ಮುಂಬೈ: ಐಪಿಎಲ್ 2022ರ ಆವೃತ್ತಿಗೆ ಈಗಾಗಲೇ ಕೋವಿಡ್-19ನ ಕರಿನೆರಳು ಆವರಿಸಿದ್ದು, ಮೊನ್ನೆ ತಾನೆ ದೆಹಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರಿಗೆ ಕೋವಿಡ್ ಧೃಡವಾಗಿತ್ತು. ಈಗ ದೆಹಲಿ ಕ್ಯಾಪಿಟಲ್ಸ್‌ನ ಆಲ್‍ರೌಂಡರ್ ಮಿಚೆಲ್ ಮಾರ್ಷ್‍ಗೂ ಕೂಡಾ ಕೋವಿಡ್ ದೃಢವಾಗಿದೆ.
Advertisement
ಈ ಸಂಬಂಧ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಅವರ ಮುಂದಿನ ಪಂದ್ಯಕ್ಕೆ ಮುಂಚಿತವಾಗಿ ಪುಣೆಗೆ ತೆರಳಲು ಡಿಸಿ ತಮ್ಮ ಪ್ರಯಾಣದ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ಇಡೀ ತಂಡವು ಪ್ರಸ್ತುತ ಮುಂಬೈನಲ್ಲಿ ಕ್ವಾರಂಟೈನ್‍ನಲ್ಲಿದೆ. ಆಸ್ಟ್ರೇಲಿಯನ್ ಆಲ್ ರೌಂಡರ್ ಆದ ಅವರಿಗೆ ಕೊರೊನಾದ ಕೆಲವು ರೋಗಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಅವರಿಗೆ ರಾಪಿಡ್ ಆಂಟಿಜೆನ್ ಪರೀಕ್ಷೆಯನ್ನು ನಡೆಸಲಾಯಿತು ಎಂದು ತಿಳಿದುಬಂದಿದೆ.
Advertisement
Advertisement
ಮಿಚೆಲ್ ಮಾರ್ಷ್ ಅವರು ಇತ್ತಿಚಿಗಷ್ಟೇ ಗಾಯದಿಂದ ಚೇತರಿಸಿಕೊಂಡು ಐಪಿಎಲ್ 2022ಕ್ಕೆ ಪಾದಾರ್ಪಣೆ ಮಾಡಿದ್ದರು. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರೊಂದಿಗಿನ ನಿಕಟ ಸಂಪರ್ಕದಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದ ಕಾರಣ ಅವರಿಗೆ ಕೋವಿಡ್ ಸೋಂಕು ಹರಡಿದೆ ಎಂದು ಶಂಕೆ ವ್ಯಕ್ತವಾಗಿದೆ.
Advertisement
ಡಿಸಿ ಇಂದು ಪುಣೆಗೆ ಪ್ರಯಾಣಿಸಬೇಕಿತ್ತು. ಆದರೆ ಈಡೀ ತಂಡದ ಆಟಗಾರರನ್ನು ಆಯಾ ಕೊಠಡಿಗಳಲ್ಲಿ ಕ್ವಾರಂಟೈನ್‍ನಲ್ಲಿಡಲಾಗಿದೆ ಎಂದು ತಿಳಿಸಲಾಗಿದೆ. ಕೊರೊನಾವು ಏಕಾಏಕಿ ಹೇಗೆ ಸಂಭವಿಸಿತು ಹಾಗೂ ಪ್ಯಾಟ್ರಿಕ್ ಫರ್ಹಾರ್ಟ್ ಅವರ ಪ್ರತ್ಯೇಕ ಪ್ರಕರಣವೇ ಇದಕ್ಕೆಲ್ಲಾ ಮೂಲಕಾರಣವಿರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ತಂಡದ ಪ್ರತೀ ಆಟಗಾರರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಬಿಸಿಸಿಐ ಮೂಲವು ಸೋಮವಾರ ತಿಳಿಸಿದೆ.
ಈಗಾಗಲೇ ತಂಡದ ಮತ್ತೋರ್ವ ಸಹಾಯಕ ಸಿಬ್ಬಂದಿಯ ಸದಸ್ಯನಿಗೆ ಕೊರೊನಾದ ರೋಗಲಕ್ಷಣಗಳು ಕಂಡು ಬಂದಿದೆ. ಆದರೆ ಆರ್‌ಟಿಪಿಸಿಆರ್ ಫಲಿತಾಂಶಗಳಿಗೆ ಕಾಯಲಾಗುತ್ತಿದೆ. ಐಪಿಎಲ್‍ನ ಎಲ್ಲಾ ತಂಡಗಳು ಪುಣೆಯ ಕಾನ್ರಾಡ್ ಹೋಟೆಲ್‍ನಲ್ಲಿ ಉಳಿದುಕೊಂಡಿವೆ. ಹೋಟೆಲ್‍ನಲ್ಲಿ ಬಿಸಿಸಿಐ ಕೋವಿಡ್ ಸಲುವಾಗಿ ಬಯೋ ಬಬಲ್ ಅನ್ನು ರಚಿಸಿದೆ. ದೆಹಲಿ ತಂಡವು ಇವತ್ತಿಗಾಗಲೇ ಪುಣೆಯಲ್ಲಿರಬೇಕಾಗಿತ್ತು. ಆದರೆ ಕೋವಿಡ್‍ನಿಂದಾಗಿ ಸ್ವಲ್ಪ ವಿಳಂಬವಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.