಹಾಕದೆ ಅಜೇಯರಾಗಿ ಉಳಿದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ 19 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದರು. ಒಟ್ಟಿನಲ್ಲಿ ಕೆಕೆಆರ್ ತಂಡದ ಪರ ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿಯೇ ಕೆಕೆಆರ್ 20 ಓವರ್‌ಗಳಲ್ಲಿ ಸಾಧಾರಣ ಮೊತ್ತ ದಾಖಲಿಸಿತು.
ಕಮಿನ್ಸ್, ರಸೆಲ್ ಬೌಲಿಂಗ್ ಕಮಾಲ್: ಪ್ರಮುಖ ಬ್ಯಾಟ್ಸ್ಮನ್‌ಗಳ ವೈಫಲ್ಯ ಎದುರಿಸಿದ ಕೆಕೆಆರ್ ತಂಡದಲ್ಲಿ ಪ್ಯಾಟ್ ಕಮಿನ್ಸ್, ಆಂಡ್ರೆ ರಸೆಲ್ ಬೌಲಿಂಗ್‌ನಲ್ಲಿ ಕಮಾಲ್ ಮಾಡಿದರು. 2 ಓವರ್‌ಗಳಲ್ಲಿ 21 ರನ್ ನೀಡಿದ ರಸೆಲ್ 2 ವಿಕೆಟ್ ಪಡೆದರೆ, ಕಮಿನ್ಸ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಉರುಳಿಸಿದರು.