ಮುಂಬೈ: ಐಪಿಎಲ್ ಸೀಸನ್ 15ರ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ಧತೆಯಲ್ಲಿದೆ. ಈ ರಂಗು ರಂಗಿನ ಕ್ರಿಕೆಟ್ ಟೂರ್ನಿಗೆ ಎಲ್ಲಾ ತಂಡಗಳು ಸ್ಟಾರ್ ಆಟಗಾರರ ಖರೀದಿಗಾಗಿ ಪ್ಲಾನ್ ಮಾಡಿಕೊಂಡಿದೆ.
Advertisement
ಕೆಲವು ತಂಡಗಳು ಹೊರ ಬಿಟ್ಟಿರುವ ಸ್ಟಾರ್ ವಿದೇಶಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮ್ಯಾನ್‌ಗಳ ಖರೀದಿಗಾಗಿ ಈ ಬಾರಿ ಭಾರೀ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಏಕೆಂದರೆ ಈ ಹಿಂದಿನಿಂದಲೂ ಐಪಿಎಲ್ ತಂಡಗಳ ಮೊದಲ ಆಯ್ಕೆ ಓಪನರ್+ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮ್ಯಾನ್‌ಗಳು. ಹೀಗಾಗಿ ಈ ಬಾರಿ ಕೂಡ ವಿದೇಶಿ ವಿಕೆಟ್ ಕೀಪರ್ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಕಣ್ಣು ಇಟ್ಟಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್
Advertisement
Advertisement
ಯಾರಿಗೆ ಡಿಮ್ಯಾಂಡ್?
1. ಕ್ವಿಂಟನ್ ಡಿ ಕಾಕ್ :
ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮತ್ತು ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಎಂದೇ ಪ್ರಸಿದ್ಧಿ ಪಡೆದಿರುವ ಆಟಗಾರ. ಕಳೆದ ಮೂರು ಸೀಸನ್‍ಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದು 529, 503 ಮತ್ತು 297 ರನ್‍ಗಳಿಸಿದ್ದಾರೆ. ಐಪಿಎಲ್‍ನಲ್ಲಿ 2,200ಕ್ಕೂ ಅಧಿಕ ರನ್, 50 ಕ್ಯಾಚ್‍ಗಳು, ವಿಕೆಟ್ ಕೀಪರ ಆಗಿ 14 ಸ್ಟಂಪಿಂಗ್‍ಗಳನ್ನು ಮಾಡಿರುವ ಸಾಧನೆ ಮಾಡಿದ್ದಾರೆ. ಇದರರ್ಥ ಐಪಿಎಲ್‍ನಲ್ಲಿ ಆ್ಯಡಂ ಗಿಲ್‍ಕ್ರಿಸ್ಟ್(67) ನಂತರ ಅತ್ಯಂತ ಹೆಚ್ಚು ಸ್ಟಂಪಿಂಗ್ ಮಾಡಿದ್ದಾರೆ.
Advertisement
2. ಜಾನಿ ಬೈರ್‌ಸ್ಟೋವ್:
ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮ್ಯಾನ್ ಜಾನಿ ಬೈರ್‌ಸ್ಟೋವ್ ಅತ್ಯುತ್ತಮ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮ್ಯಾನ್. ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್(ಎಸ್‌ಆರ್‌ಎಚ್) ಪರ ಆರಂಭಿಕನಾಗಿ ಸ್ಫೋಟಕ ಆರಂಭ ನೀಡುವುದರೊಂದಿಗೆ ಶತಕ ಸಿಡಿಸುವಂತಹ ವಿದೇಶಿ ಆಟಗಾರರಲ್ಲಿ ಒಬ್ಬರು. ಕಳೆದ ಮೂರು ಸೀಸನ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಕಾರಣ ಜಾನಿ ಬೈರ್‌ಸ್ಟೋವ್ ಖರೀದಿಗೆ ಪೈಪೋಟಿ ನಡೆಯಲಿದೆ. ಇದನ್ನೂ ಓದಿ: 8ನೇ ಆವೃತ್ತಿ ಪ್ರೊ ಕಬಡ್ಡಿಗೆ ಬೆಂಗಳೂರು ಸಜ್ಜು
3. ಮ್ಯಾಥ್ಯೂ ವೇಡ್:
ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ 2011 ರಲ್ಲಿ ಐಪಿಎಲ್ ಆಡಿದ್ದರು. ಏಕೆಂದರೆ 2020ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇನ್ನೇನೂ ಪಂದ್ಯ ಸೋಲುತ್ತದೆ ಎಂದು ಯೋಚಿಸುತ್ತಿರುವಾಗ ಕೊನೆಗೆ 3 ಸಿಕ್ಸರ್ ಹೊಡೆದು ಆಸ್ಟ್ರೇಲಿಯಾವನ್ನು ಗೆಲ್ಲಿಸಿಕೊಟ್ಟು ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ ಆಟಗಾರ. ಅಷ್ಟೇ ಅಲ್ಲದೇ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.
4. ಅಲೆಕ್ಸ್ ಕ್ಯಾರಿ:
ಆಸ್ಟ್ರೇಲಿಯಾದ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್. ಈ ಹಿಂದೆ ಐಪಿಎಲ್‍ನಲ್ಲಿ ಡೆಲ್ಲಿಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಕೀಪರ್ ಆಗಿ ರಿಷಭ್ ಪಂತ್ ಇದ್ದ ಕಾರಣ ಇವರಿಗೆ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ಹೀಗಾಗಿ ಈ ಬಾರಿ ಹೊಸ ತಂಡದಲ್ಲಿ ಆಡುವ ಅವಕಾಶ ಪಡೆಯುವ ನಿರೀಕ್ಷೆ ಇದೆ. ಇದನ್ನೂ ಓದಿ: ಲಕ್ನೋ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ
5. ಡೆವೊನ್ ಕಾನ್ವೆ:
ಕಳೆದ ಸೀಸನ್‍ನಲ್ಲಿ ನ್ಯೂಜಿಲೆಂಡ್‍ನ ಈ ಆಟಗಾರನ ಹೆಸರು ಕಂಡುಬಂದಿರಲಿಲ್ಲ. ಆದರೆ ಈ ಬಾರಿ ಕಾನ್ವೆ ಅವರ ಹೆಸರು ಆರಂಭದಲ್ಲೇ ಕೇಳಿ ಬಂದಿದೆ. ಏಕೆಂದರೆ ನ್ಯೂಜಿಲೆಂಡ್ ಪರ ಸ್ಥಿರವಾಗಿ ಬ್ಯಾಟಿಂಗ್ ಮಾಡುತ್ತಿರುವ ಆಟಗಾರ ಹಾಗೂ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಆಟದ ಮೂಲಕ ನ್ಯೂಜಿಲೆಂಡ್‍ಗೆ ನೆರವಾದ ಆಟಗಾರ. ಹೀಗಾಗಿ ಡೆವೊನ್ ಕಾನ್ವೆ ಅವರು ಮುಂದೆ ಬರಲಿರುವ ಸೀಸನ್‍ನಲ್ಲಿ ಫೇವರೆಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.