ಶತಕ ವಂಚಿತ ಗಾಯಕ್ವಾಡ್‌ – ಧೋನಿ ಟೀಂ ಗೆ 13 ರನ್‌ಗಳ ಜಯ

Public TV
3 Min Read
IPL 2022 CSK VS SRH 11

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹಾಗೂ ಕಾನ್ವೆ ಅವರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ಫಲವಾಗಿ ಚೆನ್ನೈ ತಂಡವು 13 ರನ್‌ಗಳ ಜಯ ಸಾಧಿಸಿತು.

IPL 2022 CSK VS SRH 6

ಸಿಎಸ್‌ಕೆ ನೀಡಿದ 203 ರನ್‌ಗಳ ಗುರಿ ಪಡೆದ ಹೈದರಾಬಾದ್‌ ತಂಡವು ನಿಗದಿತ 20 ಓವರ್‌ಗಳಲ್ಲಿ  6 ವಿಕೆಟ್‌ಗಳ ನಷ್ಟಕ್ಕೆ 189 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಹೈದರಾಬಾದ್ ತಂಡವು ಮೊದಲ ಓವರ್‌ನಲ್ಲಿ ಫೋರ್, ಸಿಕ್ಸರ್‌ಗಳನ್ನು ಸಿಡಿಸುತ್ತಾ ರನ್ ಮಳೆಗರೆಯುತ್ತಾ ಉತ್ತಮ ಶುಭಾರಂಭವನ್ನೇ ನೀಡಿತ್ತು. ಮೊದಲ 5 ಓವರ್‌ಗೆ 52 ರನ್ ಸಿಡಿಸಿದ್ದ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅವರ ಜೊತೆಯಾಟವು ಪವರ್ ಪ್ಲೇ ಮುಗಿಯುವ ವೇಳೆಗೆ 60 ರನ್‌ಗಳನ್ನು ಪೂರೈಸಿತ್ತು. ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 39 ರನ್ (5 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದರು.

IPL 2022 CSK VS SRH 6

ಪವರ್ ಪ್ಲೇ ಮುಗಿಯುತ್ತಿದ್ದಂತೆ ಹೈದರಾಬಾದ್ ಹಾರಟಕ್ಕೆ ಬ್ರೇಕ್ ಹಾಕಿದ ವೇಗಿಯ ಬೌಲರ್ ಮುಖೇಶ್ ಚೌಧರಿ 6ನೇ ಓವರ್‌ನಲ್ಲಿ ಸತತ 2 ವಿಕೆಟ್‌ಗಳನ್ನು ಉರುಳಿಸಿದರು. 3 ನೇ ಕ್ರಮಾಂಕದಲ್ಲಿ ಬಂದ ರಾಹುಲ್ ತ್ರಿಪಾಟಿ ಸಹ ಶೂನ್ಯಕ್ಕೆ ನಿರ್ಗಮಿಸಿದ್ದು, ಹೈದರಾಬಾದ್ ಗೆಲುವಿನ ಕನಸಿಗೆ ಆರಂಭಿಕ ಆಘಾತ ನೀಡಿತು.

ಪವರ್ ಪ್ಲೇ ನಂತರ ನಿಧಾನಗತಿಯಲ್ಲಿ ಮುಂದುವರಿದ ಹೈದರಾಬಾದ್ ತಂಡವು 10 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 95 ರನ್ ಗಳಿಸಿತ್ತು. 2 ವಿಕೆಟ್ ಕಳೆದುಕೊಂಡ ನಂತರ ಚೆನ್ನೈ ಬೌಲರ್‌ಗಳ ವಿರುದ್ಧ ತಮ್ಮ ದಾಳಿ ಮುಂದುವರಿಸಿದ ಟೀಂ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ 37 ಎಸೆತಗಳಲ್ಲಿ 47 ರನ್‌ಗಳನ್ನು (2 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು. ನಂತರ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಐಡೆನ್ ಮಾರ್ಕ್ರಾಮ್ 17 ರನ್, ಶಶಾಂಕ್ ಸಿಂಗ್ 15 ರನ್‌ಗಳಿಸಿದರು.

IPL 2022 CSK VS SRH 10

ನಿಕೋಲಸ್‌ ಅರ್ಧಶತಕ ಹೋರಾಟ: ಮಧ್ಯಮ ಕ್ರಮಾಂಕದಲ್ಲಿ ಬಂದ ನಿಕೋಲಸ್‌ ಪೂರನ್‌ ಆಕರ್ಷಕ ಅರ್ಧ ಶತಕ ಗಳಿಸುವ ಮೂಲಕ ತಂಡದ ಗೆಲುವಿಗೆ ಕೊನೆಯವರೆಗೂ ಹೋರಾಡಿದರು. ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದ ನಿಕೋಲಸ್‌ 33 ಎಸೆತಗಳಲ್ಲಿ 64 ರನ್‌ಗಳಿಸಿದರು. ಹೈದರಾಬಾದ್ ತಂಡದಲ್ಲಿ 4 ಓವರ್‌ಗೆ ಅತಿಹೆಚ್ಚು 42 ರನ್ ನೀಡಿದ ಟಿ.ನಟರಾಜನ್ 2 ವಿಕೆಟ್‌ಗಳನ್ನು ಪಡೆದರು.

ಮುಖೇಶ್ ಚೌಧರಿ ಬೌಲಿಂಗ್‌ ಕಮಾಲ್‌: ಹೈದ್ರಾಬಾದ್‌ ತಂಡದ ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸಿದ ಮುಖೇಶ್ ಚೌಧರಿ ತಮ್ಮ ಆಕರ್ಷಕ ಬೌಲಿಂಗ್‌ನಿಂದ  ಕಮಾಲ್‌ ಮಾಡಿದರು. 3 ಓವರ್‌ಗಳಲ್ಲಿ 22 ರನ್‌ಗಳನ್ನಷ್ಟೇ ನೀಡಿ 4 ವಿಕೆಟ್‌ ಕಬಳಿಸಿದರು. ಇದರು ತಂಡದ ಗೆಲುವಿಗೆ ಕಾರಣವಾಯ್ತು.

IPL 2022 CSK VS SRH 7

ಋತುರಾಜ್ ಶತಕ ವಂಚಿತ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಗ್ರ ಕ್ರಮಾಂಕದ ಆಟಗಾರರು ಆರಂಭದ ನಾಲ್ಕೂದು ಓವರ್‌ನಲ್ಲಿ ಸಾಧಾರಣ ಮೊತ್ತವನ್ನೇ ದಾಖಲಿಸಿದರು. ಪವರ್ ಪ್ಲೇ ಮುಗಿಯುತ್ತಿದ್ದಂತೆ ಹೈದ್ರಾಬಾದ್ ಬೌಲರ್‌ಗಳನ್ನು ಬೆಂಡೆತ್ತಿದ್ದ ಋರುರಾಜ್ ಗಾಯಕ್ವಾಡ್ ಹಾಗೂ ಡಿಪಿ ಕಾನ್ವೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 203 ರನ್‌ಗಳ ಬೃಹತ್ ಮೊತ್ತ ದಾಖಲಿಸಿದರು. 99 ರನ್‌ಗಳಿಸಿದ ಋತುರಾಜ್ ಶತಕ ವಂಚಿತರಾಗಿದ್ದು, ಸಿಎಸ್‌ಕೆ ತಂಡಕ್ಕೆ ಕೊಂಚ ಬೇಸರವನ್ನುಂಟುಮಾಡಿತು.

IPL 2022 CSK VS SRH 8

ಹೈದರಾಬಾದ್ ತಂಡದ ಬಲಿಷ್ಠ ಬೌಲಿಂಗ್ ಪಡೆಯನ್ನು ಪುಡಿಗಟ್ಟಿದ ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳಿಸಿ ಹೈದರಾಬಾದ್ ತಂಡಕ್ಕೆ 203 ರನ್‌ಗಳ ಗುರಿ ನೀಡಿತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ 99 ರನ್ (6 ಸಿಕ್ಸರ್, 6 ಬೌಂಡರಿ) ಚಚ್ಚಿದರು. ಈ ಮೂಲಕ ಐಪಿಎಲ್‌ನಲ್ಲಿ 1 ಸಾವಿರ ರನ್‌ಗಳನ್ನು ಪೂರೈಸಿದರು.

IPL 2022 CSK VS SRH 2

ಇವರಿಗೆ ಅದ್ಭುತವಾಗಿ ಸಾಥ್ ನೀಡಿದ ಕಾನ್ವೆ 55 ಎಸೆತಗಳಲ್ಲಿ 85 ರನ್‌ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಮಹೇಂದ್ರಸಿಂಗ್ ಧೋನಿ 7 ಎಸೆತಗಳಲ್ಲಿ 1 ಬೌಂಡರಿ ಸೇರಿ 8 ರನ್‌ಗಳಿಸಿ ಕ್ಯಾಚ್ ನೀಡಿ ಹೊರನಡೆದರು. ನಿರ್ಗಮಿತ ನಾಯಕ ರವಿಂದ್ರ ಜಡೇಜಾ 1 ರನ್‌ಗಳಿಸಿ ಅಜೇಯರಾಗುಳಿದರು.

IPL 2022 CSK VS SRH 9

ರನ್ ಏರಿದ್ದು ಹೇಗೆ?
45 ಎಸೆತ 50 ರನ್
65 ಎಸೆತ 100 ರನ್
88 ಎಸೆತ 150 ರನ್
120 ಎಸೆತ 202 ರನ್

Share This Article
Leave a Comment

Leave a Reply

Your email address will not be published. Required fields are marked *