IPL 2022 Auction: ಲಿವಿಂಗ್‍ಸ್ಟೋನ್ ದುಬಾರಿ ವಿದೇಶಿ ಆಟಗಾರ – ಫಿಂಚ್, ಮಾರ್ಗನ್ ಅನ್‍ಸೋಲ್ಡ್

Public TV
1 Min Read
LIAM LIVING STONE

ಬೆಂಗಳೂರು: 2ನೇ ದಿನದ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ನ ಆಲ್‍ರೌಂಡರ್ ಆಟಗಾರ ಲಿಯಾಮ್ ಲಿವಿಂಗ್‍ಸ್ಟೋನ್‍ಗೆ 11.50 ಕೋಟಿ ರೂ. ಕೊಟ್ಟು ಪಂಜಾಬ್ ಕಿಂಗ್ಸ್ ಖರೀದಿಸಿದೆ.

IPL 1 1

ಲಿವಿಂಗ್‍ಸ್ಟೋನ್ ಇಂಗ್ಲೆಂಡ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರ ಗಮನಸೆಳೆದಿದ್ದರು. ಈ ಬಾರಿ ಐಪಿಎಲ್ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಲ್ಲಿದ್ದರು. ಅದರಂತೆ ಇಂದು ನಡೆದ ಹರಾಜಿನಲ್ಲಿ ಕೋಲ್ಕತ್ತಾ, ಪಂಜಾಬ್ ಮತ್ತು ಹೈದರಾಬಾದ್ ಫ್ರಾಂಚೈಸ್‍ಗಳು ಲಿವಿಂಗ್‍ಸ್ಟೋನ್‍ರನ್ನು ಖರೀದಿಸಲು ಪೈಪೋಟಿ ನಡೆಸಿದವು ಅಂತಿಮವಾಗಿ ಪಂಜಾಬ್ 11.50 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಲಿವಿಂಗ್ ಸ್ಟೋನ್ ದುಬಾರಿ ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ

LIYAM LIVING STONE

ಆದರೆ ಈವರೆಗಿನ ಹರಾಜಿನಲ್ಲಿ 2021 ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ಆಸ್ಟ್ರೇಲಿಯಾದ ಆರನ್ ಫಿಂಚ್ ಮತ್ತು 2019ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ಈ ಬಾರಿ ಅನ್‍ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ ನಿನ್ನೆ ಸುರೇಶ್‌ ರೈನಾ, ಸ್ಟೀವ್‌ ಸ್ಮಿತ್‌ ಅನ್‌ಸೋಲ್ಡ್‌ ಆಗಿದ್ದರು. ಇಂದು ನಡೆಯುವ 2ನೇ ಸುತ್ತಿನ ಹರಾಜಿನಲ್ಲಿ ಮತ್ತೆ ಅನ್‌ಸೋಲ್ಡ್‌ ಆಟಗಾರರು ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು

Share This Article
Leave a Comment

Leave a Reply

Your email address will not be published. Required fields are marked *