ಮುಂಬೈ: ಕೊನೆಯ 4 ಎಸೆತಗಳಲ್ಲಿ 16 ರನ್ ಚಚ್ಚಿದ ಧೋನಿ ಚೆನ್ನೈ ತಂಡಕ್ಕೆ ಮುಂಬೈ ವಿರುದ್ಧ 3 ವಿಕೆಟ್‍ಗಳ ರೋಚಕ ಜಯ ತಂದುಕೊಟ್ಟರು.
Advertisement
ಕೊನೆಯ 6 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 17 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ ಡ್ವೈನ್ ಪ್ರಿಟೋರಿಯಸ್ ವಿಕೆಟ್ ಕಳೆದುಕೊಂಡಿತು. ನಂತರ ಬ್ರಾವೊ 1 ರನ್ ಕಸಿದರು. ಆ ಬಳಿಕ ಕೊನೆಯ 4 ಎಸೆತಗಳಲ್ಲಿ 16 ರನ್ ಬೇಕಾಗಿತ್ತು. ಧೋನಿ 2ರನ್ ಓಡಿ, 1 ಸಿಕ್ಸ್, 2 ಬೌಂಡರಿ ಸಿಡಿಸಿ ಕೊನೆಯ ಎಸೆತದಲ್ಲಿ ಮ್ಯಾಚ್ ಫಿನಿಶ್ ಮಾಡಿದರು. ಚೆನ್ನೈ ತಂಡ 7 ವಿಕೆಟ್ ಕಳೆದುಕೊಂಡು 156 ರನ್ ಸಿಡಿಸಿ 3 ವಿಕೆಟ್‍ಗಳಿಂದ ಜಯ ಸಾಧಿಸಿತು. ಧೋನಿ ಅಜೇಯ 28 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸ್) ಚಚ್ಚಿ ಚೆನ್ನೈಗೆ 2ನೇ ಗೆಲುವಿನ ಉಡುಗೊರೆ ನೀಡಿದರು.
Advertisement
Advertisement
156 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡ ಆರಂಭಿ ಆಘಾತ ಅನುಭವಿಸಿತು. ಋತುರಾಜ್ ರಾಜ್ ಗಾಯಕ್ವಾಡ್ ಶೂನ್ಯ ಸುತ್ತಿದ್ದರು. ಆದರೆ ಇನ್ನೋರ್ವ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಮಾತ್ರ ಬೌಂಡರಿ, ಸಿಕ್ಸರ್ ಸಿಡಿಸುತ್ತ ಕೆಲ ಕಾಲ ಚೆನ್ನೈಗೆ ನೆರವಾದರು. ಅಲ್ಲದೆ ಅಂಬಾಟಿ ರಾಯುಡು ಜೊತೆ 3ನೇ ವಿಕೆಟ್‍ಗೆ 50 ರನ್ (39 ಎಸೆತ) ಜೊತೆಯಾಟವಾಡಿದರು. ಉತ್ತಪ್ಪ 30 ರನ್ (25 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು ರಾಯುಡು 40 ರನ್ (35 ಎಸೆತ, 2 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು.
Advertisement
ಮುಂಬೈಗೆ ಚಾರ್ಜ್ ಮಾಡಿದ ಚೌಧರಿ:
ಟಾಸ್ ಗೆದ್ದ ಚೆನ್ನೈ ತಂಡ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಚೆನ್ನೈ ನಾಯಕ ನಿರ್ಧಾರದಂತೆ ಮುಂಬೈ ಬ್ಯಾಟ್ಸ್‍ಮ್ಯಾನ್‍ಗಳಿಗೆ ಆರಂಭದಲ್ಲೇ ಕಡಿವಾಣ ಹಾಕಿದ ಚೆನ್ನೈ ಬೌಲರ್ ಮುಖೇಶ್ ಚೌಧರಿ ಆರಂಭಿಕ ಆಟಗಾರರನ್ನು ಮೊದಲ ಓವರ್‌ನಲ್ಲೇ ಪೆವಿಲಿಯನ್ ಸೇರಿಸಿದರು. ಆ ಬಳಿಕ ಡೆವಾಲ್ಡ್ ಬ್ರೆವಿಸ್ ವಿಕೆಟ್ ಕಿತ್ತ ಚೌಧರಿ ಮುಂಬೈ ತಂಡದ ಅಗ್ರ ಕ್ರಮಾಂಕವನ್ನು ಮುರಿದರು.
ಆ ಬಳಿಕ ಮುಂಬೈ ತಂಡಕ್ಕೆ ಚೇತರಿಕೆ ನೀಡಿದ ಸೂರ್ಯಕುಮಾರ್ ಯಾದವ್ 32 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ತಿಲಕ್ ವರ್ಮಾ ಮಾತ್ರ ಮುಂಬೈಗೆ ಆಸರೆಯಾದರು. ಚೆನ್ನೈ ಬೌಲರ್‌ಗಳ ಬಿಗಿ ದಾಳಿಯನ್ನು ಸಮರ್ಥವಾಗಿ ಎದುರಿಸಿದ ತಿಲಕ್ ವರ್ಮಾ ಅಜೇಯ 51 ರನ್ (43 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಜಯದೇವ್ ಉನದ್ಕತ್ 19 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತ 150ರ ಗಡಿದಾಟಿಸಿದರು.
ಅಂತಿಮವಾಗಿ ಮುಂಬೈ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 155 ರನ್ ಪೇರಿಸಿತು. ಚೆನ್ನೈ ಪರ ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ ಚೌಧರಿ 3, ಬ್ರಾವೊ 2, ಸ್ಯಾಂಟ್ನರ್ ಮತ್ತು ಮಹೇಶ್ ತೀಕ್ಷಣ ತಲಾ 1 ವಿಕೆಟ್ ಪಡೆದರು.
This kind of shot is totally demoralising to any bowler. Had the desired effect. @msdhoni #devastating pic.twitter.com/0aCUxdYpZH
— simon hughes (@theanalyst) April 21, 2022