ಚೆನ್ನೈ: ಟೀಂ ಇಂಡಿಯಾದ ಯಶಸ್ವಿ ಸ್ಪಿನ್ನರ್ ಆರ್.ಅಶ್ವಿನ್ 15ನೇ ಆವೃತ್ತಿಯ ಐಪಿಎಲ್ ಹರಾಜಿಗೂ ಮುನ್ನ ನಾನು ಮತ್ತೆ ತವರು ತಂಡದ ಪರ ಆಡಲು ಇಚ್ಚಿಸುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.
Advertisement
ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚುಹರಿಸಿ ಬಳಿಕ ಟೀಂ ಇಂಡಿಯಾಗೆ ಪಾರ್ದಾಪಣೆ ಮಾಡಿದ ಅಶ್ವಿನ್ ಮೂಲತಃ ಚೆನ್ನೈನವರು. 2010 ರಿಂದ ಐಪಿಎಲ್‍ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಅಶ್ವಿನ್ ಆ ಬಳಿಕ ಹರಾಜಿನಲ್ಲಿ ಚೆನ್ನೈ ತಂಡ ಬಿಟ್ಟು ಡೆಲ್ಲಿ ತಂಡ ಸೇರಿಕೊಂಡಿದ್ದರು. ಇದೀಗ 15ನೇ ಆವೃತ್ತಿ ಐಪಿಎಲ್‍ಗೂ ಮುನ್ನ ಡೆಲ್ಲಿ ತಂಡ ಅಶ್ವಿನ್‍ರನ್ನು ಹರಾಜಿಗೆ ಬಿಟ್ಟು ಕೊಟ್ಟಿದೆ. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್
Advertisement
Advertisement
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುವ ವೇಳೆ ಐಪಿಎಲ್‍ನಲ್ಲಿ ಯಾವ ತಂಡದ ಪರ ಆಡಲು ಬಯಸುತ್ತೀರಿ ಎಂದು ಅಶ್ವಿನ್‍ಗೆ ಪ್ರಶ್ನೆ ಕೇಳಲಾಗಿದೆ ಈ ವೇಳೆ ಅಶ್ವಿನ್, ನನಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವುದು ತುಂಬಾ ಇಷ್ಟ. ಅದು ನನಗೆ ಶಾಲೆ ಇದ್ದಂತೆ ಎಲ್‍ಕೆಜಿ, ಯುಕೆಜಿ, ಪ್ರಾಥಮಿಕ ಶಿಕ್ಷಣವನ್ನು ಸಿಎಸ್‍ಕೆ ಪರ ಪಡೆದುಕೊಂಡಿದ್ದೇನೆ. ಆ ಬಳಿಕ ಬೇರೆ ಶಾಲೆಗೆ ಹೋಗಿದ್ದೆ. ಇದೀಗ ಮತ್ತೆ ಮನೆಯಂಗಳದ ಶಾಲೆಯಂತಿರುವ ಸಿಎಸ್‍ಕೆ ಪರ ಆಡಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಆಯ್ಕೆ: ಎಂಎಸ್‌ಕೆ ಪ್ರಸಾದ್
Advertisement
ಸಿಎಸ್‍ಕೆ ಪರ ಆಡುವುದಲ್ಲದೆ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆಯು ಮಾತನಾಡಿದ್ದು, ನಾನು ಧೋನಿಯ ಮಾತನ್ನು ಇಷ್ಟಪಡುತ್ತೇನೆ, ಅವರು ಯಾವತ್ತು ಹೇಳುತ್ತಿರುತ್ತಾರೆ ನಾವು ಆಡುವ ಸನ್ನಿವೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ಯಾವುದೇ ಅಂಜಿಕೆ ಇರಬಾರದು. ಪ್ರತಿಕ್ರಿಯೆ ಸ್ಪಷ್ಟವಾಗಿರಬೇಕು ಎಂದಿದ್ದರು ಎಂದು ಧೋನಿಯೊಂದಿಗೆ ಮತ್ತೊಮ್ಮೆ ಕಾಣಿಸಿಕೊಳ್ಳುವ ಆಸೆ ಹೇಳಿಕೊಂಡಿದ್ದಾರೆ.
2009 ರಿಂದ 2015ರ ವರಗೆ ಸಿಎಸ್‍ಕೆ ಪರ ಆಡಿದ ಅಶ್ವಿನ್ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಸಹಿತ ಒಟ್ಟು 120 ಪಂದ್ಯಗಳಿಂದ 120 ವಿಕೆಟ್ ಪಡೆದಿದ್ದಾರೆ. ಇದೀಗ ಅಶ್ವಿನ್ ಸಿಎಸ್‍ಕೆ ಪರ ಮತ್ತೊಮ್ಮೆ ಘರ್ಜಿಸಬೇಕೆಂದಿರುವುದನ್ನು ಕೇಳಿರುವ ಸಿಎಸ್‍ಕೆ ಫ್ರಾಂಚೈಸಿ ಹರಾಜಿನಲ್ಲಿ ಅಶ್ವಿನ್‍ಗೆ ಮಣೆಹಾಕುವುದೇ ಎಂಬ ಕುತೂಹಲ ಮನೆಮಾಡಿದೆ. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ