ಮುಂಬೈ: ಐಪಿಎಲ್ 15ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಗ್ರ ಕ್ರಮಾಂಕದ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಮತ್ತು ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ.
ಅಹಮದಾಬಾದ್‌ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಇಂದು ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ. ನೂತನವಾಗಿ ಸೇರ್ಪಡೆಗೊಂಡ ಗುಜರಾತ್ ಟೈಟಾನ್ಸ್ ತಂಡವು ಮೊದಲ ಪ್ರಯತ್ನದಲ್ಲೇ ಫೈನಲ್ಸ್ ಪ್ರವೇಶಿಸಿದ್ದು, ಈ ಬಾರಿ ಚಾಂಪಿಯನ್ ಆಗುವ ನಿರೀಕ್ಷೆ ಮೂಡಿಸಿದೆ. 2008ರ ಬಳಿಕ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿರುವ ರಾಜಾಸ್ಥಾನ ರಾಯಲ್ಸ್ ಸಹ 2ನೇ ಬಾರಿಗೆ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.
Advertisement
Advertisement
ಐಪಿಎಲ್ ಆರಂಭಗೊಂಡಾಗ ಲೀಗ್‌ನಲ್ಲೇ ಹೊರಬೀಳುತ್ತವೆ ಎಂಬ ಟೀಕೆಗಳನ್ನು ಮೀರಿ ಉಭಯ ತಂಡದ ನಾಯಕರಾದ ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ಫೈನಲ್‌ವರೆಗೂ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ.
Advertisement
ಟೈಟಾನ್ಸ್ ಬೌಲಿಂಗ್, ರಾಯಲ್ಸ್ ಬ್ಯಾಟಿಂಗ್: ರಾಜಾಸ್ಥಾನ್ ರಾಯಲ್ಸ್‌ನ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾನ್ಸನ್, ದೇವದತ್ ಪಡಿಕ್ಕಲ್, ಶಿಮೊನ್ ಹೆಟ್ಮಾಯರ್ ರಾಜಾಸ್ಥಾನ್ ರಾಯಲ್ಸ್‌ನಲ್ಲಿ ಬಲಿಷ್ಠ ಬ್ಯಾಟರ್‌ಗಳಿಗೆ ಗುಜರಾತ್ ಟೈಟಾನ್ಸ್ ಮೊಹಮದ್ ಶಮಿ, ರಶೀದ್ ಖಾನ್, ಅಲ್ವಾರಿ ಜೋಸೆಫ್, ಯಶ್ ದಯಾಳ್, ಸಾಯಿಕಿ ಶೋರ್‌ರ ಬೌಲರ್‌ಗಳಿಂದ ಕಠಿಣ ಸವಾಲು ಎದುರಾಗಲಿದೆ.
Advertisement
818 ರನ್‌ಗಳನ್ನು ಗಳಿಸಿ ಆರೆಂಜ್‌ಕ್ಯಾಪ್ ಮುಡಿಗೇರಿಸಿಕೊಂಡಿರುವ ಜೋಸ್ ಬಟ್ಲರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರನ್ನು ತಡೆಯುವುದು ಬೌಲರ್‌ಗಳಿಗೂ ಸವಾಲಾಗಿದೆ. ಈಗಾಗಲೇ ಮುಖಾಮುಖಿಯಾಗಿರುವ 2 ಪಂದ್ಯಗಳಲ್ಲಿ ಟೈಟಾನ್ಸ್ ಗೆಲುವು ಸಾಧಿಸಿದ್ದು, ಅಂತಿಮ ಫೈನಲ್ ಪಂದ್ಯದಲ್ಲಿ ಆರ್‌ಆರ್ ಗೆಲುವಿನ ಮೆಟ್ಟಿಲೇರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಇದರೊಂದಿಗೆ ಗುಜರಾತ್ ಬ್ಯಾಟರ್‌ಗಳಾದ ಶುಭಮನ್ ಗಿಲ್, ವೃದ್ಧಿಮಾನ್ ಸಾಹಾ, ಮ್ಯಾಥ್ಯು ವೇಡ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್‌ಗೆ ಪ್ರಸಿದ್ ಕೃಷ್ಣ, ಟ್ವೆಂಟ್ ಬೌಲ್ಟ್, ಆರ್.ಅಶ್ವಿನ್, ಯಜುವೇಂದ್ರ ಚಾಹಲ್, ಒಬೆಡ್ ಮೆಕಾಮ್‌ರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ಯಾವ ವರ್ಷ ಯಾರು ಚಾಂಪಿಯನ್?
- 2008 – ರಾಜಸ್ಥಾನ ರಾಯಲ್ಸ್
- 2009 – ಡೆಕ್ಕನ್ ಚಾರ್ಜರ್
- 2010 – ಚೆನ್ನೈ ಸೂಪರ್ ಕಿಂಗ್ಸ್
- 2011 – ಚೆನ್ನೈ ಸೂಪರ್‌ಕಿಂಗ್ಸ್
- 2012 – ಕೋಲ್ಕತ್ತಾ ನೈಟ್ ರೈಡರ್
- 2013 – ಮುಂಬೈ ಇಂಡಿಯನ್ಸ್
- 2014 – ಕೋಲ್ಕತ್ತಾ ನೈಟ್ ರೈಡರ್
- 2015 – ಮುಂಬೈ ಇಂಡಿಯನ್ಸ್
- 2016 – ಸನ್‌ರೈಸರ್ಸ್ ಹೈದರಾಬಾದ್
- 2017 – ಮುಂಬೈ ಇಂಡಿಯನ್ಸ್
- 2018 – ಚೆನ್ನೈ ಸೂಪರ್ ಕಿಂಗ್ಸ್
- 2019 – ಮುಂಬೈ ಇಂಡಿಯನ್ಸ್
- 2020 – ಮುಂಬೈ ಇಂಡಿಯನ್ಸ್
- 2021 – ಚೆನ್ನೈ ಸೂಪರ್‌ಕಿಂಗ್ಸ್