Advertisements

ಹೈದರಾಬಾದ್‍ಗೆ ಹೈ ಟೆನ್ಷನ್‌ ನೀಡಿ ಪಂದ್ಯ ಕಸಿದ ಬಿಗ್ ಹಿಟ್ಟರ್ಸ್‌ – ಗುಜರಾತ್‍ಗೆ ರೋಚಕ ಜಯ

ಮುಂಬೈ: ಹೈದರಾಬಾದ್ ನೀಡಿದ ಬೃಹತ್ ಟಾರ್ಗೆಟ್‍ನ್ನು ಶತಾಯ ಗತಾಯ ಬೆನ್ನಟ್ಟುವ ಶಪಥ ಮಾಡಿದಂತೆ ಬ್ಯಾಟ್‍ಬೀಸಿದ ಗುಜರಾತ್‍ನ ಬಿಗ್ ಹಿಟ್ಟರ್ಸ್‍ಗಳಾದ ರಶೀದ್ ಖಾನ್ ಮತ್ತು ರಾಹುಲ್ ತೆವಾಟಿಯಾ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಗುಜರಾತ್‍ಗೆ 5 ವಿಕೆಟ್‍ಗಳ ರೋಚಕ ಜಯ ತಂದುಕೊಟ್ಟಿದ್ದಾರೆ.

Advertisements

ಕೊನೆಯ 6 ಎಸೆತಗಳಲ್ಲಿ 22 ರನ್ ಗುರಿ ಪಡೆದ ಗುಜರಾತ್ ತಂಡಕ್ಕೆ ಬಿಗ್ ಹಿಟ್ಟರ್‌ಗಳಾದ ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ ಗೆಲುವಿಗಾಗಿ ಟೊಂಕಕಟ್ಟಿ ನಿಂತರು. ಅದರಲ್ಲೂ ರಶೀದ್ ಖಾನ್ 3 ಎಸೆತಗಳನ್ನು ಸಿಕ್ಸರ್ ಗಟ್ಟಿ ಕೊನೆಯ ಎಸೆತದಲ್ಲಿ ಗುಜರಾತ್‍ಗೆ 5 ವಿಕೆಟ್‍ಗಳ ರೋಚಕ ಗೆಲುವು ದಕ್ಕಿಸಿದರು.

Advertisements

ಹೈದರಾಬಾದ್ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಹಾ ಆರಂಭದಲ್ಲೇ ಗೆಲುವಿನ ಆಸೆ ಮೂಡಿಸಿದರು. ಸ್ಫೋಟಕ ಆಟದ ಮೂಲಕ ಗಮನಸೆಳೆದ ಸಹಾ 68 ರನ್ (38 ಎಸೆತ, 11 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಇವರಿಗೆ ಉತ್ತಮ ಸಾಥ್ ನೀಡಿದ ಶುಭಮನ್ ಗಿಲ್ 22 ರನ್ (24 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಮಧ್ಯಮಕ್ರಮಾಂಕದಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಅಂತಿಮವಾಗಿ ತೇವಾಟಿಯ ಅಜೇಯ 40 ರನ್ (21 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ರಶೀದ್ ಕಾನ್ 31 ರನ್ (11 ಎಸೆತ, 4 ಸಿಕ್ಸ್) ಬಾರಿಸಿ ಹೈದರಾಬಾದ್ ಗೆಲುವಿನ ಕನಸಿಗೆ ತಣ್ಣಿರೇಚಿದರು.

Advertisements

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಕೇನ್ ವಿಲಿಯಮ್ಸನ್ 5 ರನ್ ಮತ್ತು ರಾಹುಲ್ ತ್ರಿಪಾಠಿ 16 ರನ್ (10 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ನೀಡಿ ಹೊರನಡೆದರು.

ಶರ್ಮಾ, ಮಾಕ್ರಾಮ್ ಬ್ಯಾಟಿಂಗ್ ಜುಗಲ್‍ಬಂದಿ
ಆ ಬಳಿಕ ಅಭಿಷೇಕ್ ಶರ್ಮಾ ಮತ್ತು ಮಾಕ್ರಾಮ್ ಅಸಲಿ ಆಟ ಆರಂಭಿಸಿದರು. ಇಬ್ಬರೂ ಕೂಡ ಗುಜರಾತ್ ಬೌಲರ್‌ಗಳ ಎಸೆತಗಳನ್ನು ಸಮರ್ಥವಾಗಿ ಎದುರಿಸಿ ಹೈದರಾಬಾದ್‍ಗೆ ಬಿಗ್ ಸ್ಕೋರ್ ಕಲೆಹಾಕುವ ಸೂಚನೆ ನೀಡಿದರು. ಅಭಿಷೇಕ್ ಶರ್ಮಾ 65 ರನ್ (42 ಎಸೆತ, 6 ಬೌಂಡರಿ, 3 ಸಿಕ್ಸ್) ಮತ್ತು ಮಾಕ್ರಾಮ್ 56 ರನ್ (40 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಔಟ್ ಆಗುವ ಮೊದಲು 3ನೇ ವಿಕೆಟ್‍ಗೆ 96 ರನ್ (61 ಎಸೆತ) ಒಟ್ಟುಗೂಡಿಸಿ ಮಿಂಚಿದರು.

ಇವರಿಬ್ಬರು ಔಟ್ ಆದ ಬಳಿಕ ಕೊನೆಯಲ್ಲಿ ಶಶಾಂಕ್ ಸಿಂಗ್ ಕೇವಲ 6 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸ್ ನೆರವಿನಿಂದ 25 ರನ್ ಚಚ್ಚಿ ಗಮನಸೆಳೆದರು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 195 ರನ್ ಪೇರಿಸಿತು. ಗುಜರಾತ್ ಪರ ಶಮಿ 3 ವಿಕೆಟ್ ಕಿತ್ತು ಹೈದರಾಬಾದ್‍ಗೆ ಆಘಾತ ನೀಡಿದರು.

ರನ್ ಏರಿದ್ದು ಹೇಗೆ?
50 ರನ್ 32 ಎಸೆತ
100 ರನ್ 67 ಎಸೆತ
150 ರನ್ 101 ಎಸೆತ
195 ರನ್ 120 ಎಸೆತ

Advertisements
Exit mobile version