ಮುಂಬೈ: ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‍ನಲ್ಲಿ ರಾತ್ರೋರಾತ್ರಿ ಕೋಟಿ ವೀರರಾದವರು ಸಾಕಷ್ಟು ಮಂದಿ ಇದ್ದಾರೆ. ಈವರೆಗೆ 14 ಆವೃತ್ತಿ ಐಪಿಎಲ್ ಪೂರ್ಣಗೊಂಡಿದ್ದು, ಈ ಆವೃತ್ತಿಗಳಲ್ಲಿ ಹಲವು ಆಟಗಾರರು ಕೋಟಿ, ಕೋಟಿ ರೂ.ಗೆ ಬಿಕರಿ ಯಾಗಿದ್ದಾರೆ.
Advertisement
ಈ ಹಿಂದಿನ ಇತಿಹಾಸವನ್ನು ಗಮನಿಸಿದಾಗ ದೇಶಿಯ ಮತ್ತು ವಿದೇಶಿಯ ಸ್ಟಾರ್ ಆಟಗಾರರಿಗೆ ಫ್ರಾಂಚೈಸ್‍ಗಳು ಕೋಟಿ, ಕೋಟಿ ರೂ. ಸುರಿದು ಖರೀದಿ ಮಾಡಿದೆ. ಕೆಲ ಅಟಗಾರರು ಕೋಟಿ ರೂ. ಖರೀದಿಗೆ ತಕ್ಕಂತೆ ಆಡಿದರೆ, ಇನ್ನೂ ಕೆಲ ಆಟಗಾರರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲವಾಗಿ ಫ್ರಾಂಚೈಸ್‍ಗೆ ಹೊರೆಯಾಗಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಏಕದಿನ ಸರಣಿ – ವಿಂಡೀಸ್‍ಗೆ ವೈಟ್‍ವಾಶ್ ಮುಖಭಂಗ
Advertisement
Advertisement
ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿರುವ ಆಟಗಾರರ ಪಟ್ಟಿ ಗಮನಿಸಿದರೆ, ಕ್ರಿಸ್ ಮೋರಿಸ್ ಮೊದಲಿಗರಾಗಿ ಕಾಣಸಿಗುತ್ತಾರೆ, 2021ರ ಐಪಿಎಲ್ ಹರಾಜಿನಲ್ಲಿ ಮೋರಿಸ್‍ಗೆ ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಮೋರಿಸ್ 11 ಪಂದ್ಯಗಳನ್ನು ಆಡಿ 67 ರನ್ ಮತ್ತು 15 ವಿಕೆಟ್ ಪಡೆದು ನಿರಾಸೆ ಮೂಡಿಸಿದ್ದರು. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರು ಸಜ್ಜು – ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು
Advertisement
2015ರಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ಕೋಟಿ ರೂ. ನೀಡಿ ಖರೀದಿಸಿತು. ಆದರೆ ಯುವರಾಜ್ ಹೇಳಿಕೊಳ್ಳುವ ಪ್ರದರ್ಶನ ನೀಡಲು ವಿಫಲವಾಗಿದ್ದರು. 2020ರ ಮೆಗಾ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15.50 ಕೋಟಿಗೆ ಖರೀದಿಸಿ ಬಿಕರಿಯಾಗಿದ್ದರು. ಇದನ್ನೂ ಓದಿ: ತವರಿನಲ್ಲಿ ಕೊಹ್ಲಿ ಹೊಸ ಮೈಲಿಗಲ್ಲು – ಧೋನಿ, ಸಚಿನ್ ಜೊತೆ Elite ಪಟ್ಟಿಗೆ ಸೇರ್ಪಡೆ
2021ರಲ್ಲಿ ಬರೋಬ್ಬರಿ 15 ಕೋಟಿ ರೂ. ಸುರಿದು ಜೇಮಿಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿತು. ಆದರೆ ಜೇಮಿಸನ್ ಕೂಡ ಮಿಂಚುವಲ್ಲಿ ವಿಫಲವಾಗಿದ್ದರು. ಈ ಮೊದಲು 2017ರಲ್ಲಿ ಬೆನ್ ಸ್ಟೋಕ್ಸ್‌ಗೆ 14.50 ಕೋಟಿ ರೂ. ನೀಡಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಸೇರಿಸಿಕೊಂಡಿತು. ಸ್ಟೋಕ್ಸ್ ನಿರೀಕ್ಷೆಯಂತೆ 12 ಪಂದ್ಯಗಳಿಂದ 316 ರನ್ ಕಳೆಹಾಕಿ 12 ವಿಕೆಟ್ ಕಿತ್ತು ಮಿಂಚಿದ್ದರು.