ಮುಂಬೈ: ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಕೋಲ್ಕತ್ತಾ ತಂಡವನ್ನು ಕಟ್ಟಿಹಾಕಿದ ಡೆಲ್ಲಿ ತಂಡ 44 ರನ್‍ಗಳ ಅಂತರದ ಜಯ ಸಾಧಿಸಿದೆ.
Advertisement
ಡೆಲ್ಲಿ ನೀಡಿದ 216 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ಪರ ಶ್ರೇಯಸ್ ಅಯ್ಯರ್ 54 ರನ್ (33 ಎಸೆತ, 5 ಬೌಂಡರಿ, 2 ಸಿಕ್ಸ್), ನಿತೇಶ್ ರಾಣಾ 30 ರನ್ (20 ಎಸೆತ, 3 ಸಿಕ್ಸ್), ಆಂಡ್ರೆ ರಸೆಲ್ 24 ರನ್ (21 ಎಸೆತ, 3 ಬೌಂಡರಿ) ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲರಾದರು. ಇದನ್ನೂ ಓದಿ: ಮುಂಬೈ ವಿರುದ್ಧದ ಗೆಲುವಿನ ಬಳಿಕ ಆರ್ಸಿಬಿಗೆ ಶಾಕ್ – ಬಯೋ ಬಬಲ್ ತೊರೆದ ಹರ್ಷಲ್ ಪಟೇಲ್
Advertisement
Advertisement
ಅಂತಿಮವಾಗಿ 19.4 ಓವರ್‌ಗಳಲ್ಲಿ 171 ರನ್‍ಗಳಿಗೆ ಕೆಕೆಆರ್ ಆಲೌಟ್ ಆಯಿತು. ಡೆಲ್ಲಿ 44 ಅಂತರದಿಂದ ಗೆದ್ದು ಬೀಗಿತು. ಇದನ್ನೂ ಓದಿ: ಧೋನಿ ಬಳಿಕ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶರ್ ಎನಿಸಿಕೊಂಡ ತೆವಾಟಿಯಾ
Advertisement
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ತಂಡ ಡೆಲ್ಲಿಯನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಮನಬಂದಂತೆ ಬ್ಯಾಟ್ ಬೀಸಿದರು. ಕೋಲ್ಕತ್ತಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 93 ರನ್ (52 ಎಸೆತ)ಗಳ ಜೊತೆಯಾಟವಾಡಿದರು. ಪೃಥ್ವಿ ಶಾ 51 ರನ್ (29 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.
ಆ ಬಳಿಕ ಪಂತ್ ಜೊತೆಗೂಡಿದ ವಾರ್ನರ್ ಮತ್ತಷ್ಟು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಅಂತಿಮವಾಗಿ ವಾರ್ನರ್ 61 ರನ್ (45 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ರಿಷಭ್ ಪಂತ್ 27 ರನ್ (14 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ 2ನೇ ವಿಕೆಟ್‍ಗೆ 55 ರನ್ (27 ಎಸೆತ) ಒಟ್ಟು ಸೇರಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಸ್ಲಾಗ್ ಓವರ್‌ಗಳಲ್ಲಿ ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಬೌಂಡರಿ, ಸಿಕ್ಸರ್‌ಗಳ ಅಸಲಿ ಆಟ ಶುರು ಹಚ್ಚಿಕೊಂಡು ತಂಡದ ಮೊತ್ತವನ್ನು 210ರ ಗಡಿದಾಟಿಸಿದರು. ಅಕ್ಷರ್ ಪಟೇಲ್ ಅಜೇಯ 22 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಠಾಕೂರ್ 29 ರನ್ (11 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ಮಿಂಚಿದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 215 ರನ್‍ಗಳ ಬೃಹತ್ ಮೊತ್ತ ಪೇರಿಸಿತು.
ರನ್ ಏರಿದ್ದು ಹೇಗೆ?
24 ಎಸೆತ 50 ರನ್
59 ಎಸೆತ 100 ರನ್
82 ಎಸೆತ 150 ರನ್
118 ಎಸೆತ 200 ರನ್
220 ಎಸೆತ 215 ರನ್