ಮುಂಬೈ: ಗಾಯಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸ್ಟ್ರಾಂಗ್ ಕಮ್‍ಬ್ಯಾಕ್ ಮಾಡಿದ್ದು ಐಪಿಎಲ್‌ನಲ್ಲಿ ಹಳೆಯ ಲಯಕ್ಕೆ ಮರಳಿದ್ದಾರೆ.
ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದ ಪಾಂಡ್ಯ ಮೂರು ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‍ನಿಂದ ದೂರ ಸರಿದಿದ್ದರು. ಆ ಬಳಿಕ ಐಪಿಎಲ್‍ನ ನೂತನ ತಂಡ ಗುಜರಾತ್ ಟೈಟಾನ್ಸ್ ಪಾಂಡ್ಯರನ್ನು ಖರೀದಿಸಿ ತಂಡದ ನಾಯಕತ್ವ ವಹಿಸಿತ್ತು. ಕ್ರಿಕೆಟ್‍ಗೆ ಬ್ರೇಕ್ ಪಡೆದಿದ್ದ ಪಾಂಡ್ಯ 15ನೇ ಆವೃತ್ತಿ ಐಪಿಎಲ್‍ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್
ಹೌದು ಪಾಂಡ್ಯ ಗುಜರಾತ್ ತಂಡದ ನಾಯಕತ್ವದ ಜೊತೆಗೆ ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗ್‍ನಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‍ರನ್ನು ತಮ್ಮ ಬುಲೆಟ್ ಥ್ರೋ ಮೂಲಕ ರನ್ ಔಟ್ ಬಲೆಗೆ ಬೀಳಿಸಿದ ಪಾಂಡ್ಯರ ಡೈರೆಕ್ಟ್ ಹಿಟ್ ವಿಕೆಟ್ ಮುರಿದು ಬೀಳುವಷ್ಟು ಪವರ್‌ಫುಲ್ ಆಗಿತ್ತು. ಇದನ್ನೂ ಓದಿ: ಐಪಿಎಲ್ ಟಿಆರ್‌ಪಿ ದಿಢೀರ್ ಕುಸಿತ – ಇಲ್ಲಿದೆ ಅಸಲಿ ಕಾರಣ
https://twitter.com/Cricupdates2022/status/1514647359220686857
ಪಾಂಡ್ಯ ಈ ಬಾರಿಯ ಐಪಿಎಲ್‍ನಲ್ಲಿ 5 ಪಂದ್ಯಗಳಿಂದ 2 ಅರ್ಧಶತಕ ಸಹಿತ 228 ರನ್ ಮತ್ತು 4 ವಿಕೆಟ್ ಪಡೆದು ಆಲ್‍ರೌಂಡರ್ ಆಗಿ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಈ ಮೂಲಕ ಪಾಂಡ್ಯ ಮತ್ತೆ ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಕೋಟಾ ತುಂಬಲು ವಾಪಸ್ ಬಂದಿರುವಂತೆ ಸೌಂಡ್ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ಬಲಿಷ್ಠ ತಂಡ ಕಟ್ಟುವ ಯೋಜನೆಯಲ್ಲಿರುವ ಟೀಂ ಇಂಡಿಯಾಗೆ ಪಾಂಡ್ಯ ಆಲ್‍ರೌಂಡರ್ ವಿಭಾಗದಲ್ಲಿ ಮೊದಲ ಆಯ್ಕೆ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಈ ಮೂಲಕ ಪವರ್‌ಫುಲ್ ಕಮ್‍ಬ್ಯಾಕ್‍ಗೆ ಪಾಂಡ್ಯಗೆ ಈ ಬಾರಿಯ ಐಪಿಎಲ್ ವೇದಿಕೆಯಾದಂತಿದೆ.