ಬಾಲಿವುಡ್‌ನ ಸ್ಟಾರ್ ನಟ ರಣ್‌ವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ತಾನ ರಾಯಲ್ಸ್ ಐಪಿಎಲ್ ಮ್ಯಾಚ್‌ಗೆ ಅತಿಥಿಯಾಗಿ ಬಂದು ಮ್ಯಾಚ್ ವೀಕ್ಷಿಸಿದ್ದಾರೆ. ಜೊತೆಗೆ ʻಕೆಜಿಎಫ್ʼ ಸೂಪರ್ ಹಿಟ್ ಹಾಡುಗಳಿಗೆ ರಣ್‌ವೀರ್ ಸಿಂಗ್ ಹೆಜ್ಜೆ ಹಾಕಿದ್ದಾರೆ.
ಅಹಮದ್‌ಬಾದ್‌ನ ಮೋದಿ ಕ್ರಿಡಾಂಗಣದಲ್ಲಿ ಭಾನುವಾರ ಐಪಿಲ್ ಮ್ಯಾಚ್‌ಗೆ ಕ್ರಿಡಾ ಅಭಿಮಾನಿಗಳ ಜೊತೆ ಬಾಲಿವುಡ್ ಸ್ಟರ‍್ಸ್ ಕೂ ಸಾಥ್ ನೀಡಿದ್ದಾರೆ. ಅಕ್ಷಯ್ ಕುಮಾರ್, ಎ.ಆರ್ ರೆಹಮಾನ್, ರಣ್‌ವೀರ್ ಸಿಂಗ್ ಕೂಡ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ತಾನ ರಾಯಲ್ಸ್ ಐಪಿಎಲ್ ಮ್ಯಾಚ್ ನೋಡಿ ಸವಿದಿದ್ದಾರೆ. ಈ ವೇಳೆ ಎ.ಆರ್ ರೆಹಮಾನ್ ಜೈ ಹೋ ಮತ್ತು ಮಾ ತುಜೇ ಸಲಾಮ್ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು ರಣ್‌ವೀರ್ ಸಿಂಗ್ ಕೆಹಿಎಫ್ ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ಶೂಟಿಂಗ್‍ಗೂ 9 ತಿಂಗಳ ಹಿಂದೆಯೇ ಪ್ರಿಪರೇಶನ್ ಮಾಡ್ಕೊಂಡೆ: ಸುದೀಪ್
Advertisement
ಹೆಮ್ಮೆಯ ಕ್ಷಣ PROUD MOMENT ????#IPL2022 #KGFChapter2#ನಮ್ಮHombale #ನಮ್ಮRCB@RCBTweets @hombalefilms
@TheNameIsYash @prashanth_neel @VKiragandur @duttsanjay @TandonRaveena @SrinidhiShetty7 @HombaleGroup @bhuvangowda84 @RaviBasrur @ChaluveG
— #KGFChapter2 – Box Office Monster ???? (@KGFTheFilm) May 29, 2022
Advertisement
`ಕೆಜಿಎಫ್’ ಸೂಪರ್ ಹಿಟ್ ಸಾಂಗ್ಸ್, ವಾತಿ ಕಮಿಂಗ್, ಆರ್‌ಆರ್‌ಆರ್ ಚಿತ್ರದ `ನಾಟು ನಾಟು’ ಸಾಂಗ್ ಸೇರಿದಂತೆ ಪತ್ನಿ ದೀಪಿಕಾ ನಟನೆಯ ಚಿತ್ರದ ಹಾಡುಗಳಿಗೂ ರಣ್‌ವೀರ್ ಸಿಂಗ್ ಕುಣಿದು ಕುಪ್ಪಳಿಸಿದ್ದಾರೆ. ಭರ್ಜರಿ ಐಪಿಎಫ್ ಮ್ಯಾಚ್ ಜತೆ ರಣ್‌ವೀರ್ ಜಬರ್‌ದಸ್ತ್ ಡ್ಯಾನ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.