2014ರ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದೇ ಐಪಿಎಲ್ ಫೈನಲ್

Public TV
2 Min Read
IPL 2022 1 2

ಅಹಮದಾಬಾದ್: 2014ರ ಐಪಿಎಲ್ ಬಳಿಕ ಮೊಟ್ಟ ಮೊದಲ ಬಾರಿಗೆ ಸ್ಟಾರ್ ಕ್ರಿಕೆಟ್ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಲ್ಲದ ತಂಡಗಳು ಐಪಿಎಲ್‍ನ ಫೈನಲ್ ಪಂದ್ಯವಾಡುತ್ತಿದೆ.

IPL 2022 5

ಹೌದು ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪಾರುಪತ್ಯ ಮೆರೆದಿದೆ. ಆದರೆ ಈ ಬಾರಿ ಈ ಎರಡು ತಂಡಗಳು ಲೀಗ್‍ನಲ್ಲೇ ತಮ್ಮ ಅಭಿಯಾನ ಮುಗಿಸಿದೆ. ಇತ್ತ ಭರ್ಜರಿ ಪ್ರದರ್ಶನದ ಮೂಲಕ ನೂತನ ತಂಡ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಫೈನಲ್ ಕಾದಾಟಕ್ಕೆ ಸಿದ್ಧವಾಗಿವೆ. ಇದನ್ನೂ ಓದಿ: ಟೈಟಾನ್ಸ್ Vs ರಾಯಲ್ಸ್ ಫೈನಲ್ – ಯಾರಾಗ್ತಾರೆ ಚಾಂಪಿಯನ್?

IPL 2022 RCB 2 2

2008ರಲ್ಲಿ ಐಪಿಎಲ್ ಆರಂಭವಾದಗಿನಿಂದಲೂ ಧೋನಿ, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಒಂದಲ್ಲ ಒಂದು ತಂಡದಲ್ಲಿ ಆಡಿ ಫೈನಲ್ ಪಂದ್ಯಕ್ಕೆ ಎಂಟ್ರಿಕೊಟ್ಟಿರುವ ಇತಿಹಾಸವಿದೆ. ಆದರೆ ಈ ಬಾರಿ ಈ ಮೂರು ಜನ ಆಟಗಾರರಿದ್ದ ತಂಡಗಳು ಫೈನಲ್‍ಗೆ ತಲುಪಲು ವಿಫಲಗೊಂಡಿದೆ. ಇದನ್ನೂ ಓದಿ: ಐಪಿಎಲ್ ಫೈನಲ್‍ನಲ್ಲಿ ಕರ್ನಾಟಕದ ಕಲಾ ತಂಡಗಳ ಮೆರುಗು

IPL 2022 CSK 3 1

ಐಪಿಎಲ್ ಇತಿಹಾಸ ನೋಡಿದಾಗ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಚಾಂಪಿಯನ್ ಆದರೆ, ಚೆನ್ನೈ 4 ಬಾರಿ ಪ್ರಶಸ್ತಿ ಗೆದ್ದಿದೆ. 2008, 2010, 2011, 2012, 2013, 2015, 2018, 2019, 2021ರಲ್ಲಿ ಚೆನ್ನೈ ತಂಡ ಫೈನಲ್‍ಗೆ ಲಗ್ಗೆ ಇಟ್ಟು 2010, 2011, 2018 ಮತ್ತು 2021ರಲ್ಲಿ ಧೋನಿ ತಂಡ ಚಾಂಪಿಯನ್ ಆಗಿತ್ತು. 2010, 2013, 2015, 2017, 2019, 2020 ಫೈನಲ್‍ಗೆ ತೇರ್ಗಡೆ ಹೊಂದಿದ್ದ ಮುಂಬೈ 2010ರಲ್ಲಿ ಸೋತು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದನ್ನು ಹೊರತು ಪಡಿಸಿ ಉಳಿದ ಎಲ್ಲಾ ಫೈನಲ್‍ಗಳನ್ನು ಗೆದ್ದಿತ್ತು. 2009, 2011, 2016 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್‍ಗೆ ಹೋಗಿತ್ತು. ಆದರೆ ಫೈನಲ್‍ನಲ್ಲಿ ಮುಗ್ಗರಿಸಿ ಮೂರು ಬಾರಿಯೂ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ವಿಫಲಗೊಂಡಿತ್ತು. ಈ ಎಲ್ಲಾ ಫೈನಲ್ ಪಂದ್ಯಗಳಲ್ಲಿ ಧೋನಿ, ಕೊಹ್ಲಿ, ರೋಹಿತ್ ಒಬ್ಬರಲ್ಲ ಒಬ್ಬರು ಆಡಿದ್ದರು. ಇದನ್ನೂ ಓದಿ: ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

IPL 2022 MI VS KKR 02

2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಫೈನಲ್ ತಲುಪಿತ್ತು ಈ ವೇಳೆ ಈ ಮೂರು ಜನ ಆಟಗಾರರಿಲ್ಲದ ತಂಡವೊಂದು ಮೊದಲ ಬಾರಿಗೆ ಐಪಿಎಲ್ ಫೈನಲ್ ಆಡಿತ್ತು. ಆ ಬಳಿಕ ಇದೀಗ 2022ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಈ ಮೂರು ಜನ ಆಟಗಾರರಿಲ್ಲದ ತಂಡವೊಂದು ಆಡುತ್ತಿದೆ.

ಇಂದು ಫೈನಲ್ ಪಂದ್ಯವಾಡುತ್ತಿರುವ ಗುಜರಾತ್ ಟೈಟಾನ್ಸ್ ಚೊಚ್ಚಲ ಆವೃತ್ತಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ರಾಜಸ್ಥಾನ ತಂಡ 14 ವರ್ಷಗಳ ಬಳಿಕ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕಾತರದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *