ಅಹಮದಾಬಾದ್: 15ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ ವಿಶ್ವದ ಅತಿ ದೊಡ್ಡ ಜೆರ್ಸಿಯನ್ನು ಅನಾವರಣಗೊಳಿಸಿ ಗಿನ್ನಿಸ್ ದಾಖಲೆ ಬರೆದಿದೆ.
Advertisement
ಐಪಿಎಲ್ ಯಶಸ್ವಿ 15ನೇ ವರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ 66-44 ಮೀಟರ್ ಉದ್ದದ ವಿಶ್ವದ ಅತಿ ದೊಡ್ಡ ಜೆರ್ಸಿಯನ್ನು ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅನಾವರಣಗೊಳಿಸಲಾಯಿತು. ಈ ಜೆರ್ಸಿ ವಿಶ್ವದ ಅತೀ ದೊಡ್ಡ ಜೆರ್ಸಿ ಎಂಬ ನಿಟ್ಟಿನಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಬರೆದಿದೆ. ಇದನ್ನೂ ಓದಿ: 2014ರ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದೇ ಐಪಿಎಲ್ ಫೈನಲ್
Advertisement
A ???????????????????????????????? ???????????????????? ???????????????????????? to start #TATAIPL 2022 Final Proceedings. ???? #GTvRR
Presenting the ????????????????????'???? ???????????????????????????? ???????????????????????????? ???????????????????????? At The ????????????????????'???? ???????????????????????????? ???????????????????????????? ???????????????????????????? – the Narendra Modi Stadium. @GCAMotera ???? pic.twitter.com/yPd0FgK4gN
— IndianPremierLeague (@IPL) May 29, 2022
Advertisement
ಸಮಾರೋಪ ಸಮಾರಂಭದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಬಾಲಿವುಡ್ ನಟ ರಣವೀರ್ ಸಿಂಗ್, ಅನೇಕ ಚಿತ್ರಗಳ ಹಾಡಿಗೆ ಹೆಜ್ಜೆ ಹಾಕುವ ಮೂಲಕ ರಂಜಿಸಿದರು. ಅಲ್ಲದೇ ಕೆಜಿಎಫ್ 2 ಚಿತ್ರದ ‘ಧೀರಾ ಧೀರಾ’ ಮತ್ತು ಥೀಮ್ ಸಾಂಗ್‍ಗೆ ರಣವೀರ್ ಸಿಂಗ್ ಕುಣಿದು ಕುಪ್ಪಳಿಸಿದರು. ಈ ಮೂಲಕ ಐಪಿಎಲ್‍ನಲ್ಲಿಯೂ ಕೆಜಿಎಫ್ ಹವಾ ಕಾಣಿಸಿಕೊಂಡಿತು. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು. ಇದನ್ನೂ ಓದಿ: ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್
Advertisement
Jai Ho! ???? ????@arrahman & Co. are joined by @RanveerOfficial on stage! ???? ????#TATAIPL | #GTvRR pic.twitter.com/GkOKOIiggG
— IndianPremierLeague (@IPL) May 29, 2022
ವೇದಿಕೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ನಡೆಸಿಕೊಟ್ಟರು.