ಮುಂಬೈ: ಅದೆಷ್ಟೋ ಆಟಗಾರರು ಅಂಡರ್-19 ವಿಶ್ವಕಪ್‍ನಲ್ಲಿ ಮಿಂಚಿ, ಬಳಿಕ ಐಪಿಎಲ್‍ನಲ್ಲಿ ಕಾಣಿಸಿಕೊಂಡ ಉದಾಹರಣೆ ಇದೆ. ಇದೀಗ 2022 ಐಪಿಎಲ್ ಹರಾಜಿಗೂ ಮುನ್ನ ಭಾರತ ಅಂಡರ್-19 ತಂಡದಲ್ಲಿ ಮಿಂಚುತ್ತಿರುವ ಐವರು ಆಟಗಾರರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
Advertisement
ಈ ಹಿಂದೆ ಭಾರತ ತಂಡದ ಮಾಜಿ ನಾಯಕರಾಗಿದ್ದ ವಿರಾಟ್ ಕೊಹ್ಲಿ, ಆಲ್‍ರೌಂಡರ್ ರವೀಂದ್ರ ಜಡೇಜಾ, ವಿಕೆಟ್ ಕೀಪರ್ ರಿಷಭ್ ಪಂತ್ ಸಹಿತ ಹಲವಾರು ಆಟಗಾರರು ಅಂಡರ್-19 ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ತೋರಿ, ಐಪಿಎಲ್‍ನಲ್ಲಿ ಮಿಂಚು ಹರಿಸಿ ಭಾರತ ತಂಡದಲ್ಲಿ ಕಾಣಿಸಿಕೊಂಡ ಉದಾಹಣೆಗಳಿವೆ. ಇದನ್ನೂ ಓದಿ: ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ
Advertisement
Advertisement
ಪ್ರತಿ ಬಾರಿ ಐಪಿಎಲ್ ಹರಾಜಿಗೂ ಮುನ್ನ ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಐಪಿಎಲ್ ಫ್ರಾಂಚೈಸ್‍ಗಳು ಮಾಡಿಕೊಂಡು ಬಂದಿದೆ. ಇದೀಗ 2022ರ ಐಪಿಎಲ್ ಮೆಗಾ ಹರಾಜು ಫೆಬ್ರವರಿಯಲ್ಲಿ ನಡೆಯಲಿದೆ. ಅತ್ತ ಅಂಡರ್-19 ವಿಶ್ವಕಪ್‍ನಲ್ಲಿ ಭಾರತದ ಯುವ ಆಟಗಾರರು ಘರ್ಜಿಸುತ್ತಿದ್ದಾರೆ. ಇದನ್ನೂ ಓದಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್‍ನಲ್ಲಿ ಗಮನಸೆಳೆದ ಮಹಿಳಾ ಅಂಪೈರ್
Advertisement
ಅದರಲ್ಲೂ 2022ರ ಅಂಡರ್-19 ತಂಡದ ನಾಯಕ ಯಶ್ ಧುಲ್, ಬ್ಯಾಟ್ಸ್‌ಮ್ಯಾನ್‌ಗಳಾದ ಆಂಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್ ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಲ್‍ರೌಂಡರ್ ಆಗಿ ರಾಜ್ ಬಾವಾ ಜಬರ್ದಸ್ತ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿಕ್ಕಿ ಓಸ್ವಾಲ್ ಸೂಪರ್ ಸ್ಪೆಲ್ ಮಾಡುತ್ತಿದ್ದಾರೆ. ಈ ಐವರ ಭರ್ಜರಿ ಆಟದ ನೆರವಿನಿಂದ ಭಾರತ ತಂಡ ಉತ್ತಮ ಪ್ರದರ್ಶನ ತೋರಿ ಮುನ್ನಗುತ್ತಿದೆ. ಇದೀಗ ಈ ಐವರು ಆಟಗಾರರ ಪ್ರದರ್ಶನವನ್ನು ಗಮನಿಸಿ ಐಪಿಎಲ್ ಫ್ರಾಂಚೈಸ್‍ಗಳು ಹರಾಜಿನಲ್ಲಿ ಖರೀದಿಗೆ ಮುಂದಾಗುವರೇ ಎಂಬ ಕುತೂಹಲವಿದೆ. ಈ ಎಲ್ಲದಕ್ಕೂ ಫೆ.12ರ ವರೆಗೆ ಕಾಯಲೇಬೇಕಾಗಿದೆ.