ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ ಗೋಲ್ಡನ್ ಡಕ್ ಆಗುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ನಿರಾಸೆಗೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯ ವೀಕ್ಷಣೆಗಾಗಿ ರಾಹುಲ್ ಗೆಳತಿ ಆಥಿಯಾ ಶೆಟ್ಟಿ, ನಟ ಸುನೀಲ್ ಶೆಟ್ಟಿ ಆಗಮಿಸಿದ್ದರು. ಆದರೆ ಈ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ಆಗಮಿಸುತ್ತಿದ್ದಂತೆ ಟ್ರೆಂಟ್ ಬೌಲ್ಟ್ ಎಸೆದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಔಟ್ ಆದರು. ಈ ವೇಳೆ ಕ್ಯಾಮೆರಾಮ್ಯಾನ್ ಗ್ಯಾಲರಿಯಲ್ಲಿದ್ದ ಆಥಿಯಾ ಶೆಟ್ಟಿ ಕಡೆ ಫೋಕಸ್ ಮಾಡುತ್ತಿದ್ದಂತೆ ಆಥಿಯಾ, ರಾಹುಲ್ ಔಟ್ ಆಗಿರುವುದನ್ನು ಕಂಡು ನಿರಾಸೆಯಾದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ. ಇದನ್ನೂ ಓದಿ: ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ
Advertisement
Advertisement
166 ರನ್ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡ ನಾಯಕ ಕೆ.ಎಲ್ ರಾಹುಲ್ ಮತ್ತು ಕೆ. ಗೌತಮ್ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಡಿ ಕಾಕ್ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಡಿ ಕಾಕ್ ಆಟ 39 ರನ್ (32 ಎಸೆತ, 2 ಬೌಂಡರಿ, 1 ಸಿಕ್ಸ್)ಗೆ ಅಂತ್ಯಗೊಂಡಿತು. ಲಕ್ನೋ ಪರ ದೀಪಕ್ ಹೂಡಾ 25 ರನ್ ಮತ್ತು ಕೃನಾಲ್ ಪಾಂಡ್ಯ 22 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್
Advertisement
ಕೊನೆಯಲ್ಲಿ ದುಷ್ಮಂತ ಚಮೀರ 13 ರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅಜೇಯ 38 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಲಕ್ನೋ ಗೆಲುವಿಗೆ ಶ್ರಮಿಸಿದರು ಫಲ ನೀಡಲಿಲ್ಲ. ಅಂತಿಮವಾಗಿ ಲಕ್ನೋ ತಂಡ 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಲಕ್ನೋ ವಿರುದ್ಧ ರಾಜಸ್ಥಾನ ರಾಯಲ್ಸ್ 3 ರನ್ಗಳ ರೋಚಕ ಗೆಲುವು ಕಂಡಿತು.