ಮುಂಬೈ: ಗುರುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ವಿದ್ಯುತ್ ಸಮಸ್ಯೆ ಎದುರಾಗಿತ್ತು.
ಐಪಿಎಲ್ 2022ರ 59 ನೇ ಪಂದ್ಯದಲ್ಲಿ ಚೆನ್ನೈ ಮತ್ತು ಮುಂಬೈ ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ವಿದ್ಯುತ್ ಕಡಿತದಿಂದಾಗಿ ಮೊದಲ ಇನಿಂಗ್ಸ್‌ನ ಮೊದಲ ಎರಡು ಓವರ್‌ಗಳಿಗೆ ಡಿಆರ್‌ಎಸ್ ಇರಲಿಲ್ಲ. ಕ್ರೀಡಾಂಗಣದಲ್ಲಿ ವಿದ್ಯುತ್ ಸಮಸ್ಯೆಯಿಂದ ಟಾಸ್ ಕೂಡ ವಿಳಂಬವಾಯಿತು.
Advertisement
Advertisement
ಇದರಿಂದಾಗಿ ಪಂದ್ಯದಲ್ಲಿ ಮೊದಲ 10 ಎಸೆತಗಳಲ್ಲಿ ಡಿಆರ್‌ಎಸ್ ತಂತ್ರಜ್ಞಾನ ಬಳಕೆಗೆ ಲಭ್ಯವಾಗಿರಲಿಲ್ಲ. ಅಲ್ಲದೆ ಸಿಎಸ್‍ಕೆ ಆರಂಭಿಕ ಬ್ಯಾಟ್ಸ್‌ಮ್ಯಾನ ಡೆವೊನ್ ಕಾನ್ವೆ ವಿವಾದಾತ್ಮಕ ತೀರ್ಪಿಗೆ ಔಟ್ ಆಗಿದ್ದರು. ಇದು ಚೆನ್ನೈ ತಂಡದ ಹಿನ್ನಡೆಗೆ ಕಾರಣವಾಯಿತು.
Advertisement
ವಿದ್ಯುತ ಕಂಬದ ಟವರ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಟಾಸ್ ಎರಡು ನಿಮಿಷಗಳಷ್ಟು ವಿಳಂಬವಾಗಿತ್ತು. ನಂತರದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
Advertisement
No DRS because of a power cut at Wankhede ????#CSKvsMI #IPL2022 pic.twitter.com/ihwjYdSrF0
— Rajeev Ranjan 2.0 (@Imrranjan) May 12, 2022
ಮುಂಬೈ ತಂಡದ ಪ್ರಮುಖ ಬೌಲರ್ ಡ್ಯಾನಿಯಲ್ ಸ್ಯಾಮ್ಸ್ ಎಸೆದ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲೇ ಕಾನ್ವೆ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ಈ ವೇಳೆ ಮುಂಬೈ ತಂಡದ ಮನವಿ ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದರು. ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಡಿಆರ್‌ಎಸ್ ತಂತ್ರಜ್ಞಾನದ ಅಲಭ್ಯತೆ ಕಾಡಿದ್ದರಿಂದ ಕಾನ್ವೆಗೆ ರೀವ್ಯೂ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಪೆವಿಲಿಯನ್‍ನತ್ತ ಹೆಜ್ಜೆ ಹಾಕಬೇಕಾಯಿತು. ಆದರೆ ನಿಜಕ್ಕೂ ಇದು ಔಟ್ ಆಗಿತ್ತೆ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿದೆ.
Wosrt Umpiring This Season…????
Devon Conwey Was Not Out, But Due To Powercut The DRS Was Not Available…????
Now There Should Be No DRS In The Whole Match… Play Fair Pls…#CSKvsMI#MIvsCSK #umpire #IPL2022 pic.twitter.com/GAoQtz2rvr
— H Y P E R ‣‣‣ (@Freak_Hyper_) May 12, 2022
ಈ ಕುರಿತು ಅಭಿಮಾನಿಗಳು ಟ್ವಿಟರ್‍ನಲ್ಲಿ ಮಿಶ್ರ ಪ್ರತಿಕ್ರಿಯಿ ನೀಡಿದ್ದು, ವಿಶ್ವದ ಶ್ರೀಮಂತ ಲೀಗ್‍ನಲ್ಲಿ ವಿದ್ಯುತ್ ಅಡಚಣೆ ಉಂಟಾಗಿರುವುದು ಸಿಕ್ಕಾಪಟ್ಟೆ ಟ್ರೋಲ್‍ಗೆ ಗುರಿಯಾಗಿದೆ.