ಸಿಎಸ್‌ಕೆ ನಾಯಕತ್ವ ಮರಳಿ ಪಡೆಯುತ್ತಿದ್ದಂತೆ ಧೋನಿ ಅಭಿಮಾನಿಗಳಿಂದ ಮೀಮ್ಸ್ ಸುರಿಮಳೆ

Public TV
1 Min Read
dhoni csk

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. ಆದರೆ 2022ರ ಐಪಿಎಲ್ ಆರಂಭಕ್ಕೂ ಮೊದಲು ಎಂಎಸ್ ಧೋನಿ ಸಿಎಸ್‌ಕೆ ನಾಯಕತ್ವವನ್ನು ತೊರೆದು, ಅಭಿಮಾನಿಗಳಿಗೆ ಭಾರೀ ಆಘಾತ ನೀಡಿದ್ದರು.

ಧೋನಿ ಬಳಿಕ ಸಿಎಸ್‌ಕೆ ನಾಯಕತ್ವವನ್ನು ವಹಿಸಿಕೊಂಡಿದ್ದ ರವೀಂದ್ರ ಜಡೇಜಾ ಶನಿವಾರ ತಮ್ಮ ಸ್ಥಾನವನ್ನು ಧೋನಿಗೆ ಮರಳಿ ನೀಡುತ್ತಿರುವುದರ ಬಗ್ಗೆ ಘೋಷಿಸಿದ್ದಾರೆ. ಈ ವಿಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚೆದ್ದಿರುವ ಧೋನಿ ಅಭಿಮಾನಿಗಳು ಮೀಮ್ಸ್ ಸುರಿಮಳೆಯನ್ನೇ ಹರಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ

ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದ ಸಿಎಸ್‌ಕೆ ತಂಡ, ಈ ಬಾರಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿದೆ. ಈ ಹಿನ್ನೆಲೆಯಲ್ಲಿ ಜಡೇಜಾ ತಮ್ಮ ಆಟದ ಮೇಲೆ ಕೆಂದ್ರೀಕರಿಸುವ ಸಲುವಾಗಿ ಸಿಎಸ್‌ಕೆ ನಾಯಕತ್ವವನ್ನು ಧೋನಿಗೆ ವಾಪಾಸ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಸೋಲಿನ ಶಾಕ್ – ಕಡೆಗೂ ಗೆದ್ದು ಬೀಗಿದ ಮುಂಬೈ

ಈ ಬಾರಿಯ ಐಪಿಎಲ್ ಮ್ಯಾಚ್‌ನಲ್ಲಿ ಸಿಎಸ್‌ಕೆ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದೆ. 15ನೇ ಆವೃತ್ತಿ ಐಪಿಎಲ್ ಪ್ರಾರಂಭದಲ್ಲಿ ಸತತ 4 ಪಂದ್ಯಗಳನ್ನು ಸೋತ ಬಳಿಕ 5ನೇ ಪಂದ್ಯದಲ್ಲಿ ಸಿಎಸ್‌ಕೆ ಮೊದಲ ಬಾರಿ ಗೆಲುವು ಸಾಧಿಸಿತು. ಆ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಸಿಎಸ್‌ಕೆ ನಂತರ ಮತ್ತೆ ಸೋಲಿನತ್ತ ಮುಖ ಮಾಡಿದೆ. ಇದೀಗ ಜಡೇಜಾ ಬದಲು ಧೋನಿ ನಾಯಕತ್ವ ನಿರ್ವಹಿಸಲು ಮುಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *