ಮುಂಬೈ: ಡೆಲ್ಲಿ ತಂಡದ ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಪರಿಣಾಮ ಮುಂಬೈ ವಿರುದ್ಧ 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.
Advertisement
16ನೇ ಓವರ್ ವರೆಗೂ ಮುಂಬೈ ಹಿಡಿತದಲ್ಲಿದ್ದ ಪಂದ್ಯ 16ನೇ ಓವರ್ ಬಳಿಕ ಡೆಲ್ಲಿ ಪರ ವಾಲಿತು. ಡೆಲ್ಲಿ ಬ್ಯಾಟ್ಸ್‌ಮ್ಯಾನ್‌ಗಳಾದ ಅಕ್ಷರ್ ಪಟೇಲ್ ಅಜೇಯ 38 ರನ್ (17 ಎಸೆತ, 2 ಬೌಂಡರಿ, 3 ಸಿಕ್ಸ್) ಮತ್ತು ಲಲಿತ್ ಯಾದವ್ 48 ರನ್ (4 ಬೌಂಡರಿ, 2 ಸಿಕ್ಸ್) ಸಿಡಿಸಿ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದರು. ಡೇನಿಯಲ್ ಸ್ಯಾಮ್ ಎಸೆದ 18ನೇ ಓವರ್‌ನಲ್ಲಿ ಬರೋಬ್ಬರಿ 24 ರನ್ ಚಚ್ಚಿದ ಈ ಜೋಡಿ ಡೆಲ್ಲಿ ತಂಡದ ಗೆಲುವನ್ನು ಖಾತ್ರಿ ಪಡಿಸಿತು. ಅಂತಿಮವಾಗಿ 18.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 179 ರನ್ ಸಿಡಿಸಿ ಡೆಲ್ಲಿ ಗೆಲುವು ಸಾಧಿಸಿತು. ಇದನ್ನೂ ಓದಿ: ಕೊನೆಯ ಓವರ್ ಥ್ರಿಲ್ಲರ್ – ಆ ಒಂದು ‘ನೋ ಬಾಲ್’ನಿಂದ ಭಾರತ ತಂಡ ಮನೆಗೆ
Advertisement
Advertisement
ಈ ಮೊದಲು ಪೃಥ್ವಿ ಶಾ 38 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್), ಟಿಮ್ ಸೀಫರ್ಟ್ 21 ರನ್ (14 ಎಸೆತ, 4 ಬೌಂಡರಿ) ಮತ್ತು ಶಾರ್ದೂಲ್ ಠಾಕೂರ್ 22 ರನ್ (11 ಎಸೆತ, 4 ಬೌಂಡರಿ) ಬಾರಿಸಿ ತಂಡಕ್ಕೆ ನೆರವಾದರು.
Advertisement
ಈ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ಬೆಂಡೆತ್ತಿದರು. ಈ ಜೋಡಿ ಮೊದಲ ವಿಕೆಟ್‍ಗೆ 67 ರನ್ (50 ಎಸೆತ)ಗಳ ಜೊತೆಯಾಟವಾಡಿತು. ರೋಹಿತ್ ಶರ್ಮಾ 41 ರನ್ (32 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು. ಇತ್ತ ಇಶಾನ್ ಕಿಶನ್ ಮಾತ್ರ ತಮ್ಮ ಬ್ಯಾಟಿಂಗ್ ಅಬ್ಬರ ನಿಲ್ಲಿಸಲಿಲ್ಲ. ಇತ್ತ ವಿಕೆಟ್ ಉರುಳುತ್ತಿದ್ದರು ರನ್ ಮಾತ್ರ ಸರಾಗವಾಗಿ ಹರಿದು ಬರತೊಡಗಿತು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋಲು – ಮಹಿಳಾ ವರ್ಲ್ಡ್‌ಕಪ್ ಟೂರ್ನಿಯಿಂದ ಭಾರತ ಔಟ್
ಮುಂಬೈ ಬ್ಯಾಟಿಂಗ್ ಸರದಿಯಲ್ಲಿ ತಿಲಕ್ ವರ್ಮ 22 ರನ್ (15 ಎಸೆತ, 3 ಬೌಂಡರಿ) ಸಿಡಿಸಿ ಕಿಶನ್‍ಗೆ ಸಾಥ್ ನೀಡಿದರು. ಇಶನ್ ಆರಂಭಿಕರಾಗಿ ಬಂದು ಇನ್ನಿಂಗ್ಸ್‌ನ ಕೊನೆಯ ವರೆಗೂ ಬ್ಯಾಟ್‍ಬೀಸಿ ಅಜೇಯ 81 ರನ್ (48 ಎಸೆತ, 11 ಬೌಂಡರಿ, 2 ಸಿಕ್ಸ್) ಸಿಡಿಸಿ ಮಿಂಚಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಮುಂಬೈ 5 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು.
ಡೆಲ್ಲಿ ಪರ ಕುಲ್‍ದೀಪ್ ಯಾದವ್ 3 ವಿಕೆಟ್ ಕಿತ್ತು ಮುಂಬೈನ ರನ್ ಓಟಕ್ಕೆ ಬ್ರೇಕ್ ಹಾಕಿದರು. ಖಲೀಲ್ ಅಹಮ್ಮದ್ 2 ವಿಕೆಟ್ ಪಡೆದು ಸೈ ಎನಿಸಿಕೊಂಡರು.